ಬೇಸಿಗೆ (Summer) ಆರಂಭವಾಗಿದ್ದು, ನೀರಿನ ಮೂಲಗಳು ಬತ್ತುತ್ತಿವೆ. ಇದರಿಂದ ಜನ-ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುತ್ತಿವೆ. ಅದರಲ್ಲಂತು ರಾಜಸ್ಥಾನ ಮರುಭೂಮಿಯಲ್ಲಿ (Rajasthan Desert) ವಾಸಿಸುವ ಜನರ ಬವಣೆ ಹೇಳತೀರದು. ನೀರಿಗಾಗಿ ಹಾಹಾಕಾರ ಶುರುವಾಗಿದೆ. 55°C ತಾಪಮಾನವಿದ್ದು, ಕೊಳ, ಬಾವಿಗಳು ಬತ್ತಿ ಹೋಗಿವೆ. ಜನರು ಕಿಲೋಮೀಟರ್‌ಗಟ್ಟಲೇ ಹೋಗಿ ನೀರು ತರುವಂತಹ ಪರಿಸ್ಥಿತಿ ಎದುರಾಗಿತ್ತು. ಪ್ರಾಣಿ-ಪಕ್ಷಿಗಳು ನೀರಿಲ್ಲದೆ ನರಳಾಡಿ ಪ್ರಾಣಬಿಡುತ್ತಿವೆ. ಈ ದೃಶ್ಯಗಳಂತೂ ಮನಕಲಕುವಂತಿವೆ. ಈ ದೃಶ್ಯಗಳನ್ನು ಕಂಡ ಭಾರತೀಯ ಯೋಧರು ಜನ-ಜಾನುವಾರಗಳ ಸಹಾಯಕ್ಕೆ ಧಾವಿಸಿದ್ದಾರೆ. ಹೌದು, ಮರಳಿನ ಕೆಳಗೆ ಹೂತುಹೋಗಿದ್ದ ಹಳೆಯ ಕೊಳಗಳನ್ನು ಪುನರುಜ್ಜೀವನಗೊಳಿಸುವ ಮೂಲಕ, ನೀರು ತರಸಿದ್ದಾರೆ. ಅಲ್ಲಲ್ಲಿ ಹುದುಗಿ ಹೋಗಿದ್ದ ಕೊಳಗಳಿಗೆ ಪುನರುಜ್ಜೀವ ನೀಡಿ ಆಧುನಿಕ ಭಗೀರಥರಾಗಿದ್ದಾರೆ. ವಿಡಿಯೋ ನೋಡಿ ದೇಶಸೇವೆ ಎಂದರೇ ಗಡಿ ಕಾಯುವುದು ಮಾತ್ರವಲ್ಲ, ಗಡಿಯೊಳಗಿನ ಜನರ ಕಷ್ಟಗಳನ್ನು ಬಗೆಹರಿಸುವುದು ಕೂಡ ದೇಶಸೇವೆ ಎಂದು ಭಾರತೀಯ ಯೋಧರು ತೋರಿಸಿಕೊಟ್ಟಿದ್ದಾರೆ. ಭಾರತೀಯ ಯೋಧರ ಈ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Hats off to Indian Soldiers ಎಂದು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ. ನೆಟ್ಟಿಗರು ವಿಡಿಯೋಗೆ ಲೈಕ್, ಶ್ಲಾಘನೀಯ ಕಾಮೆಂಟ್ ಮತ್ತು ರಿಪೋಸ್ಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation AI ಬಳಕೆಯಲ್ಲೂ ಮಹಿಳೆಯರದ್ದೇ ಮೇಲುಗೈ! CBSE ಹೊಸ ಪಠ್ಯಕ್ರಮ: ತ್ರಿಭಾಷಾ ಸೂತ್ರ ಕಡ್ಡಾಯ, 2 ದೇಶಿ ಭಾಷೆ ಕಲಿಕೆ, ಇಂಗ್ಲಿಷ್ ವಿದೇಶಿ ಭಾಷೆ