Ayurveda Health Tips: Diseases Caused by Drinking Less Water According to Ayurvedaಸಾಂದರ್ಭಿಕ ಚಿತ್ರ

ನೀರು ಕಡಿಮೆ ಕುಡಿಯುವುದರಿಂದ ಕೆಲವು ನಿರ್ದಿಷ್ಟ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಆಹಾರ ತಿನ್ನುವ ಆಸಕ್ತಿ ಕಡಿಮೆಯಾಗುವುದು, ಶೀತ, ಹಸಿವಿನ ಕೊರತೆ, ಬಾವು, ಕ್ಷಯರೋಗ, ಅತಿಯಾದ ಜೊಲ್ಲು ಸುರಿಯುವಿಕೆ, ಜ್ವರ, ಮಧುಮೇಹ, ಗಾಯಗಳು, ರಕ್ತಹೀನತೆ (Anemia), ಮೂಲವ್ಯಾಧಿ (Piles), ಜಲೋದರ (Ascites) ಮತ್ತು ಗ್ರಹಣಿ ಅಥವಾ ಜೀರ್ಣನಾಳದ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀರು ಕುಡಿಯಬೇಕು.

ನೀರಿನ ಸೇವನೆಯ ಪ್ರಮಾಣವು ಹವಾಮಾನ, ದೈಹಿಕ ಶ್ರಮ, ಆಹಾರ ಪದ್ಧತಿ ಮತ್ತು ವ್ಯಾಯಾಮಕ್ಕೆ ಅನುಗುಣವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ರಸಭರಿತ ಹಣ್ಣುಗಳು, ತರಕಾರಿಗಳು ಹಾಗೂ ಬೇಯಿಸಿದ ಬೇಳೆಕಾಳುಗಳಂತಹ ನೀರಿನಂಶ ಹೆಚ್ಚಿರುವ ಆಹಾರವನ್ನು ಸೇವಿಸುವವರಿಗೆ ನೀರಿನ ಅಗತ್ಯತೆ ಕಡಿಮೆಯಿರಬಹುದು.

ವ್ಯಾಧಿಗೆ ಅನುಗುಣವಾಗಿ ನೀರಿನ ಸೇವನೆ

ಬಿಸಿ ನೀರು ಅನ್ನು ಬಿಕ್ಕಳಿಕೆ, ಉಬ್ಬಸ, ಜ್ವರ, ಶೀತ ಮತ್ತು ಗಂಟಲಿನ ಅಸ್ವಸ್ಥತೆಗಳ ಸಂದರ್ಭದಲ್ಲಿ ಸೇವಿಸಬೇಕು. ಆದರೆ, ಅತಿಯಾದ ಮದ್ಯಪಾನ ಮಾಡಿದವರು, ದೇಹದಲ್ಲಿ ಉರಿ ಅಥವಾ ಅತಿಯಾದ ಶಾಖವಿರುವವರು, ರಕ್ತಸ್ರಾವದ ವ್ಯಾಧಿ ಮತ್ತು ಮಧುಮೇಹದಿಂದ ಬಳಲುತ್ತಿರುವವರು ಬಿಸಿ ನೀರನ್ನು ಕುಡಿಯಬಾರದು. ತಣ್ಣೀರು ಕುಡಿಯುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ.

ಇದು ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುವುದಲ್ಲದೆ ದೇಹಕ್ಕೆ ಅಗತ್ಯವಿರುವ ಜಲ ಸಂಯೋಜನೆಯನ್ನು ತಡೆಯುತ್ತದೆ. ಆದ್ದರಿಂದ, ಜೀರ್ಣಕ್ರಿಯೆಯಲ್ಲಿ ಏರುಪೇರಾದಾಗ ಬಿಸಿ ನೀರನ್ನು ಕುಡಿಯುವುದು ಹೆಚ್ಚು ಸೂಕ್ತ.

ತಣ್ಣೀರು, ಮದ್ಯದ ಅಮಲು, ಪ್ರಜ್ಞೆ ತಪ್ಪುವುದು, ವಾಂತಿ, ದೈಹಿಕ ಆಯಾಸ, ತಲೆಸುತ್ತು, ಅತಿಯಾದ ಬಾಯಾರಿಕೆ, ದೇಹದ ಉರಿ, ರಕ್ತಸ್ರಾವ ಹಾಗೂ ರಕ್ತ ಮತ್ತು ಪಿತ್ತದೋಷದಿಂದ ಉಂಟಾಗುವ ಕಾಯಿಲೆಗಳಿಗೆ ಉತ್ತಮ ಪರಿಹಾರವಾಗಿದೆ.

ಆದಾಗ್ಯು, ಎದೆನೋವು, ಸಂಧಿವಾತ, ಹೊಟ್ಟೆ ಉಬ್ಬರ, ಮಲಬದ್ಧತೆ, ಬಿಕ್ಕಳಿಕೆ ಮತ್ತು ಜ್ವರ ಇರುವಾಗ ತಣ್ಣೀರನ್ನು ಸೇವಿಸಬಾರದು. ಅಲ್ಲದೆ, ಪಂಚಕರ್ಮದಂತಹ ಶುದ್ಧೀಕರಣ ಚಿಕಿತ್ಸೆಗೆ ಒಳಗಾದವರು ಮತ್ತು ಗಂಟಲು ನೋವು ಇರುವವರು ತಣ್ಣೀರಿನಿಂದ ದೂರವಿರಬೇಕು.

ನೀರು ಕುಡಿಯುವ ಸರಿಯಾದ ಕ್ರಮ

ಆಯುರ್ವೇದದ ಪ್ರಕಾರ, ಹೊಟ್ಟೆಯ ಅರ್ಧ ಭಾಗವು (2/4) ಆಹಾರದಿಂದ, ಕಾಲು ಭಾಗವನ್ನು (1/4) ನೀರಿನಿಂದ ಮತ್ತು ಉಳಿದ ಕಾಲು ಭಾಗವನ್ನು (1/4) ಗಾಳಿಗಾಗಿ ಖಾಲಿ ಬಿಡಬೇಕು. ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *