ಆಯುರ್ವೇದದ (Ayurveda) ಪ್ರಕಾರ ತುಂಬಾ ನಿಧಾನವಾಗಿ ಊಟ ಮಾಡುವುದರಿಂದ ಜೀರ್ಣಾಗ್ನಿ (ಅಗ್ನಿ) ದುರ್ಬಲವಾಗಬಹುದು. ಸರಿಯಾದ ವೇಗದಲ್ಲಿ ಊಟ ಮಾಡುವುದರಿಂದ ಆರೋಗ್ಯಕ್ಕೆ ಹೇಗೆ ಲಾಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಆಹಾರವನ್ನು ತುಂಬಾ ನಿಧಾನವಾಗಿ ಸೇವಿಸಬಾರದು. ಅತಿ ನಿಧಾನವಾಗಿ ಆಹಾರ ಸೇವಿಸಿದರೆ ತೃಪ್ತಿ ಅಥವಾ ತೃಪ್ತಿಯ ಭಾವನೆ ಬರುವುದಿಲ್ಲ. ಇದರಿಂದ ಹೆಚ್ಚು ಆಹಾರ ಸೇವಿಸಬೇಕು ಎಂಬ ಭಾವನೆ ಬರುತ್ತದೆ. ಜೊತೆಗೆ ಆಹಾರ ತಣ್ಣಗಾಗುತ್ತದೆ ಮತ್ತು ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಪ್ರಾಯೋಗಿಕವಾಗಿ ನೋಡಿದರೆ, ಟಿವಿ ನೋಡುತ್ತಾ, ಆತಂಕದಲ್ಲಿ ಅಥವಾ ವಿವಿಧ ಚಿಂತನೆಗಳಲ್ಲಿ ತೊಡಗಿಕೊಂಡು ಆಹಾರ ಸೇವಿಸುವವರು ತಮ್ಮ ಆಹಾರ ಸೇವನೆಯ ವೇಗವನ್ನು ಗಮನಿಸುವುದಿಲ್ಲ. ಇದರಿಂದ ಅವರು ಹೆಚ್ಚು ಆಹಾರ ಸೇವಿಸುವ ಸಾಧ್ಯತೆ ಇದೆ. ಜೊತೆಗೆ ಆಹಾರದ ಉತ್ತಮ ಅಥವಾ ದುಷ್ಟ ಗುಣಗಳನ್ನು ಸರಿಯಾಗಿ ಗಮನಿಸಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿ ತುರ್ತಾಗಿ ಆಹಾರ ಸೇವಿಸುವುದಕ್ಕೆ ಸಮಾನವಾಗಿದ್ದು, ಅಲ್ಲಿ ಉಂಟಾಗುವ ಮಾನಸಿಕ ಪರಿಣಾಮಗಳು ಇಲ್ಲಿ ಕೂಡ ಅನ್ವಯಿಸುತ್ತವೆ. ದೈಹಿಕವಾಗಿ ನೋಡಿದರೆ, ಪ್ರತಿಯೊಂದು ತುತ್ತು ಬಹಳ ಸಮಯ ತೆಗೆದುಕೊಂಡು ಸೇವಿಸುವುದರಿಂದ ಜೀರ್ಣಕ್ರಿಯೆಯ ವಿವಿಧ ಅವಸ್ಥಾಪಾಕಗಳು ಅಸಮರ್ಪಕವಾಗಿ ನಡೆಯುತ್ತವೆ ಮತ್ತು ಇದರ ಪರಿಣಾಮವಾಗಿ “ಆಮ”ಎಂಬ ಅಜೀರ್ಣಿತ ಪದಾರ್ಥ ಉತ್ಪತ್ತಿಯಾಗುತ್ತದೆ. ಈ ಆಮವು ಅನೇಕ ರೋಗಗಳ ಮೂಲ ಕಾರಣವಾಗುತ್ತದೆ. ಆದ್ದರಿಂದ ಆಹಾರವನ್ನು ಅತಿಯಾದ ತುರಿತದಲ್ಲಿಯೂ ಅಲ್ಲ, ಅತಿಯಾದ ನಿಧಾನದಲ್ಲಿಯೂ ಅಲ್ಲದೆ ಸಮಚಿತ್ತದಿಂದ ಸೇವಿಸಬೇಕು. ಸೂಚನೆ: ಪ್ರತಿ ವ್ಯಕ್ತಿಯ ದೇಹಪ್ರಕೃತಿ, ಆರೋಗ್ಯ ಸ್ಥಿತಿ ಹಾಗೂ ರೋಗಾವಸ್ಥೆ ವಿಭಿನ್ನವಾಗಿರುವುದರಿಂದ, ಸೂಕ್ತ ಮಾರ್ಗದರ್ಶನಕ್ಕಾಗಿ ನುರಿತ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ನಂತರವೇ ಅನುಸರಿಸಬೇಕು. ಇದನ್ನೂ ಓದಿ: ಆಹಾರವನ್ನು ಗಬ ಗಬನೆ ಸೇವಿಸಬಾರದು ಏಕೆ? ಇಲ್ಲಿದೆ ಕಾರಣ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Ayurveda Health Tips: ಆಹಾರವನ್ನು ಗಬ ಗಬನೆ ಸೇವಿಸಬಾರದು ಏಕೆ? ಇಲ್ಲಿದೆ ಕಾರಣ Ayurveda Health Tips: ಬಳಕುವ ಸೊಂಟ ಭಾರವಾಗದಿರಲಿ, ಬೊಜ್ಜು ಕರಗಿಸಲು ಆಹಾರ ಕ್ರಮ ಈ ರೀತಿ ಇರಲಿ