family entertainment Love Moctail-3 shows the bond between a father and daughterLove Mocktail-3

ಲವ್‌ Mocktail-3 ಚಿತ್ರದ ಹೆಸರು ಕೇಳಿದಾಗ, ಮತ್ತೆ ಅದೇ ಪ್ರೇಮ ಕಥೆ ಇರುತ್ತೆ ಅಂತ ಚಿತ್ರವನ್ನು ನೋಡದೆ ನಿರ್ಲಕ್ಷಿಸಿದ್ದೆ. ಆದ್ರೆ, ಓರ್ವರು Suggest ಮಾಡಿದ್ರು, ನೋಡಿ ಸರ್ ತುಂಬಾ ಚೆನ್ನಾಗಿದೆ, ನೀವು ಅಂದುಕೊಂಡ ರೀತಿ ಇದು ಪ್ರೇಮ ಕಥೆಯಲ್ಲ ವಿಭಿನ್ನವಾಗಿದೆ ಅಂತ ಹೇಳಿದ್ರು.

ಸರಿ ಅಂತ, “ಚಿತ್ರಮಂದಿರ”ಕ್ಕೆ ಹೋಗಿ ಸಿನಿಮಾ ನೋಡಿದೆ. ನಿಜವಾಗಿಯೂ ಸಿನಿಮಾ ತುಂಬಾ ಚೆನ್ನಾಗಿದೆ. ಕೌಟುಂಬಿಕ ಸಿನಿಮಾ. ತಂದೆ-ಮಗಳ ನಡುವಿನ ಬಾಂಧವ್ಯವನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ತಂದೆ-ಮಗಳ ಬಾಂಧವ್ಯ ಕುರಿತು ಈ ಹಿಂದೆ ಅನೇಕ ಸಿನಿಮಾಗಳು ಬಂದಿವೆ, ಆದ್ರೆ, ಡಾರ್ಲಿಂಗ್‌ ಕೃಷ್ಣ ಅವರು ತೋರಿಸಿರುವ ತಂದೆ-ಮಗಳ ನಡುವಿನ ಬಾಂಧವ್ಯ ವಿಭಿನ್ನವಾಗಿದೆ.

ತಾಯಿ ಇಲ್ಲದ ಮಗಳನ್ನು (ನಿಧಿ) ತಂದೆ (ಆದಿ) ಎಷ್ಟು ಮುದ್ದಾಗಿ ಮತ್ತು ಸ್ಟ್ರಿಕ್ಟ್‌ ಆಗಿ ಬೆಳಸುತ್ತಾರೆ. ಯಾವ ಕೊರತೆಯಾಗದಂತೆ ಮಗಳನ್ನು ನೋಡಿಕೊಳ್ಳುತ್ತಾರೆ. ಫಸ್ಟ್‌ ಆಫ್‌ನಲ್ಲಿ ತಂದೆ-ಮಗಳ ನಡುವಿನ ಬಾಂಧವ್ಯ, ಕಾಳಜಿ, ಪ್ರೀತಿ ಮತ್ತು ಮಗಳು ಮಾಡುವ ತುಂಟಾವನ್ನು ತಂದೆ ಹೇಗೆ ತೆಗೆದುಕೊಳ್ಳಬೇಕು ಎಂಬುವುದನ್ನು ತೋರಿಸುವುದರ ಜೊತೆಗೆ, ಇತ್ತೀಚಿಗೆ ಪೋಷಕರು ಮಕ್ಕಳಿಗೆ ಸಮಯ ಕೊಡದೆ ಇರುವುದರಿಂದ ಏನಾಗುತ್ತೆ ಎಂಬುವುದನ್ನು ತಿಳಿಸಿದ್ದಾರೆ.

ಸೆಕೆಂಡ್‌ ಆಫ್‌ನಲ್ಲಿ ಚಿತ್ರದ ಕಥೆಯೇ ಬೇರೆಯಾಗುತ್ತೆ. ಆದ್ರೆ, ಫಸ್ಟ್‌ ಆಫ್‌ಗು ಮತ್ತು ಸೆಕೆಂಡ್‌ ಆಫ್‌ಗೂ ಕನೆಕ್ಟಿವಿಟಿ ಎಲ್ಲೂ ಮಿಸ್‌ ಆಗಲ್ಲ. ಸೆಕೆಂಡ್‌ ಆಫ್‌ನಲ್ಲಿ ಕಾನೂನು ಪಾಠಗಳನ್ನು ಕಲಿಯಬಹುದು. ಚಿತ್ರದ ಕೊನೆವರೆಗೂ ಎಲ್ಲಿಯೂ ಬೋರ್‌ ಆಗಲ್ಲ.

ಇಷ್ಟೆಲ್ಲ ಇರುವ ಚಿತ್ರವನ್ನು ನೋಡುವವರೇ ಇಲ್ಲ ಎಂಬುವುದು ದುರ್ದೈವ. ನಾನು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋದಾಗ ಒಳಗಡೆ ಇದ್ದಿದ್ದು ಬೆರಳೆಣಿಕೆ ಜನ ಅಷ್ಟೇ. ಎಲ್ಲೋ ದುರಂದರ್‌-2 ಚಿತ್ರದ ಎದುರು ಲವ್‌ Mocktail-3 ತೆರೆಮರೆಗೆ ಸಿರಿಯಿತೊ ಗೊತ್ತಿಲ್ಲ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *