ಜೈಪುರ, ಏಪ್ರಿಲ್ 15: ವಿದ್ಯೆ ಯಾರ ಸೊತ್ತು ಅಲ್ಲ. ವಿದ್ಯಾರ್ಜನೆಗೆ ವಯಸ್ಸಿನ ಮಿತಿ ಇಲ್ಲ. ಯಾವ ವಯಸ್ಸಿನವರಾದರು ಶಿಕ್ಷಣವನ್ನು ಪಡೆಯಬಹು. ರಾಜಸ್ಥಾನದ ಓರ್ವ ನಿವೃತ್ತ ಯೋಧ ತಮ್ಮ 55ನೇ ವಯಸ್ಸಿನಲ್ಲಿ 138 ಪದವಿಗಳನ್ನು ಪಡೆದಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ ಖಿರೋಡ್ ಗ್ರಾಮದ ನಿವಾಸಿ ದಶರಥ್ ಸಿಂಗ್ (55) ಅವರು 138 ಪದವಿ, ಡಿಪ್ಲೊಮಾ ಮತ್ತು ಪ್ರಮಾಣಪತ್ರಗಳನ್ನು ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ದಶರಥ್ ಸಿಂಗ್ ಅವರು ಇತ್ತೀಚೆಗೆ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ವೇದಾಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ದಶರಥ್ ಅವರು ಶಿಕ್ಷಣ ಕ್ಷೇತ್ರದಲ್ಲಿಇಂಡಿಯಾ ಬುಕ್ ಆಫ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ 11 ವಿಶ್ವ ದಾಖಲೆಗಳನ್ನು ಮಾಡಿದ್ದಾರೆ. ದೇಶ ಸೇವೆಯಿಂದ ಜ್ಞಾನ ಸೇವೆಗೆ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ದಶರಥ್ ಅವರು 1988ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿ 16 ವರ್ಷಗಳ ಕಾಲ ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. ಸೈನಿಕ ಜೀವನದ ಕಠಿಣತೆಗಳ ನಡುವೆಯೂ ಅವರು ತಮ್ಮ ಶಿಕ್ಷಣದ ಮೇಲಿನ ಬದ್ಧತೆಯನ್ನು ಕಾಪಾಡಿಕೊಂಡರು. ಪ್ರತಿ ವರ್ಷ ಸಿಗುವ ಎರಡು ತಿಂಗಳ ರಜೆಯಲ್ಲಿ ಅವರು ಪರೀಕ್ಷೆಗಳನ್ನು ಬರೆಯಲು ಮತ್ತು ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದರು. 2004ರಲ್ಲಿ ನಿವೃತ್ತಿಯಾದ ನಂತರ, ಅವರು ಸಂಪೂರ್ಣವಾಗಿ ಶಿಕ್ಷಣದತ್ತ ತೊಡಗಿಸಿಕೊಂಡರು.ದಾಖಲೆ ನಿರ್ಮಿಸಿದ ಶೈಕ್ಷಣಿಕ ಪಯಣ ದಶರಥ್ ಅವರು 3 ಪಿಎಚ್‌ಡಿ, 7 ಪದವಿ, 46 ಸ್ನಾತಕೋತ್ತರ ಪದವಿ, 23 ಡಿಪ್ಲೊಮಾ, ಸೇನೆಗೆ ಸಂಬಂಧಿಸಿದ 7 ಪದವಿ ಹಾಗೂ 52 ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. IGNOU, ಜೈನ್ ವಿಶ್ವವಿದ್ಯಾಲಯ ಸೇರಿದಂತೆ ಪ್ರಸಿದ್ಧ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸಿಯಾಚಿನ್ ದಿನ: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಭಾರತೀಯ ಸೇನೆಯ ಅಪ್ರತಿಮ ಸಾಹಸ