“ಪ್ರಕೃತಿಯನ್ನು ಉಳಿಸಿದರೆ ಭವ್ಯಿಷ್ಯ ಉಳಿಯುತ್ತದೆ; ಪ್ರಕೃತಿಯನ್ನು ನಾಶ ಮಾಡಿದರೆ ಬದುಕೇ ನಾಶವಾಗುತ್ತದೆ.” ಪ್ರತಿ ವರ್ಷ ಜುಲೈ 28 ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನ (World Nature Conservation Day) ವನ್ನು ಆಚರಿಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ ಭೂಮಿಯಲ್ಲಿರುವ ನೈಸರ್ಗಿಕ ಸಂಪನ್ಮೂಲಗಳು, ಜೀವ ವೈವಿಧ್ಯತೆ, ಅರಣ್ಯಗಳು, ನದಿಗಳು, ಸಮುದ್ರಗಳು, ವನ್ಯಜೀವಿಗಳು ಹಾಗೂ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವ ಮಹತ್ವವನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವುದಾಗಿದೆ. 2026 ರ ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕಾಗಿ ಸೂಚಿಸಲಾದ “ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾಗಿ ಬದುಕುವುದು” ಎಂಬ ವಿಷಯವು ಭೂಮಿಯ ಪರಿಸರ ವಿಕೋಪವನ್ನು ನಿಭಾಯಿಸಲು ಅಗತ್ಯವಿರುವ ತುರ್ತು, ಸಂಬಂಧಿತ ಕ್ರಮಗಳನ್ನು ಸಂಪೂರ್ಣವಾಗಿ ವಿವರಿಸುತ್ತದೆ. ಮರ ನೆಡುವಿಕೆ, ಹೊಳೆ ಪುನರ್ವಸತಿ ಮತ್ತು ಮಣ್ಣಿನ ಗುಣಮಟ್ಟವನ್ನು ಪುನಃಸ್ಥಾಪಿಸುವ ಮೂಲಕ ಹಾನಿಗೊಳಗಾದ ಪರಿಸರ ವ್ಯವಸ್ಥೆಗಳನ್ನು ಪುನಃಸ್ಥಾಪಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಇದು ಕೇವಲ ನಾಸ್ಟಾಲ್ಜಿಕ್ ಅಲ್ಲ, ಜೀವವೈವಿಧ್ಯತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಸಂರಕ್ಷಿಸುವ ಪ್ರಕೃತಿಯ ಸಾಮರ್ಥ್ಯದಲ್ಲಿಉದ್ದೇಶಪೂರ್ವಕ ಹೂಡಿಕೆಯಾಗಿದೆ. ಪ್ರಕೃತಿ–ನಮ್ಮ ಜೀವನದ ಜೀವನಾಡಿ ನಾವು ಪ್ರತಿದಿನ ಉಸಿರಾಡುವ ಶುದ್ಧ ಗಾಳಿ, ಕುಡಿಯುವ ನೀರು, ತಿನ್ನುವಆಹಾರ, ಔಷಧೀಯ ಸಸ್ಯಗಳು, ವಾಸಿಸುವ ನೆಲ, ಬದುಕಲು ಬೇಕಾದ ಸಂಪನ್ಮೂಲಗಳೆಲ್ಲವೂ ಪ್ರಕೃತಿಯ ಕೊಡುಗೆಗಳಾಗಿವೆ. ಅರಣ್ಯಗಳು ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ಒದಗಿಸುತ್ತವೆ. ನದಿಗಳು ಲಕ್ಷಾಂತರ ಜನರಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಜೀವದಾಯಿನಿಯಾಗಿವೆ. ಮಣ್ಣು ಆಹಾರ ಉತ್ಪಾದನೆಯ ಮೂಲವಾಗಿದೆ. ಜೀವ ವೈವಿಧ್ಯತೆ ಪರಿಸರ ಸಮತೋಲನವನ್ನು ಕಾಪಾಡುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಕಳೆದ ಸಮಯ ಮಾನಸಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ಹೀಗಾಗಿ ಪ್ರಕೃತಿಯ ಆರೋಗ್ಯವೇ ಮಾನವನ ಆರೋಗ್ಯವಾಗಿದೆ. ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಇತಿಹಾಸ ಪ್ರಕೃತಿಯನ್ನು ರಕ್ಷಿಸುವ ಪ್ರಯತ್ನಗಳು ಸಾವಿರಾರು ವರ್ಷಗಳಿಂದ ನಡೆಯುತ್ತಿವೆ. ಭಾರತದ ಸಂಸ್ಕೃತಿಯಲ್ಲಿಯೇ ಮರಗಳನ್ನು ದೇವರಂತೆ ಪೂಜಿಸುವ ಸಂಪ್ರದಾಯವಿದೆ. ನದಿಗಳನ್ನು ತಾಯಿ ಎಂದು ಗೌರವಿಸಲಾಗಿದೆ. ಆದರೆ ಕೈಗಾರಿಕೀಕರಣ, ಅರಣ್ಯನಾಶ, ಮಾಲಿನ್ಯ ಹಾಗೂ ಹವಾಮಾನ ಬದಲಾವಣೆಯಿಂದ ಪರಿಸರಕ್ಕೆ ಉಂಟಾದ ತೀವ್ರ ಹಾನಿಯನ್ನು ಗಮನಿಸಿ, ೨೦ನೇ ಶತಮಾನದಕೊನೆಯ ಭಾಗದಲ್ಲಿ ವಿಶ್ವ ಮಟ್ಟದಲ್ಲಿ ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಸಾರಲು ಈ ದಿನದ ಆಚರಣೆ ಆರಂಭವಾಯಿತು. ಇಂದು ವಿಶ್ವದಾದ್ಯಂತ ಶಾಲೆಗಳು, ಕಾಲೇಜುಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಪರಿಸರ ಸಂಘಟನೆಗಳು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ವಿವಿಧ ರೀತಿಯಲ್ಲಿ ಅರ್ಥ ಪೂರ್ಣವಾಗಿ ಆಚರಿಸುತ್ತವೆ. ಈ ಸಂದರ್ಭದಲ್ಲಿ ವೃಕ್ಷಾರೋಪಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಪರಿಸರ ಜಾಗೃತಿ ಅಭಿಯಾನಗಳನ್ನು ನಡೆಸುವುದು, ಪರಿಸರ ಸಂರಕ್ಷಣೆ ಕುರಿತು ಕಾರ್ಯಾಗಾರಗಳು ಹಾಗೂ ವಿಶೇಷ ಉಪನ್ಯಾಸಗಳನ್ನು ಆಯೋಜಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳುವುದು, ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಮತ್ತು ನಾಗರಿಕರಿಂದ ಸ್ವೀಕರಿಸುವುದು, ಹಾಗೆಯೇ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿಯ ಮನೋಭಾವ ಬೆಳೆಸುವ ಉದ್ದೇಶದಿಂದ ಪ್ರಬಂಧ, ಚಿತ್ರಕಲೆ, ಭಾಷಣ, ರಸಪ್ರಶ್ನೆ ಹಾಗೂ ಪೋಸ್ಟರ್ ರಚನೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇಂತಹ ಕಾರ್ಯಕ್ರಮಗಳು ಪ್ರಕೃತಿಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತವೆ. ಕೃತಕ ಬುದ್ಧಿಮತ್ತೆ (AI) ಮೂಲಕ ವನ್ಯಜೀವಿಗಳ ರಕ್ಷಣೆ ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಹವಾಮಾನ ಬದಲಾವಣೆ, ಅರಣ್ಯ ನಾಶ ಮತ್ತು ಅಕ್ರಮ ಬೇಟೆಯಂತಹ ಸಮಸ್ಯೆಗಳನ್ನು ಎದುರಿಸಲು ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ವಿಶೇಷವಾಗಿ ಆನೆಗಳಂತಹ ಅಪರೂಪದ ವನ್ಯ ಜೀವಿಗಳನ್ನು ದಂತಕ್ಕಾಗಿ ಅಕ್ರಮವಾಗಿ ಬೇಟೆಯಾಡಲಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಗಂಭೀರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ವಿಜ್ಞಾನಿಗಳು Poಚಿಛಿhಓeಣ ಎಂಬ ಬುದ್ಧಿವಂತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವ್ಯವಸ್ಥೆಯುಕೃತಕ ಬುದ್ಧಿಮತ್ತೆ ಮತ್ತು ಜಾಗತಿಕ ಸ್ಥಾನ ನಿರ್ಧಾರ ವ್ಯವಸ್ಥೆ (GPS) ಮಾಹಿತಿಯನ್ನು ಬಳಸಿಕೊಂಡು ಹಿಂದಿನ ಅಕ್ರಮ ಬೇಟೆಯ ಘಟನೆಗಳನ್ನು ವಿಶ್ಲೇಷಿಸುತ್ತದೆ. ನಂತರ ಯಾವ ಪ್ರದೇಶಗಳಲ್ಲಿ ಬೇಟೆಗಾರರು ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆಎಂಬುದನ್ನು ಮುಂಚಿತವಾಗಿ ಊಹಿಸಿ, ಅರಣ್ಯ ಇಲಾಖೆ ಮತ್ತು ಸಂರಕ್ಷಣಾ ಸಿಬ್ಬಂದಿಗೆ ತಕ್ಷಣವೇ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ. ಇದರಿಂದ ಅಪಾಯ ಸಂಭವಿಸುವ ಮುನ್ನವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ PoachNet ಕೇವಲ ಅಪರಾಧವನ್ನು ಪತ್ತೆ ಹಚ್ಚುವ ತಂತ್ರ ಜ್ಞಾನವಲ್ಲ, ಅಪರಾಧ ನಡೆಯುವ ಮೊದಲೇ ಅದನ್ನು ತಡೆಯುವ ಅತ್ಯಾಧುನಿಕ ಸಂರಕ್ಷಣಾ ವ್ಯವಸ್ಥೆಯಾಗಿದೆ. ಕ್ಯಾರಿಬು ಜಿಂಕೆಗಳ ಸಂರಕ್ಷಣೆಯಲ್ಲಿGPS ತಂತ್ರಜ್ಞಾನ ಉತ್ತರ ಅಮೆರಿಕಾದಲ್ಲಿ ಕಂಡು ಬರುವ ಕ್ಯಾರಿಬು (Caribou) ಜಿಂಕೆಗಳ ಸಂರಕ್ಷಣೆಯಲ್ಲಿ ಜಾಗತಿಕ ಸ್ಥಾನ ನಿರ್ಧಾರ ವ್ಯವಸ್ಥೆ (GPS) ಆಧಾರಿತ ಸಂಶೋಧನೆ ಹೊಸ ದಿಕ್ಕನ್ನು ತೋರಿಸಿದೆ. ಈ ಜಿಂಕೆಗಳ ವಲಸೆ ಮಾರ್ಗಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ವಿಜ್ಞಾನಿಗಳು ಅವುಗಳ ಕುತ್ತಿಗೆಗೆ GPS ಕಾಲರ್‌ಗಳನ್ನು ಅಳವಡಿಸಿ ಅವುಗಳ ಚಲನವಲನವನ್ನು ದೀರ್ಘ ಕಾಲದವರೆಗೆ ಅಧ್ಯಯನ ಮಾಡಿದರು. ಈ ಅಧ್ಯಯನದಿಂದ ಎಲ್ಲಾ ಕ್ಯಾರಿಬು ಜಿಂಕೆಗಳು ಒಂದೇ ರೀತಿಯ ವಲಸೆ ಮಾರ್ಗವನ್ನು ಅನುಸರಿಸುವುದಿಲ್ಲ ಎಂಬುದು ತಿಳಿದುಬಂದಿತು. ಪ್ರತಿ ಗುಂಪಿಗೂ ತನ್ನದೇಆದ ಚಲನೆಯ ಮಾದರಿಗಳಿದ್ದು, ಅವುಗಳಿಗೆ ಒಂದೇ ರೀತಿಯ ಸಂರಕ್ಷಣಾಯೋಜನೆ ಪರಿಣಾಮಕಾರಿಯಾಗುವುದಿಲ್ಲ. ಈ ಮಾಹಿತಿಯ ಆಧಾರದ ಮೇಲೆ ವಿಜ್ಞಾನಿಗಳು Migration Corridors (ವಲಸೆ ಮಾರ್ಗಗಳು) ಅನ್ನುರೂಪಿಸುತ್ತಿದ್ದಾರೆ. ಇದರಿಂದ ಕ್ಯಾರಿಬುಗಳು ಸುರಕ್ಷಿತವಾಗಿ ಸಂಚರಿಸಲು, ಹೆದ್ದಾರಿಗಳ ಅಪಘಾತಗಳಿಂದ ತಪ್ಪಿಸಿಕೊಳ್ಳಲು, ಕೈಗಾರಿಕಾ ಪ್ರದೇಶಗಳಿಂದ ದೂರ ಉಳಿಯಲು ಹಾಗೂ ಸಂತಾನೋತ್ಪತ್ತಿಗೆ ಅನುಕೂಲಕರವಾದ ನೈಸರ್ಗಿಕ ವಾತಾವರಣವನ್ನು ಪಡೆಯಲು ಸಾಧ್ಯವಾಗುತ್ತಿದೆ. ಸಮುದ್ರ ಸಂರಕ್ಷಣೆಯಲ್ಲಿ ಉಪಗ್ರಹ ಮತ್ತು AI ಬಳಕೆ ಭೂಮಿಯ ಸುಮಾರು 75 ಪ್ರತಿಶತ ಭಾಗವನ್ನು ಸಮುದ್ರ ಆವರಿಸಿಕೊಂಡಿದೆ. ಆದರೆ ಇಷ್ಟು ವಿಶಾಲವಾದ ಸಮುದ್ರ ಪ್ರದೇಶದಲ್ಲಿಅಕ್ರಮ ಮೀನುಗಾರಿಕೆಯನ್ನು ಪತ್ತೆಹಚ್ಚುವುದು ಮತ್ತು ನಿಯಂತ್ರಿಸುವುದು ಅತ್ಯಂತ ಕಷ್ಟಕರವಾದ ಕಾರ್ಯವಾಗಿದೆ. ಈ ಸವಾಲನ್ನು ಎದುರಿಸಲು ವಿಜ್ಞಾನಿಗಳು ಉಪಗ್ರಹತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ 1000 ಕ್ಕೂ ಹೆಚ್ಚು ಸಮುದ್ರ ಸಂರಕ್ಷಿತ ಪ್ರದೇಶಗಳನ್ನು ಅಧ್ಯಯನ ಮಾಡಲಾಯಿತು.ಉಪಗ್ರಹ ಚಿತ್ರಗಳು, ರಾಡಾರ್‌ತಂತ್ರಜ್ಞಾನ ಹಾಗೂ AI ವಿಶ್ಲೇಷಣೆಯ ನೆರವಿನಿಂದ ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಚಲನವಲನವನ್ನು ನಿಖರವಾಗಿ ಪತ್ತೆಹಚ್ಚಲಾಯಿತು. ವಿಶೇಷವಾಗಿ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ಗಣನೀಯವಾಗಿಕಡಿಮೆಯಾಗಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಇದರಿಂದ ಆಧುನಿಕ ತಂತ್ರಜ್ಞಾನವು ಸಮುದ್ರ ಪರಿಸರ ಹಾಗೂ ಸಮುದ್ರ ಜೀವಿಗಳ ಸಂರಕ್ಷಣೆಯಲ್ಲಿ ಪರಿಣಾಮಕಾರಿ ಸಾಧನವಾಗಿಕಾರ್ಯನಿರ್ವಹಿಸುತ್ತಿದೆಎಂಬುದು ಸಾಬೀತಾಗಿದೆ. ಸಮುದ್ರದರೇ ಮೀನುಗಳ ಸಂರಕ್ಷಣೆಗೆ ಹೊಸ ತಂತ್ರಜ್ಞಾನ ರೇ (Ray) ಮೀನುಗಳು ಸಮುದ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಸಂಚರಿಸುವ ಜೀವಿಗಳಾಗಿದ್ದು, ಅವುಗಳ ಜೀವನಶೈಲಿಯನ್ನು ಅಧ್ಯಯನ ಮಾಡುವುದು ವಿಜ್ಞಾನಿಗಳಿಗೆ ದೀರ್ಘಕಾಲದ ಸವಾಲಾಗಿತ್ತು. ಹಿಂದೆ ಬಳಸುತ್ತಿದ್ದ ಟ್ರ‍್ಯಾಕಿಂಗ್ ಸಾಧನಗಳು ಮೀನುಗಳ ದೇಹದಿಂದ ಬೇಗನೆ ಕಳಚಿ ಹೋಗುತ್ತಿದ್ದ ಕಾರಣ ಅವುಗಳ ಚಲನವಲನದ ಬಗ್ಗೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ ವಿಜ್ಞಾನಿಗಳು Biologging Tags ಎಂಬ ಅತ್ಯಾಧುನಿಕ ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನಗಳಲ್ಲಿ ಕ್ಯಾಮೆರಾಗಳು, ವಿವಿಧ ಸಂವೇದಕಗಳು (Semsors), ಕೃತಕ ಬುದ್ಧಿಮತ್ತೆ (AI) ಹಾಗೂ ಯಂತ್ರ ಕಲಿಕೆ (Machime Lear) ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಇವುಗಳ ಸಹಾಯದಿಂದರೇ ಮೀನುಗಳು ಯಾವ ಮಾರ್ಗದಲ್ಲಿ ಈಜುತ್ತವೆ, ಆಹಾರವನ್ನು ಹೇಗೆ ಹುಡುಕುತ್ತವೆ, ಪರಸ್ಪರ ಹೇಗೆ ವರ್ತಿಸುತ್ತವೆ ಹಾಗೂ ಯಾವ ಪ್ರದೇಶಗಳಲ್ಲಿ ಹೆಚ್ಚು ಸಮಯ ಕಳೆಯುತ್ತವೆ ಎಂಬ ಮಹತ್ವದ ಮಾಹಿತಿಯನ್ನು ವಿಜ್ಞಾನಿಗಳು ಸಂಗ್ರಹಿಸಲು ಸಾಧ್ಯವಾಗಿದೆ. ಈ ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ರೇ ಮೀನುಗಳ ಪ್ರಮುಖ ವಾಸಸ್ಥಳಗಳನ್ನು ಗುರುತಿಸಿ, ಅವುಗಳಿಗೆ ಸುರಕ್ಷಿತ ಸಮುದ್ರ ಸಂರಕ್ಷಣಾ ವಲಯಗಳನ್ನು ನಿರ್ಮಿಸುವ ಮೂಲಕ ಅವುಗಳನ್ನು ಅಕ್ರಮ ಮೀನುಗಾರಿಕೆ, ಮಾಲಿನ್ಯ ಹಾಗೂ ಇತರ ಪರಿಸರ ಅಪಾಯಗಳಿಂದ ರಕ್ಷಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗುತ್ತಿದೆ. ಭಾರತದ ಪ್ರಕೃತಿ ಸಂರಕ್ಷಣೆಯ ಪರಂಪರೆ ಪ್ರಕೃತಿ ಸಂರಕ್ಷಣೆ ಎಂಬುದು ಭಾರತೀಯರಿಗೆ ಹೊಸ ಪರಿಕಲ್ಪನೆಯಲ್ಲ. ತುಳಸಿ, ಅಶ್ವತ್ಥ, ಆಲದ ಮರಗಳನ್ನು ಪೂಜಿಸುವ ಸಂಪ್ರದಾಯ ಪವಿತ್ರ ಕಾಡುಗಳ (Sಚಿಛಿಡಿeಜ ಉಡಿoves) ಸಂರಕ್ಷಣೆ ಬಿಷ್ಣೋಯಿ ಸಮುದಾಯದ ಪ್ರಕೃತಿ ಪ್ರೇಮ ಚಿಪ್ಕೋ ಚಳುವಳಿ ಅಪ್ಪಿಕೋ ಚಳುವಳಿ ವನ್ಯಜೀವಿ ಸಂರಕ್ಷಣಾ ಕಾಯ್ದೆಗಳು ಇವೆಲ್ಲವೂ ಪ್ರಕೃತಿಯೊಂದಿಗೆ ನಮ್ಮ ಸಂಸ್ಕೃತಿಯ ಆಳವಾದ ನಂಟನ್ನುತೋರಿಸುತ್ತವೆ. ವಿದ್ಯಾರ್ಥಿಗಳು ಮತ್ತು ನಾಗರಿಕರು ಮಾಡಬಹುದಾದ ಕಾರ್ಯಗಳು ಪ್ರಕೃತಿ ಸಂರಕ್ಷಣೆ ಸರ್ಕಾರ ಅಥವಾ ಪರಿಸರ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ; ಪ್ರತಿಯೊಬ್ಬ ನಾಗರಿಕನೂ ತನ್ನ ದೈನಂದಿನ ಜೀವನದಲ್ಲಿ ಸಣ್ಣ-ಸಣ್ಣ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಣೆಗೆ ಮಹತ್ವದ ಕೊಡುಗೆ ನೀಡಬಹುದು. ಪ್ರತಿ ವರ್ಷ ಕನಿಷ್ಠ ಒಂದು ಮರವನ್ನು ನೆಟ್ಟುಅದರ ಪೋಷಣೆ ಮಾಡುವುದು, ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರು ಮತ್ತು ವಿದ್ಯುತ್‌ಅನ್ನು ಮಿತವಾಗಿ ಬಳಸುವುದು, ಮನೆಯ ಹಾಗೂ ಸಾರ್ವಜನಿಕ ಸ್ಥಳಗಳ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವೆಂದು ವಿಂಗಡಿಸಿ ಸರಿಯಾಗಿ ವಿಲೇವಾರಿ ಮಾಡುವುದು, ಮಳೆನೀರನ್ನು ಸಂಗ್ರಹಿಸಿ ಭೂಗರ್ಭ ಜಲಮಟ್ಟವನ್ನು ಹೆಚ್ಚಿಸುವುದು, ಸ್ಥಳೀಯ ಜೈವಿಕ ವೈವಿಧ್ಯತೆಯನ್ನು ಹಾಗೂ ಸ್ಥಳೀಯ ಸಸ್ಯ-ಪ್ರಾಣಿ ಸಂಕುಲವನ್ನು ರಕ್ಷಿಸುವುದು, ಬೇಸಿಗೆಯ ದಿನಗಳಲ್ಲಿ ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ, ಸೈಕಲ್ ಅಥವಾ ಕಾಲ್ನಡಿಗೆಯನ್ನು ಬಳಸುವ ಮೂಲಕ ವಾಯು ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳು, ವೃಕ್ಷಾರೋಪಣ ಅಭಿಯಾನಗಳು ಹಾಗೂ ಸ್ವಚ್ಛತಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಸಣ್ಣ ಪ್ರಯತ್ನಗಳು ಒಟ್ಟಾಗಿ ದೊಡ್ಡ ಬದಲಾವಣೆಯನ್ನು ತಂದು ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ಹಸಿರು, ಸ್ವಚ್ಛ ಮತ್ತು ಆರೋಗ್ಯಕರ ಭೂಮಿಯನ್ನು ಉಳಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಸಂದೇಶ ಇಂದು ಪ್ರಕೃತಿ ಸಂರಕ್ಷಣೆ ಕೇವಲ ಮರಗಳನ್ನು ಉಳಿಸುವುದಷ್ಟೇ ಅಲ್ಲ. ಅದು ಮಾನವಜೀವನ, ಆರೋಗ್ಯ, ಆಹಾರ ಭದ್ರತೆ, ಆರ್ಥಿಕತೆ ಹಾಗೂ ಮುಂದಿನ ಪೀಳಿಗೆಯ ಭವಿಷ್ಯವನ್ನುರಕ್ಷಿಸುವ ಮಹತ್ವದ ಕಾರ್ಯವಾಗಿದೆ. ಕೃತಕ ಬುದ್ಧಿಮತ್ತೆ, ಉಪಗ್ರಹ ತಂತ್ರಜ್ಞಾನ, GPS ಟ್ರ‍್ಯಾಕಿಂಗ್, ಮೆಷಿನ್ ಲರ್ನಿಂಗ್ ಮುಂತಾದ ಆಧುನಿಕ ತಂತ್ರಜ್ಞಾನಗಳು ಪ್ರಕೃತಿ ಸಂರಕ್ಷಣೆಯಲ್ಲಿ ಹೊಸ ಯುಗವನ್ನು ಆರಂಭಿಸಿವೆ. ಆದರೆ ತಂತ್ರಜ್ಞಾನದ ಜೊತೆಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ನಡವಳಿಕೆಯೂ ಅಷ್ಟೇ ಮುಖ್ಯವಾಗಿದೆ. ಅರಣ್ಯಗಳ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ, ನದಿಗಳ ಪುನರುಜ್ಜೀವನ, ಸಮುದ್ರಗಳ ಸ್ವಚ್ಛತೆ, ಜೀವ ವೈವಿಧ್ಯತೆಯ ಉಳಿವು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕವೇ ನಾವು ಆರೋಗ್ಯಕರ, ಸಮೃದ್ಧ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸಬಹುದು. “ಭೂಮಿ ನಮ್ಮ ಪೂರ್ವಜರಿಂದ ಬಂದ ಆಸ್ತಿಯಲ್ಲ; ಅದು ನಮ್ಮ ಮಕ್ಕಳಿಂದ ಪಡೆದ ಸಾಲ.ಆದ್ದರಿಂದ ಪ್ರಕೃತಿಯನ್ನು ಪ್ರೀತಿಸೋಣ, ಪರಿಸರವನ್ನು ಸಂರಕ್ಷಿಸೋಣ ಮತ್ತು ಹಸಿರು ಭವಿಷ್ಯವನ್ನುಕಟ್ಟೋಣ.” ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಭಾರತದ ಏಕತೆ ಮತ್ತು ಪ್ರಗತಿಗಾಗಿ ಸಮರ್ಪಿತ ಜೀವನ ಶಿಕ್ಷಣ ಸೇವೆಯ ಯುಗ ಪುರುಷ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಜನ್ಮದಿನ