ಕೃತಕ ಬುದ್ಧಿಮತ್ತೆ (AI) ಕ್ಷೇತ್ರವು ಮಹಿಳೆಯರ ವೃತ್ತಿಜೀವನದಲ್ಲಿ ಬದಲಾವಣೆಯನ್ನು ತರುತ್ತಿದ್ದು, ಹೆಚ್ಚಿನ ಪ್ರೋತ್ಸಾಹ ದೊರೆತಲ್ಲಿ 10 ರಲ್ಲಿ 9 ಮಂದಿ ಮಹಿಳೆಯರು ಎಐ ಆಧರಿತ ಉದ್ಯೋಗಗಳಿಗೆ ಸಿದ್ದರಾಗಿದ್ದಾರೆ ಎಂದು ಎಎನ್‌ಎಸ್‌ಆರ್ ಮತ್ತು ಟ್ಯಾಲೆಂಟ್-500 ಸಹಯೋಗದಲ್ಲಿ ಪ್ರಕಟಿಸಿದ ‘ವಿಮೆನ್ ಇನ್ ಟೆಕ್ನಾಲಜಿ-2026’ ವರದಿ ತಿಳಿಸಿದೆ. ಶೇ. 60ರಷ್ಟು ಮಹಿಳೆಯರು ಈ ಕ್ಷೇತ್ರಕ್ಕೆ ಪ್ರವೇಶಿಸಲು ಇಚ್ಛೆ ವ್ಯಕ್ತಪಡಿಸಿರುವುದು, ದೊಡ್ಡ ಮಟ್ಟದ ಪ್ರತಿಭೆ ಇನ್ನೂ ಬಳಕೆಯಾಗದೇ ಉಳಿದಿದೆ ಎಂಬುದನ್ನು ಸೂಚಿಸುತ್ತದೆ. ಎಐ ಕೌಶಲಗಳು ಮಹಿಳೆಯರ ವೃತ್ತಿಜೀವನದಲ್ಲಿ ತಾರತಮ್ಯ ಧೋರಣೆಗೆ ಕಾರಣವಾಗುತ್ತಿವೆ. ಅದರಲ್ಲಿಯೂ ಈಗ ಎಐ ಸಾಮರ್ಥ್ಯವೇ ಉನ್ನತ ಹುದ್ದೆಗಳಿಗೆ ಏರಲು ಪ್ರಮುಖ ಅಂಶವಾಗುತ್ತಿದೆ ಎಂದು ವರದಿ ಹೇಳಿದೆ. ತಾಂತ್ರಿಕ ಕ್ಷೇತ್ರದಲ್ಲಿ ಹಿನ್ನಡೆ ಸುಮಾರು 2,500 ಮಹಿಳಾ ವೃತ್ತಿಪರರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಐಟಿ, ಐಟಿಇಎಸ್ ಗ್ಲೋಬಲ್ ಕೆಪೆಬಿಲಿಟಿ ಸೆಂಟರ್‌ಗಳು (ಜಿಸಿಸಿಸಿಎಸ್), ಸ್ಟಾರ್ಟ್‌ಪ್ ಮತ್ತು ಉತ್ಪಾದನಾ ಕಂಪನಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಎಐ ಹೇಗೆ ನಾಯಕತ್ವದ ಅವಕಾಶಗಳನ್ನು ರೂಪಿಸುತ್ತಿದೆ ಮತ್ತು ಮಹಿಳೆಯರ ವೃತ್ತಿಜೀವನದ ದಿಕ್ಕನ್ನು ಬದಲಿಸುತ್ತಿದೆ ಎಂಬುದರ ಸ್ಪಷ್ಟ ಚಿತ್ರಣವನ್ನು ವರದಿ ಉಲ್ಲೇಖಿಸಿದೆ. ‘ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಮಹಿಳಾ ಸ್ಟೆಮ್ ಪದವೀಧರರನ್ನು (ಶೇ.43) ನೀಡುತ್ತಿದ್ದರೂ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಕಡಿಮೆಯಾಗಿದೆ. ಆರಂಭಿಕ ಹಂತದ ಉದ್ಯೋಗಗಳಲ್ಲಿ ಶೇ. 29ರಷ್ಟು ಮಾತ್ರ ಮಹಿಳೆಯರಿದ್ದು, ಉನ್ನತ ನಿರ್ವಹಣಾ ಹುದ್ದೆಗಳಲ್ಲಿ ಅದು ಕೇವಲ ಶೇ.14ಕ್ಕೆ ಇಳಿದಿದೆ. ಇದು ಪ್ರತಿಭೆಯ ಕೊರತೆಯಲ್ಲ, ಬದಲಾಗಿ ಇದು ವ್ಯವಸ್ಥೆಯ ದೋಷ” ಎಂದು ವರದಿ ಸ್ಪಷ್ಟಪಡಿಸಿದೆ ಉನ್ನತ ಹುದ್ದೆಗಳಲ್ಲಿ ಇಳಿಕೆ ಭಾರತದ ಜಿಸಿಸಿಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಸ್ವಲ್ಪಮಟ್ಟಿಗೆ ಉತ್ತಮವಾಗಿದ್ದು, ಒಟ್ಟು ನಾಯಕತ್ವ ಹುದ್ದೆಗಳಲ್ಲಿ ಸುಮಾರು ಶೇ. 16-17ರಷ್ಟು ಮಹಿಳೆಯರಿದ್ದಾರೆ. ಆದರೆ ಪ್ರವೇಶ ಹಂತದಿಂದ ಉನ್ನತ ಹುದ್ದೆಗಳವರೆಗೆ ಮಹಿಳೆಯರ ಪ್ರಮಾಣದಲ್ಲಿ ಸುಮಾರು ಶೇ. 40ರಷ್ಟು ಇಳಿಕೆ ಕಂಡುಬರುತ್ತಿರುವುದು ಇನ್ನೂ ದೊಡ್ಡ ಸವಾಲಾಗಿದೆ. ಎಐ ಕ್ಷೇತ್ರವು ಮಹಿಳೆಯರಿಗೆ ಹೊಸ ಅವಕಾಶಗಳನ್ನು ನೀಡುತ್ತಿದ್ದರೂ, ಸಂಸ್ಥೆಗಳು ಸರಿಯಾದ ನೀತಿಗಳನ್ನು ಅನುಸರಿಸಿ ಬೆಂಬಲ ನೀಡಿದಾಗ ಮಾತ್ರ ಈ ಅವಕಾಶಗಳು ಸಂಪೂರ್ಣವಾಗಿ ಪ್ರಯೋಜನಕಾರಿಯಾಗುತ್ತವೆ. ಎಐ ಅನ್ನು ಸಮರ್ಪಕವಾಗಿ ಬಳಸಿದರೆ ಮಹಿಳೆಯರ ಮತ್ತು ಸಂಸ್ಥೆಗಳ ಬೆಳವಣಿಗೆ ಸಾಧ್ಯವಾಗಲಿದೆ ಎಂದು ತಜ್ಞರು ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಎಐ ಬಲ್ಲವರಿಗೆ ಹೆಚ್ಚಿನ ಪ್ರಾಶಸ್ತ್ರ ಎಐ ಬಳಕೆಯಿಂದ ಮಹಿಳೆಯರ ವೃತ್ತಿಜೀವನದಲ್ಲಿ ವೇಗದ ಬದಲಾವಣೆ ಕಂಡುಬರುತ್ತಿದೆ. ಶೇ 64ರಷ್ಟು ಮಹಿಳೆಯರು ಎಐ ಬಳಕೆ ಉನ್ನತ ಹುದ್ದೆಗಳಿಗೆ ಪ್ರಾಶಸ್ತ್ರ ನೀಡುತ್ತಿದ್ದು, ಇದರಿಂದಾಗಿ ಎಐ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವವರು ಹೆಚ್ಚು ವೇಗವಾಗಿ ಬೆಳೆಯುವ ಸಾಧ್ಯತೆ ಇದೆ. ಇದಲ್ಲದೆ, ಶೇ.65 ಮಹಿಳೆಯರು ಎಐ ಅವಕಾಶಗಳ ಬಗ್ಗೆ ಆಶಾವಾದ ಹೊಂದಿದ್ದು, ಶೇ 36ರಷ್ಟು ಮಹಿಳೆಯರು ಅತ್ಯಂತ ವಿಶ್ವಾಸದಿಂದ ಇದ್ದಾರೆ. ಶೇ 69ರಷ್ಟು ಮಹಿಳೆಯರು ಎಐ ಹೊಸ ಉದ್ಯೋಗ ಮಾರ್ಗಗಳನ್ನು ತೆರೆದಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಪ್ರಾಡಕ್ಟ್ ಎಂಜಿನಿಯರಿಂಗ್, ಎಐ ಆಡಳಿತ ಮತ್ತು ಪರಿವರ್ತನಾ ನಾಯಕತ್ವ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಕಂಡುಬರುತ್ತಿವೆ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಮೊದಲ ಬಾರಿಗೆ ಡಿಜಿಟಲ್ ಮೂಲಕ ಜನಗಣತಿ: ಇದೇ ಏ. 1 ರಿಂದ ಆನ್ಲೈನ್ನಲ್ಲಿ ಮಾಹಿತಿ ಸಲ್ಲಿಕೆ ಆರಂಭ 55°C ತಾಪಮಾನ ನೀರಿಗಾಗಿ ಹಾಹಾಕಾರ: ಮರುಭೂಮಿಯಲ್ಲಿ ಗಂಗೆ ಹರಿಸಿ ಭಗೀರಥರಾದ ಭಾರತೀಯ ಯೋಧರು, ವಿಡಿಯೋ ನೋಡಿ