Good Frida: Special train from Hubli, Karwar, Belgaum to Bangaloreರೈಲು

ಹುಬ್ಬಳ್ಳಿ, ಏಪ್ರಿಲ್‌ 2: ಗುಡ್ ಫ್ರೈಡೆ (Good Friday) ಮತ್ತು ವಾರಾಂತ್ಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಡೆಯಲು ನೈರುತ್ಯ ರೈಲ್ವೆ ವಲಯ (South Western Railway) ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ವಿಶೇಷ ರೈಲುಗಳು ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳನ್ನು ಸಂಪರ್ಕಿಸುತ್ತವೆ.

  1. ರೈಲು ಸಂಖ್ಯೆ 07347: ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸಪ್ರೆಸ್‌ ರೈಲು ಎಸ್‌ಎಸ್‌ಎಸ್‌ ಹುಬ್ಬಳ್ಳಿಯಿಂದ ಏಪ್ರಿಲ್ 2 ಬೆಳಿಗ್ಗೆ 7:05ಕ್ಕೆ ಹುಬ್ಬಳ್ಳಿಯಿಂದ ಹೊರಟು, ಮರುದಿನ ದಿನ ಬೆಳಗ್ಗೆ 7:00ಕ್ಕೆ ಕೊಲ್ಲಂ ತಲುಪಲಿದೆ.
  2. ರೈಲು ಸಂಖ್ಯೆ 07348: ಕೊಲ್ಲಂ-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸಪ್ರೆಸ್‌ ರೈಲು ಕೊಲ್ಲಂನಿಂದ ಏಪ್ರಿಲ್ 3 ರಂದು ಬೆಳಿಗ್ಗೆ 10:45ಕ್ಕೆ ಹೊರಟು, ಮರುದಿನ ಬೆಳಿಗ್ಗೆ 10:40ಕ್ಕೆ ಹುಬ್ಬಳ್ಳಿ ತಲುಪಲಿದೆ.
  3. ರೈಲು ಸಂಖ್ಯೆ 06503: ಎಸ್‌ಎಂವಿಟಿ ಬೆಂಗಳೂರು – ಬೆಳಗಾವಿ ವಿಶೇಷ ಎಕ್ಸಪ್ರೆಸ್‌ ರೈಲು ಏಪ್ರಿಲ್ 2ರ ರಾತ್ರಿ 7:00ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 7:35ಕ್ಕೆ ಬೆಳಗಾವಿಗೆ ತಲುಪುತ್ತದೆ.
  4. ರೈಲು ಸಂಖ್ಯೆ 06504: ಬೆಳಗಾವಿ – ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸಪ್ರೆಸ್‌ ರೈಲು ಏಪ್ರಿಲ್‌ 05 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ನಸುಕಿನ ಜಾವ 5:00ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪುತ್ತದೆ.
  5. ರೈಲು ಸಂಖ್ಯೆ 06271: ಯಶವಂತಪುರ – ಮಡಗಾಂ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 2 ರಂದು ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಸಂಜೆ 5:30 ಮಡಗಾಂ ತಲಪುತ್ತದೆ.
  6. ರೈಲು ಸಂಖ್ಯೆ 06272: ಮಡಗಾಂ – ಬೆಂಗಳೂರು ಕಂಟೋನ್ಮೆಂಟ್‌ ವಿಶೇಷ ಎಕ್ಸಪ್ರೆಸ್‌ ರೈಲು ಏಪ್ರಿಲ್ 5 ರಂದು ಸಂಜೆ 5:30ಕ್ಕೆ ಮಡಗಾಂನಿಂದ ಹೊರಟು, ಮರುದಿನ ಬೆಳಗ್ಗೆ 11ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ತಲುಪುತ್ತದೆ.
  7. ರೈಲು ಸಂಖ್ಯೆ 06551: ಯಶವಂತಪುರ-ಕಣ್ಣೂರು ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 2, ರಂದು ಬೆಳಿಗ್ಗೆ 11:50ಕ್ಕೆ ಯಶವಂತಪುರದಿಂದ ಹೊರಟು, ಮರುದಿನ ಸಂಜೆ 3:00ಕ್ಕೆ ಕಣ್ಣೂರು ತಲುಪುತ್ತದೆ.
  8. ರೈಲು ಸಂಖ್ಯೆ 06552: ಕಣ್ಣೂರು-ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 3 ರಂದು ಬೆಳಿಗ್ಗೆ 8.45ಕ್ಕೆ ಕಣ್ಣೂರಿನಿಂದ ಹೊರಟು, ಅದೇ ದಿನ ರಾತ್ರಿ 9.30ಕ್ಕೆ ಯಶವಂತಪುರ ತಲುಪಲಿದೆ.

ಪ್ರಯಾಣಿಕರು ರೈಲು ವೇಳಾಪಟ್ಟಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://indianrailways.gov.in/ ಅಥವಾ NTES ಆಪ್‌ನ್ನು ಬಳಸಬಹುದು. ಅಥವಾ 139 ಗೆ ಕರೆಮಾಡಬಹುದು.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *