ಹುಬ್ಬಳ್ಳಿ, ಫೆಬ್ರವರಿ 23: ಹುಬ್ಬಳ್ಳಿಯ (Hubballi) ರಾಜನಗರದಲ್ಲಿರುವ ಕೆ.ಎಸ್.ಸಿ.ಎ (KSCA) ಮೈದಾನದ ಪೆವಿಲಿಯನ್‌ಗೆ ಕ್ರಿಕೆಟ್ ದಿಗ್ಗಜ ಕನ್ನಡಿಗ ಸುನಿಲ್ ಜೋಶಿಯವರ (Sunil Joshi) ಹೆಸರಿಡಲು ನಿರ್ಧಿರಿಸಿದೆ. ರಾಜ್ಯ ಮತ್ತು ಭಾರತೀಯ ಕ್ರಿಕೆಟ್‌ಗೆ ಸುನೀಲ್ ಜೋಶಿಯವರ ಗಮನಾರ್ಹ ಕ್ರಿಕೆಟ್ ಪ್ರಯಾಣ ಮತ್ತು ಉತ್ತರ ಕರ್ನಾಟಕದಲ್ಲಿ ಕ್ರಿಕೆಟ್‌ನೊಂದಿಗೆ ಅವರ ಶಾಶ್ವತವಾದ ಸಂಬಂಧಕ್ಕೆ ಗೌರವ ಮತ್ತು ಮೆಚ್ಚುಗೆಯ ಸಂಕೇತವಾಗಿ ಕೆಎಸ್‌ಸಿಎ ನಿರ್ಧಾರವನ್ನು ತೆಗೆದುಕೊಂಡಿದೆ. “ಗಡಗ ಜಿಲ್ಲೆಯವರಾದ ಸುನಿಲ್ ಜೋಶಿ ತಮ್ಮ ಕ್ರಿಕೆಟ್‌ನ ಬಹುಮುಖ್ಯ ಭಾಗವನ್ನು ಹುಬ್ಬಳ್ಳಿಯಲ್ಲಿ ಆಡಿದ್ದಾರೆ. ಮತ್ತು ಅವರ ಗೌರವಾರ್ಥವಾಗಿ ಪಿಲ್ಲರ್ ಬ್ಲಾಕ್‌ಗೆ ಅವರ ಹೆಸರನ್ನು ಇಡುವುದು ಕರ್ನಾಟಕದ ಅತ್ಯಂತ ಗೌರವಾನ್ವಿತ ಕ್ರಿಕೆಟ್ ರಾಯಭಾರಿಗಳಲ್ಲಿ ಒಬ್ಬರಿಗೆ ಸೂಕ್ತವಾದ ಮತ್ತು ಶಾಶ್ವತವಾದ ಗೌರವವಾಗಿದೆ” ಎಂದು ರಾಜ್ಯ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಿಳಿಸಿದೆ. ಗದಗ ಜಿಲ್ಲೆಯವರಾದ ಸುನಿಲ್ ಜೋಶಿ ಅವರು, ಪ್ರತಿದಿನ ಅಭ್ಯಾಸಕ್ಕಾಗಿ ಹುಬ್ಬಳ್ಳಿಗೆ ಬಂದು ಹೋಗುತ್ತಿದ್ದರು. ಲೆಫ್ಟ್ ಆರ್ಮ್ ಸ್ಪಿನ್ನರ್ ಆಗಿರುವ ಸುನೀಲ್ ಜೋಶಿ ಅವರು ಭಾರತದ ಭಾರತ ಪರ 15 ಟೆಸ್ಟ್ ಮತ್ತು 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಐ.ಪಿ.ಎಲ್.ನಲ್ಲಿ ಪಂಜಾಬ್ ಕಿಂಗ್ಸ್ ಸ್ಪಿನ್ ಬೌಲಿಂಗ್ ತರಬೇತುದಾರರಾಗಿರುವುದರ ಜೊತೆಗೆ, ದೇಶೀಯ ಕ್ರಿಕೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶ ತಂಡಗಳಿಗೆ ತರಬೇತಿ ನೀಡಿದರು. ಸುನೀಲ್ ಜೋಶಿ ಅವರು ಪ್ರಸ್ತುತ ಬೆಂಗಳೂರಿನಲ್ಲಿರುವ ಬಿ.ಸಿ.ಸಿ.ಐ. ಸೆಂಟರ್ ಆಫ್ ಎಕ್ಸಲೆನ್ಸ್ (ಸಿ.ಒ.ಇ.) ನಲ್ಲಿ ಸ್ಪಿನ್ನಿಂಗ್ ಬೌಲಿಂಗ್ ತರಬೇತುದಾರರಾಗಿದ್ದಾರೆ. ಮತ್ತು ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್ ಸಂದರ್ಭದಲ್ಲಿ ಭಾರತೀಯ ತಂಡಕ್ಕೆ ಬೌಲಿಂಗ್ ತರಬೇತುದಾರರಾಗಿದ್ದರು. ರಣಜಿ ಫೈನಲ್ ಪಂದ್ಯದ ವೇಳೆ ನಾಮಕರಣ ಮಂಗಳವಾರದಿಂದ (ಫೆ.24) ಆರಂಭವಾಗುವ ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ಪಂದ್ಯದ ವೇಳೆ ನಾಮಕರಣ ಸಮಾರಂಭ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ನಿಗದಿಯಾಗಿರುವ ಈ ಕಾರ್ಯಕ್ರಮದಲ್ಲಿ ಕೆ.ಎಸ್.ಸಿ.ಎ. ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉಪಸ್ಥಿತರಿರಲಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸೂಪರ್ 8ರ ಹಂತದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತಕ್ಕೆ ಭಾರೀ ಸೋಲು 16 ವರ್ಷದೊಳಗಿನವರಿಗೆ ಮೊಬೈಲ್ ಬಳಕೆ ನಿಷೇಧಕ್ಕೆ ಚಿಂತನೆ: ಸಿಎಂ