Ayurveda Health Tips: Eating these fruits with milk is not good for healthಸಾಂದರ್ಭಿಕ ಚಿತ್ರ

ಒಂದಕ್ಕೊಂದು ಹೊಂದಾಣಿಕೆಯಾಗದ ಶಕ್ತಿ ಅಥವಾ ಪ್ರಭಾವವಿರುವ ಆಹಾರಗಳನ್ನು ಒಟ್ಟಿಗೆ ಸೇವಿಸುವುದರಿಂದ ರೋಗಗಳು ಬರುತ್ತವೆ ಎಂದು ಆಯುರ್ವೇದಲ್ಲಿ (Ayurveda) ಹೇಳಲಾಗಿದೆ. ವೀರ್ಯ ವಿರೋಧವಾಗದ ಆಹಾರವನ್ನು ಸೇವಿಸಬೇಕು. ಇಲ್ಲಿ ವೀರ್ಯವೆಂದರೆ ಆಹಾರದ ಗುಣಧರ್ಮವೆಂದು ಅರ್ಥೈಸಿಕೊಳ್ಳಬೇಕು. ಆಹಾರದ ಗುಣಧರ್ಮ ವಿರುದ್ಧವಾಗಿ ಆಹಾರ ಸೇವಿಸಿದರೆ ಕುಷ್ಟ, ಅಂಧತ್ವ, ವಿಸರ್ಪ ಮುಂತಾದ ರೋಗಗಳು ಉಂಟಾಗುತ್ತವೆ.

ಆಹಾರದ ಗುಣಧರ್ಮದ ವಿರುದ್ಧ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಯುರ್ವೇದದಲ್ಲಿ ವಿವರಿಸಲಾಗಿದೆ. ಆಹಾರದ ಗುಣಧರ್ಮದ ವಿರುದ್ಧ ಆಹಾರ ಸೇವನೆ ಕುಷ್ಟ ಮತ್ತು ಶ್ವಿತ್ರ (ಲೆಕೋಡರ್ಮಾ) ಉಂಟಾಗುವ ಪ್ರಮುಖ ಕಾರಣಗಳಲ್ಲಿ ಒಂದೆಂದು ಹೇಳಲಾಗಿದೆ.

ದೇಹದ ದೋಷಗಳು ಮತ್ತು ಧಾತುಗಳಿಗೆ ವಿರುದ್ಧವಾಗಿ ಕೆಲಸಮಾಡುವ ಅಥವಾ ದೇಹದ ವ್ಯವಸ್ಥೆಗೆ ಹೊಂದಿಕೆಯಾಗದ ಆಹಾರವನ್ನು “ವಿರುಧ ಆಹಾರ” ಎಂದು ಕರೆಯಲಾಗುತ್ತದೆ. ಕೆಲವು ಆಹಾರ ಪದಾರ್ಥಗಳು ಸ್ವಭಾವತಃ ಹೊಂದಿಕೆಯಾಗುವುದಿಲ್ಲ.

ಉದಾಹರಣೆಗೆ ವಿಷದಂತಹವು. ಕೆಲವು ಪದಾರ್ಥಗಳು ಒಟ್ಟಿಗೆ ಸೇವಿಸಿದಾಗ ಮಾತ್ರ ವಿರೋಧವಾಗುತ್ತವೆ. ಉದಾಹರಣೆಗೆ ಹಾಲಿನೊಂದಿಗೆ ಹುಳಿ ಹಣ್ಣುಗಳನ್ನು ಸೇವಿಸುವುದು. ಕೆಲವು ಆಹಾರಗಳು ತಯಾರಿಸುವ ವಿಧಾನದಿಂದ, ಮತ್ತು ಕೆಲವು ಸ್ಥಳ, ಕಾಲ, ಪ್ರಮಾಣ ಇತ್ಯಾದಿ ಕಾರಣಗಳಿಂದ ವಿರೋಧವಾಗುತ್ತವೆ.

ವಿಪರೀತ ವೀರ್ಯ ಹೊಂದಿರುವ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದನ್ನು “ವೀರ್ಯ ವಿರುದ್ಧ” ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಅತೀ ಶೀತ ಹೊಂದಿರುವ ಪದಾರ್ಥವನ್ನು ಅತೀ ಉಷ್ಣ ವೀರ್ಯ ಹೊಂದಿರುವ ಪದಾರ್ಥದೊಂದಿಗೆ ಸೇವಿಸಿದರೆ ಅದನ್ನು ವೀರ್ಯ ವಿರುದ್ಧ ಎಂದು ಹೇಳುತ್ತಾರೆ.

ಹಾಲು ಮತ್ತು ಮೀನುಗಳನ್ನು ಒಟ್ಟಿಗೆ ಸೇವಿಸುವಂತಹ, ವೀರ್ಯಕ್ಕೆ ವಿರುದ್ಧವಾದ ಆಹಾರಗಳನ್ನು ತಪ್ಪಿಸಬೇಕು ಎಂದು ಹೇಳಲಾಗಿದೆ. ವಾಸ್ತವವಾಗಿ, ವಿರುದ್ಧ ಆಹಾರದಿಂದ ಉಂಟಾಗುವ ರೋಗಗಳನ್ನು ತಡೆಯಲು ಎಲ್ಲಾ ರೀತಿಯ ವಿರುದ್ಧ ಆಹಾರಗಳನ್ನು ಸಾಧ್ಯವಾದಷ್ಟು ದೂರವಿರಿಸುವುದು ಉತ್ತಮ.

ಇದನ್ನೂ ಓದಿ: ಆಯುರ್ವೇದ ಹೆಲ್ತ್‌ ಟಿಪ್ಸ್‌: ದೇಹದ ಆರೋಗ್ಯ ಕಾಪಾಡಲು ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ವಿಧಾನ  

ಸೂಚನೆ : ಪ್ರತಿ ವ್ಯಕ್ತಿಯ ದೇಹಪ್ರಕೃತಿ, ಆರೋಗ್ಯ ಸ್ಥಿತಿ ಹಾಗೂ ರೋಗಾವಸ್ಥೆ ವಿಭಿನ್ನವಾಗಿರುವುದರಿಂದ, ಸೂಕ್ತ ಮಾರ್ಗದರ್ಶನಕ್ಕಾಗಿ ನುರಿತ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ನಂತರವೇ ಅನುಸರಿಸಬೇಕು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *