“ವೇದದ ಒಡಲುಳ್ಳ ಬೋಧೆಯನು ಹುಡುಕದಿರು; ಕಾಯಕವೇ ಕೈಲಾಸವೆಂದರಿದು ನಡೆವಂಗೆ ದೇವನೊಬ್ಬನೆ ಸಾಕ್ಷಿ, ಶಿವನೊಬ್ಬನೆ ಸಾಕ್ಷಿ!” ಬಸವಾದಿ ಶರಣರ ಈ ದಿವ್ಯ ವಚನದಂತೆ, ಕೇವಲ ಬೋಧನೆ ಮಾಡದೆ ಅದನ್ನು ತನ್ನ ಬದುಕಿನಲ್ಲಿ ಆಚರಿಸಿ ತೋರಿಸಿದ ಧನ್ಯ ಜೀವಿ ಪದ್ಮಶ್ರೀ ಡಾ. ಪ್ರಭಾಕರ ಬಸವಪ್ರಭು ಕೋರೆ. “ಕಾಯಕವೇ ಕೈಲಾಸ” ಮತ್ತು “ಅಕ್ಷರ ದಾಸೋಹ” ಎಂಬ ಧ್ಯೇಯಗಳನ್ನೇ ತಮ್ಮ ಉಸಿರಾಗಿಸಿಕೊಂಡು, ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಇವರ ಜನ್ಮದಿನವು ಕೇವಲ ವ್ಯಕ್ತಿಯೊಬ್ಬರ ಹುಟ್ಟುಹಬ್ಬವಲ್ಲ. ಬದಲಾಗಿ ಅದು ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿರುವ ಸಾರ್ಥಕ ಬದುಕನ್ನು ಸ್ಮರಿಸುವ ದಿನವಾಗಿದೆ. “ವಿದ್ಯೆಯೇ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಶಕ್ತಿ; ಶಿಕ್ಷಣದ ಮೂಲಕ ಸಮಾಜವನ್ನು ಕಟ್ಟಬಹುದು” ಎಂಬ ಧ್ಯೇಯವನ್ನು ತಮ್ಮ ಜೀವನದ ಉದ್ದೇಶವನ್ನಾಗಿಸಿ ಕೊಂಡಿರುವ ಪದ್ಮಶ್ರೀ ಡಾ.ಪ್ರಭಾಕರ ಬಸವಪ್ರಭು ಕೋರೆ ಅವರ ಜನ್ಮ ದಿನವು ಕೇವಲ ಒಂದು ವೈಯಕ್ತಿಕ ಸಂಭ್ರಮವಲ್ಲ; ಅದು ಶಿಕ್ಷಣ, ಸೇವೆ, ಮಾನವೀಯತೆ ಮತ್ತು ರಾಷ್ಟç ನಿರ್ಮಾಣದ ಮೌಲ್ಯಗಳನ್ನು ಸ್ಮರಿಸುವ ಸಾರ್ಥಕ ದಿನವಾಗಿದೆ. ೧೯೪೭ರ ಆಗಸ್ಟ್ ೧ರಂದು ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಮದಲ್ಲಿ ಜನಿಸಿದ ಡಾ.ಪ್ರಭಾಕರ ಕೋರೆ ಅವರು ತಮ್ಮ ಪ್ರತಿಭೆ, ಪರಿಶ್ರಮ ಮತ್ತು ದೂರ ದೃಷ್ಟಿಯ ನಾಯಕತ್ವದ ಮೂಲಕ ಕರ್ನಾಟಕದಷ್ಟೇ ಅಲ್ಲ, ದೇಶದ ಪ್ರಮುಖ ಶಿಕ್ಷಣ ತಜ್ಞರಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿದ್ದಾರೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಅವರು, ಶಿಕ್ಷಣವೇ ಸಮಾಜದ ಅಭಿವೃದ್ಧಿಯ ಮೂಲ ಎಂದು ನಂಬಿ ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ಸಮಾಜ ಸೇವೆಗೆ ಸಮರ್ಪಿಸಿದ್ದಾರೆ. ೧೯೮೪ರಲ್ಲಿ ಕೆ.ಎಲ್.ಇ. ಸಂಸ್ಥೆಯ ನೇತೃತ್ವವನ್ನು ವಹಿಸಿಕೊಂಡ ನಂತರ, ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಅಪೂರ್ವ ಬೆಳವಣಿಗೆಯನ್ನು ಕಂಡಿತು. ಇಂದು ಕೆ.ಎಲ್.ಇ. ಸಂಸ್ಥೆ ನೂರಾರು ಶಿಕ್ಷಣ ಸಂಸ್ಥೆಗಳು, ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಾವಿರಾರು ಶಿಕ್ಷಕರನ್ನು ಒಳಗೊಂಡಿರುವ ಭಾರತದ ಅತ್ಯಂತ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾಗಿದೆ. ವೈದ್ಯಕೀಯ, ಎಂಜಿನಿಯರಿAಗ್, ದಂತ ವೈದ್ಯಕೀಯ, ಔಷಧಶಾಸ್ತ್ರ, ಕಾನೂನು, ನಿರ್ವಹಣಾ ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಕೆ.ಎಲ್.ಇ. ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಗಳಿಸಿದೆ. ಶಿಕ್ಷಣದ ಜೊತೆಗೆ ಆರೋಗ್ಯ ಸೇವೆಯಲ್ಲಿಯೂ ಡಾ.ಕೋರೆ ಅವರ ಕೊಡುಗೆ ಅಪಾರವಾಗಿದೆ. ಅತ್ಯಾಧುನಿಕ ಆಸ್ಪತ್ರೆಗಳು, ವೈದ್ಯಕೀಯ ಸಂಶೋಧನಾ ಕೇಂದ್ರಗಳು, ಗ್ರಾಮೀಣ ಆರೋಗ್ಯ ಸೇವೆಗಳು ಹಾಗೂ ದತ್ತಿ ಆಸ್ಪತ್ರೆಗಳ ಮೂಲಕ ಲಕ್ಷಾಂತರ ಜನರಿಗೆ ಗುಣ ಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಿದ್ದಾರೆ. ಅವರ ದೂರ ದೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರವು ಹೊಸ ಆಯಾಮವನ್ನು ಪಡೆದುಕೊಂಡಿದೆ. ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೆ.ಎ.ಹೆಚ್.ಇ.ಆರ್. ವಿಶ್ವವಿದ್ಯಾಲಯ ಹಾಗೂ ಕೆ.ಎಲ್.ಇ. ತಾಂತ್ರಿಕ ವಿಶ್ವ ವಿದ್ಯಾಲಯದಂತಹ ಮಹತ್ವದ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವದ ಅನೇಕ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಸಹಭಾಗಿತ್ವವನ್ನು ಬೆಳೆಸಿ ಭಾರತೀಯ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಸಾರ್ವಜನಿಕ ಜೀವನದಲ್ಲಿಯೂ ಅವರು ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಯೇ ನಿಜವಾದ ರಾಷ್ಟç ನಿರ್ಮಾಣ ಎಂಬ ಅವರ ಚಿಂತನೆ ಸದಾ ಕಾರ್ಯ ರೂಪದಲ್ಲಿದೆ. ಡಾ. ಪ್ರಭಾಕರ ಬಸವಪ್ರಭು ಕೋರೆ ಅವರ ಶಿಕ್ಷಣ, ಆರೋಗ್ಯ, ಸಂಶೋಧನೆ ಹಾಗೂ ಸಮಾಜ ಸೇವೆಯಲ್ಲಿನ ಅಪ್ರತಿಮ ಕೊಡುಗೆಗಳನ್ನು ಗುರುತಿಸಿ ಅವರಿಗೆ ಅನೇಕ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ. ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಾಗೂ ರಾಣಿಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯಿಂದ ಗೌರವ ಡಾಕ್ಟರೇಟ್ ಪದವಿಗಳು, ಅಮೆರಿಕದ ಥಾಮಸ್ ಜೆಫರ್ಸನ್ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ, ಜೀವಮಾನ ಸಾಧನಾ ಪ್ರಶಸ್ತಿಗಳು, ಹಾಗೂ ಶಿಕ್ಷಣ ಕ್ಷೇತ್ರದ ಅತ್ಯುನ್ನತ ಸೇವೆಗಾಗಿ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಗೌರವಗಳಿಗೆ ಅವರು ಭಾಜನರಾಗಿದ್ದಾರೆ. 2026ರಲ್ಲಿ ಭಾರತ ಸರ್ಕಾರವು ಡಾ.ಪ್ರಭಾಕರ ಕೋರೆ ಅವರ ಅನನ್ಯ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು ೨೦೨೬ರಲ್ಲಿ “ಪದ್ಮಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಗೌರವವು ಅವರ ವ್ಯಕ್ತಿತ್ವಕ್ಕಷ್ಟೆ ಅಲ್ಲ, ಶಿಕ್ಷಣ ಮತ್ತು ಮಾನವ ಸೇವೆಯ ಮೂಲಕ ಅವರು ಕಟ್ಟಿದ ಮೌಲ್ಯಗಳಿಗೂ ಸಂದಿರುವ ರಾಷ್ಟçದ ಗೌರವವಾಗಿದೆ. ಇಂದು ಅವರ ಜನ್ಮ ದಿನವನ್ನು ಆಚರಿಸುವ ಸಂದರ್ಭದಲ್ಲಿ, ಅವರ ಆದರ್ಶ ಜೀವನ, ಶಿಸ್ತು, ಪರಿಶ್ರಮ, ದೂರದೃಷ್ಟಿ ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸುವುದು ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ ಹಾಗೂ ನಾಗರಿಕನ ಕರ್ತವ್ಯವಾಗಿದೆ. ಅವರ ಜೀವನವು ನಮಗೆ “ಜ್ಞಾನದಿಂದ ವ್ಯಕ್ತಿಯ ಉದ್ಧಾರ, ಶಿಕ್ಷಣದಿಂದ ಸಮಾಜದ ಉದ್ಧಾರ” ಎಂಬ ಅಮೂಲ್ಯ ಸಂದೇಶವನ್ನು ನೀಡುತ್ತದೆ. ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯ ಮೂಲಕ ಅವರು ನಿರ್ಮಿಸಿರುವ ಮೌಲ್ಯಗಳು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿದಾಯಕವಾಗಿವೆ. ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ಸಮೂಹದ ಪರವಾಗಿ ಪದ್ಮಶ್ರೀ ಡಾ. ಪ್ರಭಾಕರ ಬಸವಪ್ರಭು ಕೋರೆ ಅವರಿಗೆ ಜನ್ಮ ದಿನದ ಹೃತ್ಪೂರ್ವಕ ಶುಭಾಶಯಗಳನ್ನು ಅರ್ಪಿಸುತ್ತೇವೆ. ಭಗವಂತನು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಸುಖ, ಸಂತೋಷ ಹಾಗೂ ಇನ್ನಷ್ಟು ªಷÀðಗಳ ಕಾಲ ಶಿಕ್ಷಣ, ಆರೋಗ್ಯ, ಸಂಶೋಧನೆ ಮತ್ತು ಸಮಾಜ ಸೇವೆಯ ಮೂಲಕ ರಾಷ್ಟçಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಹಾಗೂ ಸಾಮರ್ಥ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ. ಪದ್ಮಶ್ರೀ ಡಾ. ಪ್ರಭಾಕರ ಬಸವಪ್ರಭು ಕೋರೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವಿಶ್ವ ಪ್ರಕೃತಿ ಸಂರಕ್ಷಣಾ ದಿನ: ಪ್ರಕೃತಿ ರಕ್ಷಣೆಗೆ AI ಬಳಕೆ, ಹೊಸ ಆಶಾಕಿರಣ ಪುಸ್ತಕ ವಿಮರ್ಶೆ/ಪರಿಚಯ: ಕಾಫಿ ಕಿಂಗ್