ಬೆಂಗಳೂರ, ಮಾ.10: ಕರ್ನಾಟಕ ರೇಷ್ಮೆ ಕೈಗಾರಿಕೆಗಳ ನಿಗಮ ನಿಯಮಿತ (KSIC) ಸಂಸ್ಥೆ ಪ್ರಸಿದ್ಧ ಮೈಸೂರು ಸಿಲ್ಕ್ ಸೀರೆಗಳ (Mysore Silk Saree) ಆನ್‌ಲೈನ್ (Online) ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಲಭ್ಯವಿರುವ ಸಂಗ್ರಹಕ್ಕಿಂತ ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ರೇಷ್ಮೆ ಸಚಿವ ಕೆ. ವೆಂಕಟೇಶ್ ತಿಳಿಸಿದರು. ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಟಿ. ಎಸ್. ಶ್ರೀವತ್ಸ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರು ರೇಷ್ಮೆ ಸೀರೆಗಳಿಗೆ ಬೇಡಿಕೆ ಇದೆ. ಆದರೆ, ದಿನಕ್ಕೆ 300 ರಿಂದ 400 ಸೀರೆಗಳನ್ನು ಮಾತ್ರ ಉತ್ಪಾದನೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸೀರೆಗಳ ಉತ್ಪಾದನೆ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತದೆ. . ಗ್ರಾಹಕರಿಗೆ ಈಗ ಸೀರೆಗಳನ್ನು ಕೇವಲ ಕೆಎಸ್‌ಐಸಿ ಅಧಿಕೃತ ಮಳಿಗೆಗಳಲ್ಲಿ ಮಾತ್ರ ಖರೀದಿಸುವ ಅವಕಾಶ ನೀಡಲಾಗಿದೆ ಎಂದರು. ಶುದ್ಧ ಮಲ್ಬರಿ ರೇಷ್ಮೆಯಿಂದ ತಯಾರಾಗುವ ಮತ್ತು ಚಿನ್ನದ ಜರಿ ಹಾಗೂ ಬೆಳ್ಳಿಯ ನೂಲಿನಿಂದ ನೆಯ್ದ ಮೈಸೂರು ಸಿಲ್ಕ್ ಸೀರೆಗಳು GI ಟ್ಯಾಗ್ ಹೊಂದಿದ್ದು, ಇವುಗಳಿಗೆ ದೇಶದಾದ್ಯಂತ ಭಾರೀ ಬೇಡಿಕೆ ಇದೆ. ಮೈಸೂರು ಸಿಲ್ಕ್ ಸೀರೆಗಳ ಉತ್ತಮ ಗುಣಮಟ್ಟ ಮತ್ತು ಹೆಚ್ಚುತ್ತಿರುವ ಜನಪ್ರಿಯತೆ ಕಾರಣದಿಂದ ಆನ್‌ಲೈನ್ ಆರ್ಡರ್‌ಗಳು ಹೆಚ್ಚಾಗಿವೆ. ಉತ್ಪಾದನೆ ಹೆಚ್ಚಾದ ನಂತರ ಮತ್ತು ಸರಬರಾಜು ಸ್ಥಿರವಾದ ಬಳಿಕ ಆನ್‌ಲೈನ್ ಮಾರಾಟವನ್ನು ಮತ್ತೆ ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಲಿಂಡರ್ ಬುಕ್ಕಿಂಗ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಕೆಎಸ್‌ಐಸಿ ಸಂಸ್ಥೆ 1912ರಿಂದ ಮೈಸೂರು ಸಿಲ್ಕ್ ಸೀರೆಗಳನ್ನು ಉತ್ಪಾದಿಸುತ್ತಿದೆ. ಪ್ರಸ್ತುತ ಸಂಸ್ಥೆ ಪ್ರತಿದಿನ ಸುಮಾರು 300 ರಿಂದ 400 ಸೀರೆಗಳನ್ನು ತಯಾರಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಒಟ್ಟು ಸುಮಾರು 3.1 ಲಕ್ಷ ಸೀರೆಗಳ ಉತ್ಪಾದಿಸಿದೆ. ಕೆಎಸ್‌ಸಿಎ 2024–25ರಲ್ಲಿ ಸಂಸ್ಥೆ 101 ಕೋಟಿ ರೂ. ಲಾಭ ಗಳಿಸಿದ್ದು, 2023–24ರಲ್ಲಿ 73 ಕೋಟಿ ರೂ. ಮತ್ತು 2022–23ರಲ್ಲಿ 46 ಕೋಟಿ ರೂ. ಆದಾಯ ಗಳಿಸಿದೆ. ಇದು ಮೈಸೂರು ಸಿಲ್ಕ್ ಸೀರೆಗಳಿಗೆ ಇರುವ ಭಾರೀ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಹುಬ್ಬಳ್ಳಿ, ಬೆಂಗಳೂರು, ಕಲಬುರಗಿಯಿಂದ ಹೊರಡುವ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಬೇಸಿಗೆ ಆರಂಭ: ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ