ಗಾಂಧಿ ಮತ್ತು ನೆಹರೂಗೆ ದೇವರು ಅಂತಹ ಯಾವ ರಕ್ಷಾಕವಚವನ್ನು ಕೊಟ್ಟಿದ್ದನು..! ಯಾವ ಕಾರಣದಿಂದಾಗಿ ಬ್ರಿಟಿಷರು ಈ ಇಬ್ಬರನ್ನೂ ಗಲ್ಲುಶಿಕ್ಷೆ ದೂರದ ವಿಷಯ, ಕನಿಷ್ಠ ಒಂದು ಲಾಠಿ ಸಹ ಬೀಸಲಿಲ್ಲ ಏಕೆ…! ನಾವು ಓದಿದ್ದು ಅವಾಗಿನ ದುಷ್ಟ ಕಾಂಗ್ರೆಸಿಗರು ಬರೆಸಿದ ಏಕಸ್ವಾಮ್ಯದ, ಕಪೋಲಕಲ್ಪಿತ, ಸುಳ್ಳು ಇತಿಹಾಸ. ಸ್ವಾತಂತ್ರ್ಯ ಬರೀ ಉಪವಾಸ ಕೂತಿದ್ದಕ್ಕಾಗಿ ಬರಲಿಲ್ಲ, ಬ್ರಿಟಿಷರ ಬಂದೂಕಿನ ಗುಂಡಿಗೆ ತಮ್ಮ ಎದೆಯನ್ನು ಕೊಟ್ಟು ಹೋರಾಟ ಮಾಡಿದ ಸಾವಿರಾರು ಕ್ರಾಂತಿಕಾರಿಗಳ ಪಾಲೂ ಇದೆ. ಅಂತಹ ಅದಮ್ಯ ಚೈತನ್ಯ ಭರಿತ ಹುತಾತ್ಮ, ತನ್ನ ಧೈರ್ಯದಿಂದಲೇ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್. ಭಗತ್ ಸಿಂಗ್ ಅವರು 1907ರ ಸೆಪ್ಟೆಂಬರ್ 27 ರಂದು ಪಂಜಾಬ್‌ನ ಲೈಲ್‌ಪುರ ಜಿಲ್ಲೆಯ ಬಂಗಾ ಗ್ರಾಮದಲ್ಲಿ (ಈಗಿನ ಪಾಕಿಸ್ತಾನ) ತಂದೆ ‘ಸರ್ದಾರ್ ಕಿಶನ್ ಸಿಂಗ್’ ಮತ್ತು ತಾಯಿ ವಿದ್ಯಾವತಿ ಎಂಬ ದೇಶಭಕ್ತ ಸಿಖ್ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಮತ್ತು ಇಬ್ಬರು ಚಿಕ್ಕಪ್ಪಂದಿರಾದ ‘ಅಜಿತ್ ಸಿಂಗ್’ ಮತ್ತು ‘ಸ್ವರ್ಣ್ ಸಿಂಗ್’ ಬ್ರಿಟಿಷರ ವಿರುದ್ಧದ ಚಟುವಟಿಕೆಗಳ ಕಾರಣ ಜೈಲುಪಾಲಾಗಿದ್ದರು. ಭಗತ್ ಸಿಂಗ್ ಜನಿಸಿದ ದಿನ, ಅವರ ತಂದೆ ಮತ್ತು ಚಿಕ್ಕಪ್ಪ ಜೈಲಿನಿಂದ ಬಿಡುಗಡೆಯಾದರು. ಈ ಶುಭ ಕ್ಷಣದ ಸಂದರ್ಭದಲ್ಲಿ ಭಗತ್ ಸಿಂಗ್ ಅವರ ಮನೆಯಲ್ಲಿ ಸಂತೋಷ ಇನ್ನಷ್ಟು ಹೆಚ್ಚಾಯಿತು. ಭಗತ್ ಸಿಂಗ್ ಅವರ ಅಜ್ಜಿ ಮಗುವಿಗೆ ‘ಭಾಗಾಂ ವಾಲಾ’ (ಅದೃಷ್ಟವಂತ) ಎಂದು ಹೆಸರಿಟ್ಟರು. ನಂತರ ಅವರನ್ನು ‘ಭಗತ್ ಸಿಂಗ್’ ಎಂದು ಕರೆಯಲಾಯಿತು. ಆಗ ಭಗತ್ ಸಿಂಗ್ 12 ವರ್ಷದ ಬಾಲಕ. 1919ರ ಏಪ್ರಿಲ್ 13 ರಂದು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವಾದ ದಿನ. ಅವತ್ತು ಶಾಲೆಯಿಂದ ನೇರವಾಗಿ ಹತ್ಯಾಕಾಂಡವಾದ ಸ್ಥಳಕ್ಕೆ ಹೋಗಿ ಅಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಕಳೆದುಕೊಂಡಿವರನ್ನು ಕಂಡು ದುಃಖಿತನಾಗಿ ಅಲ್ಲಿಂದ ರಕ್ತ ಸಿಕ್ತ ಮಣ್ಣನ್ನು ತಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದನು. ಈ ಅಮಾನವೀಯ ಕೃತ್ಯವನ್ನು ನೋಡಿದ ಅವರ ಮನಸ್ಸು ದೇಶವನ್ನು ಸ್ವತಂತ್ರವಾಗಿಸುವ ಬಗ್ಗೆ ಯೋಚಿಸಲು ಪ್ರಾರಂಭಿಸಿತು. ಆಗಲೇ ತನ್ನ ಮನೆಯ ಜಮೀನಿನಲ್ಲಿ ಬೆಳೆ ಬೆಳೆಯುವ ಬದಲು ಬ್ರಿಟಿಷರ ವಿರುದ್ಧ ಹೋರಾಡಲು ಬಂದೂಕು, ಶಸ್ತ್ರಗಳ ಬೆಳೆ ಬೆಳೆಯುತ್ತೇನೆಂದು ಹೇಳಿದ ಧೈರ್ಯಶಾಲಿ ಬಾಲಕ ತಮ್ಮ 14ನೇ ವಯಸ್ಸಿನಲ್ಲಿ ತಮ್ಮ ಹಳ್ಳಿಯಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರಾಗಿ ಬದಲಾದರು. ಮುಂದೆ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಬಿಟ್ಟರು. ಮುಂದೆ ಮನೆಯಲ್ಲಿ ಮದುವೆ ಮಾಡುವ ಸಿದ್ಧತೆಗಳು ನಡೆದವು. ಆಗ ಅವರು ಲಾಹೋರ್‌ನಿಂದ ಕಾನ್ಪುರಕ್ಕೆ ಓಡಿಹೋದರು. 14 ನೇ ವಯಸ್ಸಿನಿಂದ ಅವರು ಪಂಜಾಬ್‌ನ ಕ್ರಾಂತಿಕಾರಿ ಸಂಸ್ಥೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ನಂತರ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಎಷ್ಟು ಮುಳುಗಿಹೋದರು ಎಂದರೆ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮೀಸಲಿಟ್ಟರು. ಭಗತ್ ಸಿಂಗ್ ಭಾರತದ ಸ್ವಾತಂತ್ರ್ಯಕ್ಕಾಗಿ ನೌಜವಾನ್ ಭಾರತ್ ಸಭಾ ಎಂಬ ಸಂಘವನ್ನು ಸ್ಥಾಪಿಸಿದರು. ಕಾಕೋರಿ ಪ್ರಕರಣದಲ್ಲಿ, ರಾಂಪ್ರಸಾದ್ ‘ಬಿಸ್ಮಿಲ್’ ಸೇರಿದಂತೆ ನಾಲ್ವರು ಕ್ರಾಂತಿಕಾರಿಗಳನ್ನು ಗಲ್ಲು ಶಿಕ್ಷೆ ಮತ್ತು ಇತರ 16 ಜನರನ್ನು ಜೈಲಿಗೆ ಹಾಕಿದ್ದರಿಂದ ಅವರು ತುಂಬಾ ಅಸಮಾಧಾನಗೊಂಡರು. ಚಂದ್ರಶೇಖರ್ ಆಜಾದ್ ಅವರ ಪಕ್ಷ ಹಿಂದೂಸ್ತಾನ್ ರಿಪಬ್ಲಿಕನ್ ಅಸೊಸಿಯೇಶನ್ ಸೇರಿಕೊಂಡು ಪಕ್ಷಕ್ಕೆ ‘ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ ಎಂಬ ಹೊಸ ಹೆಸರನ್ನು ನೀಡಿದರು. 1928 ರಲ್ಲಿ, ಸೈಮನ್ ಆಯೋಗದ ಬಹಿಷ್ಕಾರಕ್ಕಾಗಿ ಭಯಾನಕ ಪ್ರದರ್ಶನಗಳು ನಡೆದವು. ಈ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ ಆಡಳಿತದ ಲಾಠಿ ಚಾರ್ಜ್‌ನಿಂದ ಗಾಯಗೊಂಡು ಲಾಲಾ ಲಜಪತ್ ರಾಯ್ ನಿಧನರಾದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಒಂದು ರಹಸ್ಯ ಯೋಜನೆಯ ಭಾಗವಾಗಿ, ಭಗತ್ ಸಿಂಗ್ ಅವರು ಲಾಹೋರಿನಲ್ಲಿ ಪೊಲೀಸ್ ಅಧೀಕ್ಷಕ ಸ್ಕಾಟ್‌ನನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದರು. 17 ಡಿಸೆಂಬರ್ 1928 ರಂದು, ರಾಜಗುರು ಒಂದು ಗುಂಡು ಮತ್ತು ಭಗತ್ ಸಿಂಗ್ 3 -4 ಗುಂಡು ಎ.ಎಸ್. ಪಿ. ಜಾನ್ ಸಾಂಡರ್ಸ್‌ಗೆ ಹಾರಿಸಿದರು (ಎಸ್ ಪಿ. ಗೆ ಗುಂಡು ಹಾರಿಸುವ ಬದಲು). ಭಗತ್ ಸಿಂಗ್ ರಕ್ತಪಾತದ ಪರವಾಗಿರಲಿಲ್ಲವಾದರೂ, ಕಾರ್ಲ್ ಮಾರ್ಕ್ಸ್ ಅವರ ತತ್ವಗಳಿಂದ ಸಂಪೂರ್ಣವಾಗಿ ಪ್ರಭಾವಿತರಾಗಿದ್ದರು. ಬ್ರಿಟಿಷರ ನೀತಿಗಳ ಬಗ್ಗೆ ಹಿಂದೂಸ್ತಾನಿಯ ಹೃದಯದಲ್ಲಿ ಅಸಮಾಧಾನವಿದೆ ಎಂದು ಬ್ರಿಟಿಷರು ತಿಳಿದುಕೊಳ್ಳಬೇಕು ಎಂದು ಬಯಸಿದ್ದರು. ಅವರ ಪಕ್ಷದವರು ದೆಹಲಿಯ ಕೇಂದ್ರ ವಿಧಾನಸಭೆಯಲ್ಲಿ ಬಾಂಬ್ ಎಸೆಯಲು ಯೋಜಿಸಿದರು. ಈ ಕೆಲಸಕ್ಕೆ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಅವರ ಹೆಸರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. 1929ರ ಏಪ್ರಿಲ್ 8 ರಂದು ಅವರು “ಇನ್‌ಕಲಾಬ್-ಜಿಂದಾಬಾದ್, ಸಾಮ್ರಾಜ್ಯಶಾಹಿ-ಮುರ್ದಾಬಾದ್!” ಘೋಷಣೆ ಕೂಗುತ್ತ ಬಾಂಬ್ ಎಸೆದರು. ಅವರನ್ನು ಬಂಧಿಸಲಾಯಿತು. ಲಾಹೋರಿನ ಸಾಂಡರ್ಸ್ ಕೊಲೆ ಕೇಸಿನಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಮರಣದಂಡನೆ ಶಿಕ್ಷೆ ಮತ್ತು ಬಟುಕೇಶ್ವರ ದತ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 1931ರ ಮಾರ್ಚ್ 23 ರಂದು ಭಗತ್ ಸಿಂಗ್ ಮತ್ತು ಅವರ ಇಬ್ಬರು ಸಹಚರರಾದ ಸುಖದೇವ್ ಮತ್ತು ರಾಜ್‌ಗುರು ಅವರನ್ನು ಗಲ್ಲಿಗೇರಿಸಲಾಯಿತು. ಆ ಸಮಯದಲ್ಲಿ ಭಗತ್‌ಗೆ ಕೇವಲ 23 ವರ್ಷ ವಯಸ್ಸಾಗಿತ್ತು. ಬ್ರಿಟಿಷರು ಅವರ ಶವಗಳನ್ನು ಅವರ ಮನೆಗೇ ಕೊಡದೇ ಫಿರೋಜ್‌ಪುರದ ಸಟ್ಲೆಜ್ ನದಿಯ ದಡದಲ್ಲಿ ದಹನ ಮಾಡಿದರು, ಯಾಕೆ ಗೊತ್ತಾ ಮುಂದೆ ಇನ್ನೊಬ್ಬ ಕ್ರಾಂತಿಕಾರಿ ದೇಶ ಭಕ್ತ ಹುಟ್ಟಬಾರದೆಂದು. ಲೇಖಕರು: ಅವ್ವಪ್ಪ ಹೆಗಡ್ಯಾಳ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಹೋಳಿ ಹುಣ್ಣಿಮೆ ಹಿಂದೆ ಇದೆ 2 ಸಾವಿರ ನಾಗಾಸಾಧುಗಳ ಬಲಿದಾನದ ಕಥೆ ಕನ್ನಡಿಗರಿಗೆ ಇಂದು ವಿಜಯ ದಿನ: ಹರ್ಷವರ್ಧನನ್ನು ಸೋಲಿಸಿದ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ