T20 World Cup: India beat west indies enter the semi finalಸಂಜು ಸ್ಯಾಮ್ಸನ್

T20 World Cupನ ಸೂಪರ್‌ 8 ಹಂತದಲ್ಲಿ ನಾಕ್‌ಔಟ್‌ ಪಂದ್ಯದಲ್ಲಿ ಟೀಂ ಇಂಡಿಯಾ (Team India) ವೆಸ್ಟ್‌ಇಂಡಿಸ್‌ (West Indies) ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಸಂಜು ಸ್ಯಾಮ್ಸನ್‌ ಅವರ ರೋಚಕ ಬ್ಯಾಟಿಂಗ್‌ ಭಾರತದ ತಂಡವನ್ನು ಗೆಲುವಿನ ದಡ ಸೇರಿಸಿತು. ಈ ಮೂಲಕ ಭಾರತ ಸೆಮಿಫೈನಲ್‌ ತಲುಪಿದೆ.

ಕೊಲ್ಕತ್ತಾದ ಇಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಸೂರ್ಯ ಕುಮಾರ್‌ ಯಾದವ್‌ ಫಿಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ ಆರಂಭಿಸಿದ ವೆಸ್ಟ್‌ ಇಂಡೀಸ್‌ ತಂಡ 10 ಓವರ್‌ನಲ್ಲಿ 103 ರನ್‌ ಕಲೆಹಾಕಿ 3 ವಿಕೇಟ್‌ಗಳನ್ನು ಕಳೆದುಕೊಂಡಿತು. 15 ಓವರ್‌ನಲ್ಲಿ ವೆಸ್ಟ್‌ ಇಂಡೀಸ್‌ 15 ಓವರ್‌ಗಳಲ್ಲಿ 125 ರನ್‌ ಕಲೆಹಾಕಿ 4 ವಿಕೇಟ್‌ಗಳನ್ನು ಕಳೆದುಕೊಂಡಿತ್ತು.

16ನೇ ಓವರ್‌ನೇ ಒಂದೇ ಓವರ್‌ನಲ್ಲಿ ವೆಸ್ಟ್‌ ಇಂಡೀಸ್‌ 24 ರನ್‌ ಕಲೆಹಾಕಿತು. ಈ ಮೂಲಕ ತಂಡದ ಮೊತ್ತ 149 ರನ್‌ ಆಗಿತ್ತು. ವೆಸ್ಟ್‌ ಇಂಡಿಸ್‌ನ ದಾಂಡಿಗ ರೋವ್‌ಮನ್ ಪೊವೆಲ್ ಅವರು ಒಂದು ಹಂತಕ್ಕೆ ಭಾರತದ ಬೌಲರ್‌ಗಳ ನೀರು ಇಳಿಸಿದರು. 20 ಓವರ್‌ಗಳಲ್ಲಿ ವೆಸ್ಟ್‌ಇಂಡೀಸ್‌ 194 ರನ್‌ ಕಲೆಹಾಕಿ, ಭಾರತಕ್ಕೆ 195ರನ್‌ಗಳ ಟಾರ್ಗೆಟ್‌ ನೀಡಿದೆ. ವರುಣ ಚಕ್ರವರ್ತಿ ಮತ್ತು ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೇಟ್‌ ಪಡೆದರು. ಜಸ್ಪಿತ್‌ ಬೂಮ್ರಾ ಎರಡು ವಿಕೇಟ್‌ ಪಡೆದರು.

195 ರನ್‌ಗಳ ಗುರಿ ಬೆನ್ನು ಹತ್ತಿದ ಭಾರತ ತಂಡಕ್ಕೆ ಆರಂಭದಲ್ಲಿ ಆಘಾತ ಉಂಟಾಯಿತು. ನಿರ್ಣಾಯಕ ಪಂದ್ಯದಲ್ಲಿ ಅಭಿಷೇಕ ಶರ್ಮಾ ಅವರು 11 ಬಾಲ್‌ಗಳನ್ನು ಎದುರಿಸಿ 10 ರನ್‌ ಕಲೆಹಾಕಿ, ಶಿಮ್ರಾನ್ ಹೆಟ್ಮೆಯರ್ ಅವರ ಎಸೆತದಲ್ಲಿ ಅಕೀಲ್ ಹೊಸೆನ್ ಅವರಿಗೆ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದರು.

ಇನ್ನು, ಇಶಾಂತ್‌ ಕಿಶನ್‌ 6 ಬಾಲ್‌ಗಳಲ್ಲಿ 8 ರನ್‌ ಬಾರಿಸಿ ಔಟಾದರೇ, ನಾಯಕ ಸೂರ್ಯಕುಮಾರ ಯಾದವ್  16 ಬಾಲ್‌ಗಳಲ್ಲಿ 18 ರನ್‌ ಮಾತ್ರ ಕಲೆಹಾಕಿದರು. ಇನ್ನು ನಂತರ ಬಂದ ತಿಲಕ ವರ್ಮಾ ಅಲ್ಪ ಮಟ್ಟಿಗೆ ಸಂಜು ಸ್ಯಾಮನ್ಸ್‌ ಅವರಿಗೆ ಜೊತೆಯಾದರು. ಆದರೆ. 15 ಬಾಲ್‌ಗಳಲ್ಲಿ 27 ರನ್‌ಗಳನ್ನು ತಂಡದ ಮೊತ್ತಕ್ಕೆ ಪೇರಿಸಿ ಪೆವಿಲಿಯನ್‌ನತ್ತ ಮುಖಮಾಡಿದರು.

ಇದನ್ನೂ ಓದಿ: ಟೂರ್ನಿಯಲ್ಲಿ ಉಳಿಯಲು ಭಾರತ ತಂಡದಲ್ಲಿ ಈ ಬದಲಾವಣೆಗಳು ಅತ್ಯಗತ್ಯ

ನಂತರ ಬಂದ ಆಲ್‌ರೌಡರ್‌ ಹಾರ್ದಿಕ್‌ ಪಾಂಡ್ಯ 14 ಬಾಲ್‌ಗಳಲ್ಲಿ 17 ರನ್‌ ಕೆಲಹಾಕಿ ಔಟ್‌ ಆದರು. ಆದರೆ, ವಿಂಡಿಸ್‌ನ ಬೌಲರ್‌ಗಳನ್ನು ಸಂಜು ಸ್ಯಾಮನ್ಸ್‌ ಬೆಂಬಿಡದೆ ಕಾಡಿದರು. ವಿಂಡಿಸ್‌ ಬೌಲರ್‌ಗಳು ಎಸೆದ ಬೌಲ್‌ಗಳಿಗೆ ಮೈದಾನದ ಅಷ್ಟದಿಕ್ಕುಗಳನ್ನು ತೋರಿಸಿದರು. ಸಂಜು ಸ್ಯಾಮನ್ಸ್‌ 50 ಬಾಲ್‌ಗಳಲ್ಲಿ ಅಜೇಯ 97 ರನ್‌ಗಳನ್ನು ಬಾರಿಸುವ ಮೂಲಕ ತಂಡವು ಸೆಮಿಫೈನಲ್‌ಗೆ ಲಗ್ಗೆ ಇಡುವಂತೆ ಮಾಡಿದ್ದಾರೆ.

ಸಂಜು ಸ್ಯಾಮ್‌ನ್ಸ್‌ ಅವರ ಆಕರ್ಷಕ ಬ್ಯಾಟಿಂಗ್‌ಗೆ ಮೈದನಾದಲ್ಲಿ ಸೇರಿದ್ದ ಜನರು ಹುಚ್ಚೆದ್ದು ಕುಣಿದರು. ಶಿವಂ ದುಬೆ 4 ಬಾಲಗಳನ್ನು ಆಡಿ ಅಜೇಯ 8 ರನ್‌ಗಳಿಸಿದ್ದಾರೆ. ಭಾರತ 19.2 ಓವರ್‌ಗಳಲ್ಲಿ 199ರನ್‌ ಗಳಿಸಿತು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *