ಬೆಂಗಳೂರು, ಫೆಬ್ರವರಿ 17: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC Exam Time Table) ಮತ್ತು ಪಿಯುಸಿ (PUC Exam Time Table) ವಾರ್ಷಿಕ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಡುಗಡೆ ಮಾಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಫೆ.28 ರಿಂದ ಮಾರ್ಚ್ 17ರ ವರೆಗೆ ದ್ವಿತೀಯ ಪಿಯುಸಿ ಹಾಗೂ ಮಾರ್ಚ್ 18 ರಿಂದ ಏಪ್ರಿಲ್ 2ರವೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದರು. ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1:15ರವರೆಗೆ ನಡೆಯಲಿವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕರ್ನಾಟಕ ರೈತನ ಎಐ ಆಧರಿತ ಕೃಷಿ: ₹214 ಕೋಟಿ ಹೂಡಿಕೆ! ಕೇಂದ್ರದಿಂದ ಆಹ್ವಾನ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಿಗಾಗಿ ರಾಜ್ಯಾದ್ಯಂತ 1,217 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಇನ್ನು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 9,02,889 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಇವರಿಗಾಗಿ 2,871 ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ ದಿನಾಂಕವಿಷಯಫೆಬ್ರವರಿ 28ಕನ್ನಡ, ಅರೇಬಿಕ್ ಮಾರ್ಚ್ 2ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಶಾಸ್ತ್ರಮಾರ್ಚ 3ಇಂಗ್ಲಿಷ್ಮಾರ್ಚ 4ತಮಿಳು, ತೆಲಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ಮಾರ್ಚ 5ಇತಿಹಾಸಮಾರ್ಚ 6ಭೌತಶಾಸ್ತ್ರಮಾರ್ಚ 7ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರಮಾರ್ಚ 9ರಾಸಾಯನ ಶಾಸ್ತ್ರ, ಶಿಕ್ಷಣ ಶಾಸ್ತ್ರ̤, ಮೂಲ ಗಣಿತಮಾರ್ಚ 10ಅರ್ಥಶಾಸ್ತ್ರಮಾರ್ಚ 11ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹ ವಿಜ್ಞಾನಮಾರ್ಚ 12ಹಿಂದಿಮಾರ್ಚ 13ರಾಜ್ಯಶಾಸ್ತ್ರಮಾರ್ಚ 14ಲೆಕ್ಕಶಾಸತ್ರ, ಗಣಿತಮಾರ್ಚ 16ಸಮಾಜಶಾಸ್ತ್ರ, ಜೀವನಶಾಸ್ತ್ರ. ಗಣಕ ವಿಜ್ಞಾನಮಾರ್ಚ 17ಹಿಂದೂಸ್ತಾನಿ ಸಂಗೀತ, ರಿಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ವೇಳಾಪಟ್ಟಿ ದಿನಾಂಕವಿಷಯಮಾರ್ಚ್ 18ಪ್ರಥಮ ಭಾಷೆಮಾರ್ಚ್ 23ವಿಜ್ಞಾನಮಾರ್ಚ್ 25ದ್ವಿತೀಯ ಭಾಷೆಮಾರ್ಚ್ 28ಗಣಿತಮಾರ್ಚ್ 30ತೃತೀಯ ಭಾಷೆಏಪ್ರಿಲ್ 2ಸಮಾಜ ವಿಜ್ಞಾನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ವೇಳಾಪಟ್ಟಿ ದಿನಾಂಕವಿಷಯಮೇ 18ಪ್ರಥಮ ಭಾಷೆಮೇ 19ವಿಜ್ಞಾನಮೇ 20ದ್ವಿತೀಯ ಭಾಷೆಮೇ 21ಗಣಿತಮೇ 22ತೃತೀಯ ಭಾಷೆಮೇ 23ಸಮಾಜ ವಿಜ್ಞಾನ ಒಟ್ಟಾರೆಯಾಗಿ, ಈ ಬಾರಿಯ ಬೋರ್ಡ್ ಪರೀಕ್ಷೆಗಳನ್ನು ಅತ್ಯಂತ ಸುಗಮ, ಸುರಕ್ಷಿತ ಹಾಗೂ ಪಾರದರ್ಶಕವಾಗಿ ನಡೆಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಫಲಿತಾಂಶ ದಿನಾಂಕಗಳು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 7ರಂದು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಏಪ್ರಿಲ್ 24ರಂದು ಪ್ರಕಟಿಸುವ ಸಾಧ್ಯತೆ ಇದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕರ್ನಾಟಕ ರೈತನ ಎಐ ಆಧರಿತ ಕೃಷಿ: ₹214 ಕೋಟಿ ಹೂಡಿಕೆ! ಕೇಂದ್ರದಿಂದ ಆಹ್ವಾನ Chikmagalur Stone Petaling: ಹಿಂದೂ ಮನೆಯ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ