'Beyond Borders' travelogue to be released todayಸೀಮೆಗಳಾಚೆ ಪುಸ್ತಕ

ಗದಗ, ಜೂ. 12: ಕನ್ನಡ ಸಾಹಿತ್ಯ ಪರಿಷತ್ತು ಗದಗ ವತಿಯಿಂದ ವೀಣಾ ಶಿರ್ಲಾಪೂ ಅವರ ಸೀಮೆಗಳಾಚೆ ಒಂದು ಅಮೇರಿಕಾ ಪಯಣ’ ಪ್ರವಾಸ ಕಥನ ಪುಸ್ತಕ ಇಂದು (ಜೂನ್‌ 13) ಸಂಜೆ 6:30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಡಿ. ಆರ್. ಪಾಟೀಲ ಮಾಜಿ ಶಾಸಕರು ಹಾಗೂ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ, ಬೆಂಗಳೂರು ಇವರು ಪುಸ್ತಕ ಲೋಕಾರ್ಪಣೆ ಮಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ವಿವೇಕಾನಂದಗೌಡ ಪಾಟೀಲ ವಹಿಸುವರು. ಕೆ.ಎಲ್.ಇ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಡಾ. ರಾಮಚಂದ್ರ ಪಡೇಸೂರ ಸಹಾಯಕ ಪ್ರಾಧ್ಯಾಪಕರು ಪುಸ್ತಕ ಪರಿಚಯ ಮಾಡುವರು.

ಮುಖ್ಯ ಅತಿಥಿಗಳಾಗಿ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಮೂಲಿಮನಿ ಭಾಗವಹಿಸಲಿದ್ದಾರೆ ಲೇಖಕಿ ವೀಣಾ ತಿರ್ಲಾಪೂರ ಮುಖ್ಯಸ್ಥರು, ಗೃಹವಿಜ್ಞಾನ ವಿಭಾಗ, ಕೆ.ಎಲ್.ಇ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಗದಗ ಉಪಸ್ಥಿತರಿರುವರು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *