ಧಾರವಾಡ, ಏಪ್ರಿಲ್ 4: ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಕಲಿಸುವ ಜೊತೆಗೆ ಶಾಲಾ ಪಠ್ಯಕ್ರಮವನ್ನು ಕಲಿಸುವ ಗುರುಕುಲ (Gurukul) ಶಿಕ್ಷಣ ಧಾರವಾಡದಲ್ಲಿ (Dharwad) ಆರಂಭವಾಗಿದೆ. ಧಾರವಾಡದಿಂದ 24 ಕಿಮೀ ದೂರದಲ್ಲಿರುವ ತಿಮ್ಮಾಪುರ-ಎಂ-ತಡಕೋಡ್‌ನಲ್ಲಿ ಕಳೆದ ಐದು ವರ್ಷಗಳಿಂದ ವಂದೇ ಮಾತರಂ ಗುರುಕುಲ ಕಾರ್ಯನಿರ್ವಹಿಸುತ್ತಿದೆ. ಇದೀಗ, ವಂದೇ ಮಾತರಂ ಗುರುಕುಲ ಶಿಕ್ಷಣದ ಪ್ರವೇಶಾತಿಗಳು ಆರಂಭವಾಗಿವೆ. ಸ್ವಾಮಿ ವಿವೇಕಾನಂದರ ಆದರ್ಶಗಳಿಂದ ಮತ್ತು ಚಿಂತನೆಗಳಿಂದ ಪ್ರೇರಿತವಾದ ಈ ಗುರುಕುಲವು, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬೇರುಗಳಲ್ಲಿ ನೆಲೆಯೂರಿದ, ಮೌಲ್ಯಾಧಾರಿತ ಹಾಗೂ ಉಚಿತ ವಸತಿ ಶಿಕ್ಷಣವನ್ನು ಕಳೆದ ಐದು ವರ್ಷಗಳಿಂದ ನೀಡುತ್ತದೆ. ಮಕ್ಕಳಿಗೆ ಇಲ್ಲಿ ಶೈಕ್ಷಣಿಕ ಪ್ರಗತಿಯ ಜೊತೆಗೆ ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಯ ಸಮಗ್ರ ಶಿಕ್ಷಣವನ್ನು ಒದಗಿಸಲಾಗುತ್ತದೆ. ಪ್ರತಿಯೊಬ್ಬ ಮಗುವಿನ ಸ್ವಧರ್ಮವನ್ನು ಗುರುತಿಸಿ ಪೋಷಿಸುವುದು ಗುರುಕುಲದ ಮುಖ್ಯ ಉದ್ದೇಶವಾಗಿದ್ದು, ಶಿಸ್ತು, ಆತ್ಮವಿಶ್ವಾಸ ಮತ್ತು ಜವಾಬ್ದಾರಿಯುತ ವ್ಯಕ್ತಿತ್ವವನ್ನು ರೂಪಿಸುವತ್ತ ಧ್ಯೇಯ ಹೊಂದಿದೆ. ವಂದೇ ಮಾತರಂ ಗುರುಕುಲದ 2026-27ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ (ಹುಡುಗರ) ದಾಖಲಾತಿ ಪ್ರಾರಂಭವಾಗಿದ್ದು, 4 ಮತ್ತು 5ನೇ ತರಗತಿ ನಂತರದ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. 6ನೇ ತರಗತಿಯಿಂದ ಪದವಿ ವ್ಯಾಸಂಗದವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಆನ್‌ಲೈನ್ https://forms.gle/p5W4Q3zrtMi5f1yR9 ಮೂಲಕ ಅರ್ಜಿ ಪತ್ರಿಕೆ ಸಲ್ಲಿಸಿ. ದಾಖಲಾತಿಗೂ ಮೊದಲು ಸಂದರ್ಶನ ಹಾಗೂ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಏಪ್ರಿಲ್ 14 (ಗುರುವಾರ) ಬೆಳಿಗ್ಗೆ 09:30 ಗಂಟೆಯಿಂದ ಸಂದರ್ಶನ ಹಾಗೂ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ವಂದೇ ಮಾತರಂ ಗುರುಕುಲಕ್ಕೆ 9-11 ವರ್ಷದ ಹುಡುಗರನ್ನು ದಾಖಲಿಸಬಹುದಾಗಿದೆ. ಪ್ರವೇಶಾತಿ ಕುರಿತಾದ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9916963664 / 8217474419 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation English Grammar ಪಾಠ 10: Interrogative, Possessive, Distributive and Proper Adjective English Grammar ಪಾಠ 10: What is an Adverb? ಕ್ರಿಯಾವಿಶೇಷಣ ಎಂದರೇನು?