Today Power outage in Annigeri and Hubballi taluk many villages 10 AM to 6 PMಸಾಂದರ್ಭಿಕ ಚಿತ್ರ

ಹುಬ್ಬಳ್ಳಿ/ಗದಗ, ಫೆಬ್ರವರಿ 21: ಬೇಸಿಗೆ ಆರಂಭವಾಗುತ್ತಿದ್ದಂತೆ ವಿದ್ಯುತ್‌ ಕಣ್ಣಾಮುಚ್ಚಾಲೆ ಶರುವಾಗಿದೆ. ಗದಗ (Gadag) ಜಿಲ್ಲೆಯ ಅಣ್ಣಿಗೇರಿ (Annigeri) ತಾಲೂಕು ಸೇರಿಂದತೆ ಹಾಗೂ ಹುಬ್ಬಳ್ಳಿ (Hubballi) ತಾಲೂಕಿನ ಅನೇಕ ಗ್ರಾಮಗಳಲ್ಲಿಇಂದು (ಫೆ.21) ವಿದ್ಯುತ್‌ ವ್ಯತ್ಯಯವಾಗಲಿದೆ (Powe Cut). ಅಣ್ಣಿಗೇರಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ 4ನೇ ತ್ರೈಮಾಸಿಕ ಕಾರ್ಯದ ನಿಮಿತ್ತ ಶನಿವಾರ ಫೆ.21ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ  ಈ ಪ್ರದೇಶಗಳಲ್ಲಿ ಪವರ್‌ ಕಟ್‌ ಆಗಲಿದೆ.

ನಲವಡಿ, ಭದ್ರಾಪುರ, ಕೋಳಿವಾಡ, ಅಣ್ಣಿಗೇರಿ, ಹಳ್ಳಿಕೇರಿ, ಮಜ್ಜಿಗುಡ್ಡ ಸೇರಿದಂತೆ ಕೊಂಡಿಕೊಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಹುಬ್ಬಳ್ಳಿಯ ಈ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ

ಹುಬ್ಬಳ್ಳಿ ತಾಲೂಕಿನ ರಾಮನಕೊಪ್ಪ ವಿದ್ಯುತ್‌ ಉಪಕೇಂದ್ರದಲ್ಲಿ 4ನೇ ತ್ರೈಮಾಸಿಕ ಕಾರ್ಯದ ನಿಮಿತ್ತ ಫೆ.21 ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಇಂಡಸ್ಟ್ರಿಯಲ್, ಛಬ್ಬಿ, ಪಾಲಿಕೊಪ್ಪ ಎನ್‌ಜೆವೈ, ಅರಳಿಕಟ್ಟಿ ಇಐಪಿ, ದ್ಯಾಮಪುರ ಎನ್‌ಜೆವೈ, ವರೂರ ಇಐಪಿ, ಮುತ್ತ ಲ, ತಡಸ, ರಾಮನಕೊಪ್ಪ, ಇನಾಂವೀರಾಪುರ, ಮಳಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *