ಶ್ರೀನಗರ, ಮಾ.10: ಭಾರತೀಯ ಗಡಿ ನಿಯಂತ್ರಣ ರೇಖೆ (LOC) ದಾಟಿ ಒಳನುಸುಳುತ್ತಿದ್ದ ಪಾಕಿಸ್ತಾನ ಬೆಂಬಲಿತ ಓರ್ವ ಉಗ್ರನನ್ನು (Terrorist) ಭಾರತೀಯ ಸೇನೆ (Indian Army) ಹೊಡೆದುರುಳಿಸಿದೆ. ಜಮ್ಮು ಮತ್ತು ಕಾಶ್ಮೀರದ ನೌಶೇರಾ ಪ್ರದೇಶದ ಝಾಂಗರ್ ಸೆಕ್ಟರ್‌ನಲ್ಲಿ ಇರುವ ಎಲ್‌ಒಸಿ ದಾಟಿ ಮಂಗಳವಾರ ಇಬ್ಬರು ಉಗ್ರರು ಒಳನುಸುಳುತ್ತಿದ್ದರು. ಕೂಡಲೇ ಕಾರ್ಯಾಚರಣೆಗೆ ಇಳಿದ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ (White Knight Corps) ಓರ್ವ ಉಗ್ರನನ್ನು ಸೆದೆಬಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್‌ಒಸಿ ಬಳಿ ಇಬ್ಬರು ಉಗ್ರರ ಚಲನವಲನದ ಬಗ್ಗೆ ಗುಪ್ತಚರ ಇಲಾಖೆಯು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಮಾಹಿತಿ ನೀಡಿದೆ. ಕೂಡಲೆ ಕಾರ್ಯಪ್ರವೃತ್ತವಾದ ವೈಟ್ ನೈಟ್ ಕಾರ್ಪ್ಸ್ ಪಡೆ ಉಗ್ರರನ್ನು ಸೆದೆಬಡಿಯುವಲ್ಲಿ ಯಶಸ್ವಿಯಾಯಿತು. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೈಟ್ ನೈಟ್ ಕಾರ್ಪ್ಸ್, “ನೌಶೇರಾ ಪ್ರದೇಶದ ಝಾಂಗರ್ ಭಾಗದಲ್ಲಿ ಎಲ್‌ಒಸಿ ಸಮೀಪ ಇಬ್ಬರು ಉಗ್ರರ ಚಲನವಲನದ ಬಗ್ಗೆ 2026ರ ಮಾರ್ಚ್ 10 ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದವು.” “ತಕ್ಷಣವೇ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದ ನಾವು (ವೈಟ್ ನೈಟ್ ಕಾರ್ಪ್ಸ್ ಸೈನಿಕರು) ಉಗ್ರರ ನುಸುಳುವ ಪ್ರಯತ್ನವನ್ನು ಯಶಸ್ವಿಯಾಗಿ ವಿಫಲಗೊಳಿಸಿದೆವು. ಈ ಸಂದರ್ಭದಲ್ಲಿ ಉಗ್ರರು ಮತ್ತು ನಮ್ಮ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಬೆಂಬಲಿತ ಓರ್ವ ಉಗ್ರನನ್ನು ಹೊಡೆದುರುಳಿಸಲಾಯಿತು. ಇದರಿಂದ ಎಲ್‌ಒಸಿ ದಾಟುವ ಉಗ್ರರ ಯತ್ನವನ್ನು ಸಂಪೂರ್ಣವಾಗಿ ತಡೆಯಲಾಯಿತು”ಎಂದು ತಿಳಿಸಿದೆ. https://twitter.com/Whiteknight_IA/status/2031332474991816860 ಮತ್ತೊಬ್ಬ ಉಗ್ರನಿಗಾಗಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ. ಸೇನೆ ನೀಡಿರುವ ಮಾಹಿತಿಯ ಪ್ರಕಾರ, ಆ ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಮತ್ತೊಬ್ಬ ಉಗ್ರನನ್ನು ಪತ್ತೆಹಚ್ಚವ ಕಾರ್ಯ ನಡೆಯುತ್ತಿದೆ. ಈ ಪ್ರದೇಶದ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಭದ್ರತಾ ಪಡೆಗಳು ಹೆಚ್ಚಿನ ಎಚ್ಚರಿಕೆಯಲ್ಲಿ ಕಾರ್ಯಾಚರಣೆ ಮುಂದುವರಿಸುತ್ತಿವೆ” ಎಂದು ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation New LPG Guidelines: ಸಿಲಿಂಡರ್ ಬುಕ್ಕಿಂಗ್ನಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ರೈತರಿಗೆ ಸಿಹಿ ಸುದ್ದಿ: ಮಾರ್ಚ್ 13 ರಂದು ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಜಮೆ