ನವದೆಹಲಿ, ಮಾ.10: ಮಧ್ಯಪ್ರಾಚ್ಯದಲ್ಲಿ ಯುದ್ಧ (Middle East War) ನಡೆಯುತ್ತಿದ್ದು, ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಯುದ್ಧದ ಪರಿಣಾಮ ನೇರವಾಗಿ ಭಾರತದ ಮೇಲೆ ಬೀಳಲಾರಂಭಿಸಿದೆ. ದೇಶದಲ್ಲಿ ಅಡುಗೆ ಅನಿಲ, ಇಂಧನ ಪೂರೈಕೆಗೆ ಅಡಚಣೆ ಎದುರಾಗುವ ಸಾಧ್ಯತೆ ಇದೆ. ಈ ನಡುವೆ ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಕೃತಕ ಅಭಾವ ಮತ್ತು ಮೋಸದಾಟವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಬುಕ್ಕಿಂಗ್ ಅವಧಿಯನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಪ್ರಕಾರ ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಹೆಚ್ಚಳ ಮಾಡಲಾಗಿದೆ. ಡಬಲ್ ಬುಕ್ಕಿಂಗ್‌ಗಳ ನಡುವಿನ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಏರಿಕೆ ಮಾಡಿದೆ. ಈಗ ಯುದ್ಧದ ಭೀತಿಯಿಂದ ಜನರು ಕೇವಲ 15 ದಿನಗಳಲ್ಲೇ ಬುಕ್ಕಿಂಗ್ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪೆಟ್ರೋಲಿಯಂ ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ. ಇದನ್ನೂ ಓದಿ: ಹುಬ್ಬಳ್ಳಿ, ಬೆಂಗಳೂರು, ಕಲಬುರಗಿಯಿಂದ ಹೊರಡುವ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಈ ಹಿಂದೆ 55 ದಿನಗಳಿಗೊಮ್ಮೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬುಕ್ ಮಾಡಿದವರೂ ಈಗ 15 ದಿನಗಳಲ್ಲಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಆರಂಭಿಸಿರುವ ನಿದರ್ಶನಗಳು ಬೆಳಕಿಗೆ ಬಂದಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಟ್ವಿಟರ್ ಪೋಸ್ಟ್ Govt Sources say – On LPG:*In order to stop hoarding and black marketing, LPG booking period has been increased from 21 to 25 days*There were instances where people who were earlier booking LPG cylinders in 55 Days has started booking LPG cylinders in 15 days.*Govt has… pic.twitter.com/NMaEJTqADy— ANI (@ANI) March 9, 2026 ಒಂದು ಸಿಲಿಂಡರ್ ಬುಕ್ಕಿಂಗ್ ಮಾಡಿದ 25 ದಿನಗಳ ನಂತರವಷ್ಟೇ ಮತ್ತೊಂದು ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಿದೆ. ಬಿಕ್ಕಟ್ಟಿಗೆ ಮುನ್ನ ಸಿಲಿಂಡರ್ ಬುಕ್ಕಿಂಗ್ ಅಂತರ 15 ದಿನಗಳಿಷ್ಟಿತ್ತು. ಎರಡು ದಿನಗಳ ಹಿಂದೆ ಇದನ್ನು 21 ದಿನಗಳಿಗೆ ಹೆಚ್ಚಿಸಲಾಗಿತ್ತು. ಈಗ ಮತ್ತಷ್ಟು ಕಾಯಬೇಕಿದೆ. ವಾಣಿಜ್ಯ ಬಳಕೆ ಗ್ರಾಹಕರಿಗಿಂತ ಮನೆ ಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ʼಮನೆ ಬಳಕೆಯ ಗ್ರಾಹಕರ ಹಿತವೇ ನಮಗೆ ಮುಖ್ಯʼ ಎಂದು ಸರ್ಕಾರ ತಿಳಿಸಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation NEET UG 2026 ನೋಂದಣಿ ಹಾಗೂ ಶುಲ್ಕ ಪಾವತಿ ದಿನಾಂಕ ವಿಸ್ತರಣೆ ಪಾಕ್ ಉಗ್ರರು ಒಳನುಸುಳುವ ಯತ್ನ: ಓರ್ವ ಹತ