ಟಾಟಾ ಐಪಿಎಲ್ 2026ನೇ (TATA IPL 2026) ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ (RCB) ಗೆದ್ದಿದೆ. ತವರು ನೆಲದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿಜಯ ಪತಾಕೆ ಹಾರಿಸಿದೆ. ಎಸ್‌ಆರ್‌ಹೆಚ್ (SRH) ಸೋತಿದೆ. ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ದುಕೊಂಡಿತು. ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದ ಎಸ್‌ಆರ್‌ಹೆಚ್‌ಗೆ ಆರಂಭದಲ್ಲೇ ಆಘಾತ ಉಂಟಾಯ್ತು. ಜಾಕೋಬ್ ಡಫ್ಫಿ ಅವರ ಎರಡನೇ ಓವರ್‌ನಲ್ಲಿ ಆರಂಭಿಕ ಬ್ಯಾಟರ್ ಅಭಿಷೇಕ ಶರ್ಮಾ 7 ರನ್ ಗಳಿಸಿ ಕ್ಯಾಚ್ ನೀಡಿ ಪೆವಿಲಿಯನ್‌ನತ್ತ ತೆರಳಿದರು. ನಂತರ, ಜಾಕೋಬ್ ಡಫ್ಫಿ ಅವರ ನಾಲ್ಕನೇ ಓವರ್‌ನಲ್ಲಿ ನಿತೀಶ್ ರೆಡ್ಡಿ ಕ್ಯಾಚ್ ಔಟ್ ಆದರು. ಐದು ಓವರ್‌ಗಳಲ್ಲಿ ಎಸ್‌ಆರ್‌ಹೆಚ್ ತನ್ನ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ, ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಇಶಾನ್ ಕಿಶನ್ ಮತ್ತು ಹೆನ್ರಿಚ್ ಕ್ಲಾಸೆನ್ ಜೊತೆಯಾಟವಾಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಈ ಜೋಡಿ 103 ರನ್‌ಗಳನ್ನು ತಂಡದ ಮೊತ್ತಕ್ಕೆ ಸೇರಿಸಿತು. 13.1 ಹೆನ್ರಿಚ್ ಕ್ಲಾಸೆನ್ ಓಟಾದರು. 20 ಓವರ್‌ಗಳ ಅಂತ್ಯಕ್ಕೆ ಎಸ್‌ಆರ್‌ಹೆಚ್ 201 ರನ್ ಕಲೆಹಾಕಿತು. 202 ರನ್‌ಗಳ ಈ ಗುರಿಯನ್ನು ಬೆನ್ನಹತ್ತಿದ ಆರ್‌ಸಿಬಿ 4 ವಿಕೆಟ್ ನಷ್ಟಕ್ಕೆ 15.4 ಓವರ್‌ಗಳಲ್ಲಿ203 ರನ್ ಕಲೆಹಾಕಿ ವಿಜಯ ಪತಾಕೆ ಹಾರಿಸಿದೆ. ಮೊದಲ ವಿಕೆಟ್ ನಂತರ ಜೊತೆಯಾದ ದೇವದತ್ತ ಪಡಿಕಲ್ ಮತ್ತು ಕಿಂಗ್ ವಿರಾಟ್ ಕೋಹ್ಲಿ ಜೋಡಿ ಬರೊಬ್ಬರಿ 101 ರನ್ ಕೆಲಹಾಕಿತು. ಇದರಿಂದ, ಪಂದ್ಯ ಸಂಪೂರ್ಣ ಆರ್‌ಸಿಬಿ ಕಡೆ ವಾಲಿತು. ಇದು ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತು. ದೇವದತ್ ಪಡೀಕಲ್ 26 ಬಾಲ್‌ಗಳನ್ನು ಆಡಿ 61 ರನ್ ಕಲೆಹಾಕಿ, ಔಟಾದರು. ನಂತರ ಬಂದ ರಜತ್ ಪಡೀಕರ್ ಅವರು 12 ಬಾಲ್‌ಗಳಲ್ಲಿ 31 ರನ್ ಗಳಿಸಿ ಔಟಾದರು. ಇನ್ನು, ಕಿಂಗ್ ಕೋಹ್ಲಿ 38 ಬಾಲ್‌ಗಳನ್ನು ಆಡಿ 69 ರನ್ ಕಲೆಹಾಕಿದರು. ಈ ಮೂವರು ಅದ್ಭುತ ಆಟದಿಂದ ಆರ್‌ಸಿಬಿ ಗೆಲುವಿನ ದಡ ಸೇರಿತು. ಆರ್‌ಸಿಬಿ ಬ್ಯಾಟರ್‌ಗಳು ಎಸ್‌ಆರ್‌ಹೆಚ್‌ನ ಬೌಲರ್‌ಗಳ ನೀರು ಇಳಿಸಿದರು. ಆರ್‌ಸಿಬಿ ಪರ ಜಾಕೋಬ್ ಡಫ್ಫಿ ಮೂರು ವಿಕೆಟ್‌ಗಳನ್ನು ಪಡೆದರು. ರೊಮಾರಿಯೊ ಶೆಫರ್ಡ್ ಎರಡು ವಿಕೆಟ್ ಪಡೆದರು. ಇನ್ನು, ಸುಯಶ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation RCB vs SRH Match: ಕಪ್ಪು ಪಟ್ಟಿ ಕಟ್ಟಿಕೊಂಡು ಆಡಲಿರುವ ಆರ್‌ಸಿಬಿ ಆಟಗಾರರು! ಇಲ್ಲಿದೆ ಕಾರಣ ಬಿಟ್ಟ ಬಾಣ ಗುರಿ ತಲುಪಿತು, ಚಿನ್ನದ ಪದಕ ಮುಡಿಗೇರಿತು: ಕೈ, ಕಾಲು ಇಲ್ಲದ ಪಾಯಲ್ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್