ಗದಗ, ಮೇ 20: ಕಾನೂನು ವಿದ್ಯಾರ್ಥಿಗಳಿಗೆ ವಾದ ಮಂಡನೆ ಕೌಶಲ್ಯ ಹಾಗೂ ಕಾನೂನು ಸಂಶೋಧನಾ ಸಾಮರ್ಥ್ಯವನ್ನು ವೃತ್ತಿಪರ ರೀತಿಯಲ್ಲಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಕೆಎಲ್‌ಇ ಸಂಸ್ಥೆಯ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಮೇ 22, 23 ಮತ್ತು 24 ರಂದು 3ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಮಹಾವಿದ್ಯಾಲಯದ ಸ್ಥಾನಿಕ ಮಂಡಳಿ ಅಧ್ಯಕ್ಷ ಎಸ್.ಎ ಮಾನ್ವಿ ತಿಳಿಸಿದರು. ನಗರದ ಕೆಎಲ್‌ಇ ಸಂಸ್ಥೆಯ ಎಸ್.ಎ ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಎಲ್ಇ ಕಾನೂನು ಅಕಾಡೆಮಿವತಿಯಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯು ಕಾನೂನು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಲಿದೆ. ಈ ವರ್ಷದ ಅಣಕು ನ್ಯಾಯಾಲಯ ಸ್ಪರ್ಧೆ “ಹಿಂದೂ ಕಾನೂನಿನ ದಾಂಪತ್ಯ ಹಕ್ಕುಗಳ ಮರುಸ್ಥಾಪನೆ” ವಿಷಯವನ್ನು ಆಧರಿಸಿದೆ. ದೇಶದ ವಿವಿಧ ರಾಜ್ಯಗಳಿಂದ ಒಟ್ಟು 27 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ ಎಂದು ಮಾಹಿತಿ ನೀಡಿದರು. ಮೇ 22ನೇ ರಂದು ಸಂಜೆ 5 ಗಂಟೆಗೆ ಜೆ.ಟಿ. ಕಾಲೇಜಿನ ಸಭಾಂಗಣದಲ್ಲಿ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕುಲಸಚಿವ ಡಾ. ಸುರೇಶ ವಿ. ನಾಡಗೌಡರ ಉದ್ಘಾಟಿಸಲಿದ್ದಾರೆ ಎಂದರು. ಕಾರ್ಯಕ್ರಮ ವೇಳಾಪಟ್ಟಿ ಮೇ 22 ರಂದು ತಂಡಗಳ ಪರಿಚಯ, ಚೀಟಿ ಆಯ್ಕೆ ಹಾಗೂ ಮೆಮೊರಿಯಲ್ಸ್ ವಿನಿಮಯ – ಪ್ರಾಥಮಿಕ ಸುತ್ತುಗಳು ಮಧ್ಯಾಹ್ನ 3:30 ರಿಂದ 4:30 ರವರೆಗೆ ಜರುಗಲಿವೆ. ಸಂಜೆ 5 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಲಿದೆ. ಮೇ 23 ರಂದು ಬೆಳಗ್ಗೆ ಬೆಳಿಗ್ಗೆ 9:00 ರಿಂದ 10:00 ರವರೆಗೆ ಪ್ರಾಥಮಿಕ ಸುತ್ತುಗಳು 1 ಮತ್ತು 2 ನಡೆಯಲಿದೆ. ನಂತರ, 10 ರಿಂದ 11 ರವರೆಗೆ ಪ್ರಾಥಮಿಕ ಸುತ್ತು – 1 (ಸೆಷನ್ 01) ಪ್ರಾಥಮಿಕ ಸುತ್ತು – 2 (ಸೆಷನ್ 02) 11:15 ರಿಂದ 12:15ರವರೆಗೆ, ಪ್ರಾಥಮಿಕ ಸುತ್ತು – 2 (ಸೆಷನ್ 01) ಮಧ್ಯಾಹ್ನ 12:30 ರಿಂದ 1:30 ರವರೆಗೆ, ಪ್ರಾಥಮಿಕ ಸುತ್ತು – 2 (ಸೆಷನ್ 02) ಮಧ್ಯಾಹ್ನ 2:15 ರಿಂದ 3:15 ರವರೆಗೆ ನಡೆಯಲಿದೆ. ಬಳಿಕ, ಪ್ರಾಥಮಿಕ ಸುತ್ತಿನ ಫಲಿತಾಂಶ ಪ್ರಕಟಣೆ, ಚೀಟಿ ಆಯ್ಕೆ ಮತ್ತು ಕ್ವಾರ್ಟರ್ ಫೈನಲ್‌ಗಾಗಿ ಮೆಮೊರಿಯಲ್ಸ್ ವಿನಿಮಯ ಮಧ್ಯಾಹ್ನ 3:30 ರಿಂದ 4:00 ರವರೆಗೆ ನಡೆಯುತ್ತದೆ. ಕ್ವಾರ್ಟರ್ ಫೈನಲ್ ಸಂಜೆ 4:15 ರಿಂದ 5:15 ರವರೆಗೆ ನಡೆಯುತ್ತದೆ. ಸಂಜೆ ಸಂಜೆ 5:30 ರಿಂದ 5:45 ರವರೆಗೆ ಕ್ವಾರ್ಟರ್ ಫೈನಲ್ ಫಲಿತಾಂಶ ಪ್ರಕಟಣೆ, ಚೀಟಿ ಆಯ್ಕೆ ಮತ್ತು ಸೆಮಿ ಫೈನಲ್‌ಗಾಗಿ ಮೆಮೊರಿಯಲ್ಸ್ ವಿನಿಮಯ ಮಾಡಲಾಗುತ್ತದೆ. ನಂತರ, ಸಂಜೆ 5:30 ರಿಂದ 6:00 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು. ಮೇ 24 ರಂದು ಬೆಳಿಗ್ಗೆ 9:30 ರಿಂದ 10:30 ರವರೆಗೆ ಸೆಮಿ ಫೈನಲ್ ನಡೆಯಲಿದೆ. ಬಳಿಕ ಸೆಮಿ ಫೈನಲ್ ಫಲಿತಾಂಶ ಪ್ರಕಟಿಸಲಾಗುತ್ತದೆ. ತದನಂತರ ಚೀಟಿ ಆಯ್ಕೆ ಮತ್ತು ಫೈನಲ್‌ಗಾಗಿ ಮೆಮೊರಿಯಲ್ಸ್ ವಿನಿಮಯ ಮಾಡಲಾಗುತ್ತದೆ. ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:00 ರವರೆಗೆ ಫೈನಲ್ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ, ಎಸ್‌ಎ ಮಾನ್ವಿ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಮಂಡಳಿಯ ಸದಸ್ಯರಾದ ಎಸ್.ಎಫ್ ಹಾದಿಮನಿ, ಬಿ.ಜಿ ಶೆಳ್ಳಿಕೇರಿ, ಎಸ್‌ಎ ಮಾನ್ವಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸಂಜೀವ ಎಮ್ ಹುಲ್ಲೂರ, ಜೆಟಿ ಮಹಾವಿದ್ಯಾಲಯ ಪ್ರಾಚಾರ್ಯರಾದ ಪ್ರೋ. ಪಿ. ಜಿ ಪಾಟೀಲ್ ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಬೆಂಗಳೂರಿನಲ್ಲಿ 5ನೇ ಬ್ರಿಕ್ಸ್ ಸಾಯಿ ನಾಯಕರ ಶೃಂಗಸಭೆ ಕರ್ನಾಟಕದ ಮೂವರಿಗೆ ಪದ್ಮ ಪ್ರಶಸ್ತಿ ಶೀಘ್ರ ಪ್ರದಾನ