The Story of Sage Chyavana and Princess Sukanyaಚ್ಯವನ ಮಹರ್ಷಿ

ಚ್ಯವನ ಮಹರ್ಷಿಗಳು ಭೃಗುಮಹರ್ಷಿಗಳ (Bhrugu Maharshi) ಪುತ್ರರು, ಇವರ ತಾಯಿ ಪುಲೋಮೆ ತಾಯಿ ಯನ್ನು ಪುಲೋಮನೆಂಬ ರಾಕ್ಷಸನು ಅಪಹರಿಸಿಕೊಂಡುಹೋಗಲು ಪ್ರಯತ್ನಿಸಿದಾಗ ಆಗ ತಾನೇ ಜನಿಸಿದ ಶಿಶುವಾದ ಚ್ಯವನರು ತಮ್ಮ ದೃಷ್ಟಿಯಿಂದಲೇ ರಾಕ್ಷಸನನ್ನು ಭಸ್ಮಮಾಡಿ ತಾಯಿಯನ್ನು ರಕ್ಷಿಸಿದರು.

ಮಹಾತೇಜಸ್ವಿಗಳಾದ ಚ್ಯವನರು ಸರೋವರವೊಂದರ ಬಳಿ ದೀರ್ಘವಾದ ತಪಸ್ಸನ್ನು ಆರಂಭಿಸಿದರು. ಅಲುಗಾಡದೆ ವೀರಾಸನದಲ್ಲಿ ಕುಳಿತು ಬಹಳ ವರ್ಷ ತಪಸ್ಸು ಮಾಡುತ್ತಿದ್ದ ಅವರ ಸುತ್ತಲೂ ಹುತ್ತವು ಬೆಳೆದು, ಬಳ್ಳಿಗಳಿಂದ ಮುಚ್ಚಿಹೋಯಿತು. ಆದರೂ ಚ್ಯವನರು ಸ್ಥಾಣುವಿನಂತೆ ಕುಳಿತು ತಮ್ಮ ಅನುಷ್ಠಾನವನ್ನು ಮುಂದುವರಿಸಿದ್ದರು.

ಬಳಿಗೆ ವಿಹಾರಾರ್ಥವಾಗಿ ತನ್ನ ಪರಿವಾರದೊಡನೆ ಆಗಮಿಸಿದನು. ಅವನ ಜೊತೆಯಲ್ಲಿ ಒಮ್ಮೆ ಆ ದೇಶದ ರಾಜನಾದ ಶರ್ಯಾತಿಯು ರಮ್ಯವಾಗಿದ್ದ ಆ ಸರೋವರದ ಅವನ ಒಬ್ಬಳೇ ಮಗಳಾದ ಸುಕನೈಯೂ ಬಂದಿದ್ದಳು.

ದೇವಯೋಗ್ಯವಾದ ಆಭರಣಗಳನ್ನು ಧರಿಸಿ, ಗೆಳತಿಯರೊಡನೆ ಸ್ನೇಚ್ಛೆಯಾಗಿ ವಿಹರಿಸುತ್ತಿದ್ದ ಸುಕನೆಯು ಆಕಸ್ಮಾತ್ತಾಗಿ ಚ್ಯವನಋಷಿಯಿದ್ದ ಹುತ್ತದ ಬಳಿಗೆ ಹೋದಳು. ಅದೇ ಸಮಯಕ್ಕೆ ಮಹರ್ಷಿಯು ಒಮ್ಮೆ ಕಣ್ಣುಗಳನ್ನು ತೆರೆದರು. ತೇಜಸ್ಸಿನಿಂದ ಮಿನುಗುತ್ತಿದ್ದರೆ ಮಹರ್ಷಿಯ ಕಣ್ಣುಗಳು, ಹುತ್ತದಲ್ಲಿ ಏನೋ ಶಬ್ದವಾದಂತಾಗಿ ಸುಕನ್ಯ ಅದರೊಳಗೆ ಇಣುಕಿ ನೋಡಿದಳು.

ಫಳಫಳನೆ ಹೊಳೆಯುತ್ತಿದ್ದ ಮಹರ್ಷಿಗಳ ಕಣ್ಣುಗಳನ್ನು ನೋಡಿ, ಆದೇನೋ ಅಮೂಲ್ಯವಾದ ವಸ್ತುವಿರಬಹುದೆಂದು ಭಾವಿಸಿ, ಬಾಲ್ಯಸಹಜ ಕುತೂಹಲದಿಂದ ಒಂದು ಮುಳ್ಳನ್ನು ತೆಗೆದುಕೊಂಡು ಅದನ್ನು ಚುಚ್ಚಿದಳು. ಅಲ್ಲಿಂದ ರಕ್ತವು ಒಸರಿದಾಗ ಹೆದರಿ ಓಡಿಬಿಟ್ಟಳು. ಮಹರ್ಷಿಗಳಿಗೆ ಯಾತನೆಯೂ ಕೋಪವೂ ಉಂಟಾದವು. ಒಡನೆಯೇ ತಮ್ಮ ತಪಃಶಕ್ತಿಯಿಂದ ಅಲ್ಲಿದ್ದವರೆಲ್ಲರ ಮಲಮೂತ್ರಗಳನ್ನು ನಿರ್ಬಂಧಿಸಿಬಿಟ್ಟರು.

ಇದ್ದಕ್ಕಿದ್ದಂತೆ ಶರ್ಯಾತಿ ಮಹಾರಾಜನ ಪರಿವಾರದವರಿಗೆಲ್ಲ ಹೊಟ್ಟೆ ಉಬ್ಬರಿಸಿ ಕೊಂಡಾಗ ಎಲ್ಲರೂ ಬಹಳ ಸಂಕಟಕ್ಕೆ ಒಳಗಾದರು. ಮೇಧಾವಿಯಾದ ರಾಜನು ಅದರ ಕಾರಣವನ್ನು ಯೋಚಿಸಿ. ಇದು ಯಾವುದೋ ಮಹಾತ್ಮರ ಶಾಪವೆಂಬುದನ್ನು ಮನಗಂಡು, ತನ್ನ ಸೇನಾಪತಿಯನ್ನು ಕರೆಸಿ ಕೇಳಿದನು.

ಆ ವನದಲ್ಲಿ ಚ್ಯವನರು ಮಹರ್ಷಿಯ ವಿಷಯದಲ್ಲಿ ಅಪರಾಧ ಮಾಡಿರಬೇಕೆಂದು ರಾಜನು ತರ್ಕಿಸಿದನು. ಎಲ್ಲರನ್ನೂ ಸಾಮಾದಿ ಚತುರೋಪಾಯಗಳಿಂದ ಪ್ರಶ್ನಿಸಿದರೂ ಪತ್ತೆಯಾಗಲಿಲ್ಲ. ಇದನ್ನೆಲ್ಲ ನೋಡುತ್ತಿದ್ದ ಸುಕನ್ನೆಯು ತಾನೇ ತಂದೆಯ ಬಳಿ ಬಂದು ಎಲ್ಲರನ್ನೂ ಸಾಮಾದಿ ಚತುರೋಪಾಯಗಳಿಂದ ಪ್ರಶ್ನಿಸಿದರೂ ಅಪರಾಧಿಯ ದೀಪದಹುಳುವೆಂದು ಭಾವಿಸಿ ಅದನ್ನು ಮುಳ್ಳಿನಿಂದ ಚುಚ್ಚಿದುದಾಗಿಯೂ ತಾನೊಂದು ಹುತ್ತದಲ್ಲಿ ಫಳಫಳನೆ ಹೊಳೆಯುತ್ತಿದ್ದ ವಸ್ತುವನ್ನು ಕಂಡುದಾಗಿಯೂ ಒಪ್ಪಿಕೊಂಡಳು.

ಇದನ್ನೂ ಓದಿ: ಬ್ರಹ್ಮನ ಮಾನಸಪುತ್ರ, ದೇವತೆಗಳ ಗುರು ಬೃಹಸ್ಪತಿಯ ತಂದೆ ಅಂಗಿರಸ ಮಹರ್ಷಿಗಳು

ಮಗಳ ಮಾತನು ಕೇಳಿ ಶರ್ಯಾತಿಮಹಾರಾಜನು ಒಡನೆಯೇ ಚ್ಯವನರು ತಪಸ್ಸು ಮಾಡುತ್ತಿದ್ದ ಹುತ್ತದ ಬಳಿಗೆ ಹೋದನು. ನಿಧಾನವಾಗಿ ಹುತ್ತವನ್ನು ಸಲಸಲವೇ ಬಿಡಿಸಲಾಗಿ ಮಹರ್ಷಿಯು ಗೋಚರಿಸಿದರು. ರಾಜನು ಭಯದಿಂದ ತನ್ನೆರಡೂ ಕೈಗಳನ್ನು ಜೋಡಿಸಿಕೊಂಡು, “ಮಹರ್ಷಿಗಳೇ! ಬಾಲ್ಯಭಾವದಿಂದ ನನ್ನ ಮಗಳು ಮಾಡಿರುವ ಅಪರಾಧವನ್ನು ಕ್ಷಮಿಸಬೇಕು. ಎಂದು ಬೇಡಿಕೊಂಡನು.

ಆಗ ಚ್ಯವನರು, ನಿನ್ನ ಮಗಳು ನನ್ನ ಕಣ್ಣುಗಳನ್ನು ಚುಚ್ಚಿದ ಕಾರಣ ನಾನು ಈಗ ಅಂಧನಾಗಿದ್ದೇನೆ. ನನ್ನ ಸೇವೆಯನ್ನು ಮಾಡಲು ನಿನ್ನ ಮಗಳನ್ನು ನನಗೆ ವಿವಾಹ ಮಾಡಿಕೊಡುವುದಾದರೆ ಅವಳ ಅಪರಾಧವನ್ನು ಕ್ಷಮಿಸುತ್ತೇನೆ” ಎಂದು ಹೇಳಿದರು. ರಾಜನು ಗತ್ಯಂತರವಿಲ್ಲದೆ ವೃದ್ಧರೂ ಕುರುಡರೂ ಆಗಿದ್ದ ಚ್ಯವನರಿಗೆ ಮಗಳಾದ ಸುಕನ್ಯೆಯನ್ನು ಧಾರೆಯೆರೆದು ಕೊಟ್ಟನು. ಕೂಡಲೇ ಅಲ್ಲಿದ್ದವರೆಲ್ಲರ ರೋಗ ಗುಣವಾಯಿತು. ಸುಕನ್ಯೆಯನ್ನು ಚ್ಯವನರ ಆಶ್ರಮದಲ್ಲಿ ಬಿಟ್ಟು ರಾಜಪರಿವಾರವು ರಾಜಧಾನಿಗೆ ಮರಳಿತು.

ಸುಕನೈಯು ಧರ್ಮಾನುಸಾರವಾಗಿ ಕೈಹಿಡಿದ ಪತಿಯ ಶುಶೂಷೆಯಲ್ಲಿ ನಿರತಳಾದಳು. ಪತಿಯ ಮನಸ್ಸನ್ನರಿತು ಕಾಲಕಾಲಕ್ಕೆ ಅವಶ್ಯ ವಸ್ತುಗಳನ್ನು ಒದಗಿಸಿ ಕೊಡುವುದು, ಪೂಜೆ, ಅತಿಥಿಸತ್ಕಾರ ಮುಂತಾದ ಕರ್ತವ್ಯಗಳನ್ನು ಸಂತೋಷದಿಂದ ನಿರ್ವಹಿಸುತ್ತಿದ್ದಳು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *