Uterine Cancer: Causes, Symptoms, Prevention and What is HPV Vaccineಡಾ|| ನರ್ಮತಾ. ಪಿ

ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಹೆಚ್ಚಾಗಿ ಕಾಡುತ್ತಿರುವ ಗರ್ಭಕೋಶ ಕ್ಯಾನ್ಸರ್‌ ತಡೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಹ್ಯೂಮನ್ ಪ್ಯಾಪಿಲ್ಲೋಮವಿರುಸ್ (HPV) ಲಸಿಕೆ ಅಭಿಯಾನವನ್ನು ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದ ಅಜ್ಮೀರ್‌ನಲ್ಲಿ ಹೆಚ್‌ಪಿವಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಲಸಿಕೆಯನ್ನು 14 ವರ್ಷದ ಬಾಲಕೀಯರಿಗೆ ದೇಶಾದ್ಯಂತ ಉಚಿತವಾಗಿ ನೀಡಲಾಗುತ್ತದೆ. ಹಾಗಿದ್ದರೆ ಏನಿದು ಗರ್ಭಕೋಶ ಕ್ಯಾನ್ಸರ್‌, ಯಾಕೆ ಬರುತ್ತೆ? ಹೇಗೆ ಬರುತ್ತೆ? ಲಕ್ಷಣಗಳೇನು? ಮತ್ತು 14 ವರ್ಷದ ಬಾಲಕಿಯರಿಗೆನೇ ಏಕೆ ಈ ಲಸಿಕೆ ನೀಡಲಾಗುತ್ತಿದೆ? ಎಂಬುವುದರ ಕುರಿತು ವೈದ್ಯೆ. ನಮ್ರತಾ. ಪಿ ಅವರ ಸಂದರ್ಶನ ಇಲ್ಲಿದೆ.

ಗರ್ಭಕೋಶ ಕ್ಯಾನ್ಸರ್‌ ಹೇಗೆ ಬರುತ್ತೆ?

ಮಹಿಳೆಯರಿಗೆ ಗರ್ಭಕೋಶ ಕ್ಯಾನ್ಸರ್‌ ಹ್ಯೂಮನ್ ಪ್ಯಾಪಿಲೋಮ ವೈರಸ್‌ನಿಂದ (HPV) ಬರುತ್ತದೆ. ಇನ್ನು, ಈ  ಹ್ಯೂಮನ್ ಪ್ಯಾಪಿಲೋಮ ವೈರಸ್‌ (HPV) ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಂಡಾಗ ಮಹಿಳೆಯರ ದೇಹ ಸೇರುತ್ತದೆ. ಹಾಗಂತ, ಲೈಂಗಿಕಕ್ರಿಯೆಯಲ್ಲಿ ತೊಡಗಿಕೊಂಡ ಎಲ್ಲ ಮಹಿಳೆಯರ ದೇಹದಲ್ಲಿ ಈ ವೈರಸ್‌ ಸೇರುತ್ತಾ? ಇಲ್ಲ. ಗರ್ಭಕೋಶ ಕ್ಯಾನ್ಸರ್‌ ಬರುವುದು ತುಂಬಾ ಕಡಿಮೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದು, ಚಿಕ್ಕವಯಸ್ಸಿನಲ್ಲೇ ಅಸುರಕ್ಷಿತವಾಗಿ, ಬಹಳ ಸಲ ವಿವಿಧ ಪುರುಷರೊಂದಿಗೆ ಲೈಂಗಿಕ್ರಿಕೆಯಲ್ಲಿ ತೊಡಗಿಕೊಂಡಿದ್ದರೆ ಮಾತ್ರ ಗರ್ಭಕೋಶ ಕ್ಯಾನ್ಸರ್‌ ಬರುವ ಸಾಧ್ಯತೆ ಇರುತ್ತದೆ. ಗರ್ಭಕೋಶ ಕ್ಯಾನ್ಸರ್‌ ಅಂದ್ರೆ ಗರ್ಭಕೋಶದಲ್ಲಿ ಮಾಂಸಗಡ್ಡೆ ಬೆಳೆಯುತ್ತದೆ.

ಗರ್ಭಕೋಶ ಕ್ಯಾನ್ಸರ್‌ ಬರಲು 3 ಕಾರಣ

ಗರ್ಭಕೋಶ ಕ್ಯಾನ್ಸರ್‌ನಲ್ಲಿ ಮೂರು ಪ್ರಕಾರಗಳಿವೆ. ಮೊದಲನೆಯದ್ದು ಸಣ್ಣ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ, ಎರಡನೇಯದ್ದು ಅಸುರಕ್ಷಿತ ನಿರಂತರ ಲೈಂಗಿಕ ಚಟುವಟಿಕೆ ಮತ್ತು ಮೂರನೇಯದ್ದು ಬೇರೆ ಬೇರೆ ವ್ಯಕ್ತಿಯೊಂದಿಗೆ ಲೈಂಗಿಕಕ್ರಿಯೆ ನಡೆಸುವ ಮಹಿಳೆಯರ ದೇಹದಲ್ಲಿ ಈ ವೈರಸ್‌ ಸೇರುತ್ತದೆ.

ಈ ಮೂರು ಪ್ರಮುಖ ಕಾರಣಗಳು ಮಹಿಳೆಯರ ದೇಹದಲ್ಲಿ ಹೆಚ್‌ಪಿವಿ ವೈರಸ್‌ ಸೇರಲು. ಇವುಗಳನ್ನು ಹೊರತುಪಡಿಸಿಯೂ ಇನ್ನೂ ಕೆಲ ಕಾರಣಗಳಿವೆ. ಅದು, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುವಂತಹ ಚಟಗಳಿಂದ ಈ ವೈರಸ್‌ ಬರುತ್ತದೆ. ಊದಾ: ಧೂಮಪಾನ ಇತ್ಯಾದಿ.

ವೈರಸ್‌ ಕ್ಯಾನ್ಸರ್‌ ಆಗಿ ಬದಲಾಗಲು ಎಷ್ಟು ಸಮಯ ಬೇಕು?

ಹೆಚ್‌ಪಿವಿ ವೈರಸ್‌ ಗರ್ಭಕೋಶದ ಕ್ಯಾನ್ಸರ್‌ ಆಗಿ ಬದಲಾಗಲು 10-20 ವರ್ಷ ಸಮಯ ತೆಗೆದುಕೊಳ್ಳುತ್ತದೆ. ಆದ್ರೆ, ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಹಿಳೆಯರಲ್ಲಿ ಈ ವೈರಸ್‌ 5 ರಿಂದ 10 ವರ್ಷದ ಒಳಗೆ ಗರ್ಭಕೋಶ ಕ್ಯಾನ್ಸರ್‌ ಆಗಿ ಬದಲಾಗುತ್ತದೆ.

ಉದಾ: ಓರ್ವ ಹೆಣ್ಣಮಗಳು 16 ವರ್ಷದವಳಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೇ, ಆಕೆಯ ದೇಹದಲ್ಲಿ ಹೆಚ್‌ಪಿವಿ ವೈರಸ್‌ ಸೇರಿಕೊಂಡ 10 ರಿಂದ 20 ವರ್ಷಗಳ ನಂತರ ಅಂದ್ರೆ ಆಕೆಯ 30ನೇ ವಯಸ್ಸಿನಲ್ಲಿ ಗರ್ಭಕೋಶ ಕ್ಯಾನ್ಸರ್‌ ಬರುವ ಸಾಧ್ಯತೆ ಇರುತ್ತದೆ. ಗರ್ಭಕೋಶ ಕ್ಯಾನ್ಸರ್‌ ಮಹಿಳೆಯರಿಗೆ ಬರುವ ನಾಲ್ಕು ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ.

ಗರ್ಭಕೋಶದ ಕ್ಯಾನ್ಸರ್‌ ಲಕ್ಷಣ

ಗರ್ಭಕೋಶದ ಕ್ಯಾನ್ಸರ್‌ ಲಕ್ಷಣಗಳೆಂದರೇ, ಗರ್ಭದ (Cervix) ಹತ್ತಿರ ಮಾಂಸಗಡ್ಡೆ ಬೆಳೆಯುತ್ತದೆ. ಋತುಚಕ್ರದ ಮಧ್ಯದಲ್ಲಿ ಅಧಿಕ ರಕ್ತಸ್ರಾವವಾಗುತ್ತದೆ. ಈ ಲಕ್ಷಣಗಳು ಪ್ರಾರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ನಿರ್ಲಕ್ಷ್ಯವಹಿಸಿದರೇ ಗರ್ಭಕೋಶದ ಕ್ಯಾನ್ಸರ್‌ ದೊಡ್ಡದಾಗಿ ಬೆಳೆಯುತ್ತದೆ. ಇನ್ನು, ಋತುಚಕ್ರ ಸಮಯ ಹೊರತುಪಡಿಸಿ ಬೇರೆ ಸಂದರ್ಭದಲ್ಲೂ ರಕ್ತಸ್ರಾವವಾಗುತ್ತಿದ್ದರೂ, ಅದು ಗರ್ಭಕೋಶದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಕೂಡಲೇ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಬೇಕು.

ಪ್ರಾಥಮಿಕ ಹಂತದಲ್ಲಿನ ಲಕ್ಷಣಗಳನ್ನು ನಿರ್ಲಕ್ಷ್ಯವಹಿಸಿದರೆ ಗರ್ಭಕೋಶದ ಕ್ಯಾನ್ಸರ್‌ ಹೆಚ್ಚಿಗೆ ಆಗುತ್ತಾ ಹೋಗುತ್ತದೆ. ಗರ್ಭಕೋಶ ಕ್ಯಾನ್ಸರ್‌ ಪ್ರಾಥಮಿಕ ಹಂತದಲ್ಲಿರುವಾಗ ಶಸ್ತ್ರಚಿಕಿತ್ಸೆ ಮೂಲಕ ಬೆಳೆದಿರುವ ಚಿಕ್ಕ ಮಾಂಸಗಡ್ಡೆಯನ್ನು ತೆಗೆದು, ನಂತರ ರೇಡಿಯೋ ಥೇರಿಪಿ ನೀಡಿ ಹರಡಿರುವ ಮಾಂಸಗಡ್ಡೆಯನ್ನು ನಾಶಪಡಿಸಲಾಗುತ್ತದೆ. ಈ ಮುಖಾಂತರ ಗರ್ಭಕೋಶ ಕ್ಯಾನ್ಸರ್‌ ಅನ್ನು ಗುಣಮುಖ ಮಾಡಬಹುದು.

ಆದ್ರೆ, ಗರ್ಭಕೋಶದ ಕ್ಯಾನ್ಸರ್‌ 2 ಮತ್ತು 3 ಹಂತಕ್ಕೆ ತಲುಪಿದಾಗ ಆಪರೇಷನ್‌ನಿಂದಲೂ ನಿವಾರಣೆ ಮಾಡಲು ಆಗಲ್ಲ. ಈ ಸಂದರ್ಭದಲ್ಲಿ ಕಿಮಿಯೋ ಥೆರಪಿ ಮೂಲಕ ಅದು ದೇಹದಲ್ಲಿ ಹರಡದಂತೆ ತಡೆಯಬಹುದು. ಆದ್ರೆ ಸಂಪೂರ್ಣವಾಗಿ ಗುಣಮುಖ ಮಾಡಲು ಸಾಧ್ಯವೇ ಇಲ್ಲ. ಈ ಗರ್ಭಕೋಶ ಕ್ಯಾನ್ಸರ್‌ನಿಂದ ಸಾವು ಕೂಡ ಸಂಭವಿಸುತ್ತದೆ.

ಗರ್ಭಕೋಶದ ಕ್ಯಾನ್ಸರ್‌ ಪ್ರೆಗ್ನೆನ್ಸಿ ಸಂದರ್ಭದಲ್ಲಿ ಬರುತ್ತಾ?

ಮೊದಲನೇ ಹೆಚ್‌ಪಿವಿ ವೈರಸ್‌ ದೇಹದೊಳಗೆ ಸೇರಿಕೊಂಡು 10 ರಿಂದ 20 ವರ್ಷದ ನಂತರ ಗರ್ಭಕೋಶದ ಕ್ಯಾನ್ಸರ್‌ ಬರುತ್ತದೆ. ಅಂದ್ರೆ, 16ನೇ ವಯಸ್ಸಿನಲ್ಲೇ ಹೆಚ್‌ಪಿವಿ ವೈರಸ್‌ ದೇಹದೊಳಗೆ ಸೇರಿಕೊಂಡರೇ, ಅದು ಗರ್ಭಕೋಶ ಕ್ಯಾನ್ಸರ್‌ ಆಗಿ 30ನೇ ವಯಸ್ಸಿನಲ್ಲಿ ಬದಲಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದರೇ, ಆ ಮಹಿಳೆಯು ಗರ್ಭಕೋಶ ಕ್ಯಾನ್ಸರ್‌ನೊಂದಿಗೆ ಗರ್ಭ ಧರಿಸುತ್ತಾರೆ.

ಗರ್ಭಿಯರಿಗೆ ಗರ್ಭಕೋಶ ಕ್ಯಾನ್ಸರ್‌ನಿಂದಾಗುವ ಸಮಸ್ಯೆ

ಗರ್ಭಕೋಶ (Uterus) ಬೆಳೆಯುತ್ತಾ ಹೋದಂತೆ ಗರ್ಭಕೋಶದ ಮಾಂಸಗಡ್ಡೆ ಅಗಲವಾಗುತ್ತಿದ್ದಂತೆ ತುಂಬಾ ರಕ್ತಸ್ರಾವ ಆಗುವ ಸಾಧ್ಯತೆ ಇರುತ್ತದೆ. ತುಂಬಾ ರಕ್ತಸ್ರಾವ ಆಗಿ, ದೇಹದಲ್ಲಿ ರಕ್ತ ಕಡಿಮೆಯಾಗಿ ಅನೀಮಿಯಾ ಬರಬಹುದು.

ಮಗು ಬೆಳೆಯುವ ಸಮಯದಲ್ಲಿ ಗರ್ಭಕೋಶ ಕ್ಯಾನ್ಸರ್‌ ತೊಂದರೆ ಕೊಟ್ಟಿಲ್ಲ ಅಂದ್ರೆ, ನಾರ್ಮಲ್‌ ಡೆಲೆವರಿ ಸಮಯದಲ್ಲಿ ತೊಂದರೆ ಆಗುತ್ತದೆ. ಗರ್ಭಕೋಶ ಕ್ಯಾನ್ಸರ್‌ ಮಗು ಹೊರಗಡೆ ಬರುವ ಭಾಗವನ್ನು (ಸೆರ್ವಿಕ್‌) ಅನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮುಚ್ಚುತ್ತದೆ. ಇದರಿಂದ ಮಗುವನ್ನು ಹೊರಗಡೆ ತೆಗೆಯಲು ಸಾಧ್ಯವಾಗದೆ ಇರುಬಹುದು. 

ಗರ್ಭಕೋಶ ಕ್ಯಾನ್ಸರ್‌ ಬರದಂತೆ ತಡೆಗಟ್ಟುವುದು ಹೇಗೆ?

ಕೇಂದ್ರ ಸರ್ಕಾರ ಆರಂಭಿಸಿರುವ HPV ಉಚಿತ ವ್ಯಾಕ್ಸಿನ್‌ ಅನ್ನು 14 ರಿಂದ 15 ವರ್ಷದ ಎಲ್ಲ ಹೆಣ್ಣುಮಕ್ಕಳು ಹಾಕಿಸಿಕೊಳ್ಳಬೇಕು.

ಏಕೆ 14 ವರ್ಷದ ಹೆಣ್ಣುಮಕ್ಕಳಿಗೆನೇ HPV ವ್ಯಾಕ್ಸಿನ್‌ ಯಾಕೆ?

14 ವರ್ಷದ ಮಕ್ಕಳು ಇನ್ನೂ ಲೈಂಗಿಕ್ರಿಯೆಯಲ್ಲಿ ತೊಡಗಿಕೊಂಡಿರುವುದಿಲ್ಲ. ಈ ವಯಸ್ಸಿನ ಹೆಣ್ಣುಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಹೀಗಾಗಿ, ಇವರಿಗೆ HPV ವ್ಯಕ್ಸಿನ್‌ ಕೊಟ್ರೆ ಅವರ ದೇಹದಲ್ಲಿ ರೋಗನಿರೋಧಕ ಶಕ್ತಿ ಇನ್ನೂ ಹೆಚ್ಚಾಗುತ್ತದೆ. ಒಂದು ವೇಳೆ ಲೈಂಗಿಕಕ್ರಿಯೆಯಲ್ಲಿ ತೊಡಗಿಸಿಕೊಂಡ ಹೆಣ್ಣುಮಕ್ಕಳಿಗೆ ಈ ವ್ಯಾಕ್ಸಿನ್‌ ಕೊಟ್ರೆ ಯಾವುದೇ ಉಪಯೋಗವಾಗುವುದಿಲ್ಲ.

ವ್ಯಾಕ್ಸಿನ್‌ ಯಾರು ಹಾಕಿಸಿಕೊಳ್ಳಬಾರದು?

  1. ಹಿಂದೆ ಯಾವುದಾದರು ವ್ಯಾಕ್ಸಿನ್‌ ಹಾಕಿಸಿಕೊಂಡಾಗ ಅಲರ್ಜಿ ಉಂಟಾಗಿ ತೊಂದರೆಯಾಗಿದ್ದರೇ, ಅಂತವರು ವ್ಯಾಕ್ಸಿನ್‌ ಹಾಕಿಸಿಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು.
  2. ಈ ಮೊದಲೇ HPV ವ್ಯಾಕ್ಸಿನ್‌ ಹಾಕಿಸಿಕೊಂಡಿದ್ರೆ, ಮತ್ತೊಮ್ಮೆ ಹಾಕಿಸಿಕೊಳ್ಳಬಾರದು.
  3. ಯಾವುದೇ ತರಹದ ರೋಗದಿಂದ ಬಳಲುತ್ತಿದ್ದವರು ಗುಣಮುಖವಾಗುವವರೆಗೂ ಕಾಯ್ದು, ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕು.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *