SSLC Exam 2026: Points to be observed in the exam hall by class 10th studentsಸಾಂದರ್ಭಿಕ ಚಿತ್ರ

SSLC Exam 2026 ಮಾರ್ಚ್‌ 18 ರಿಂದ ಆರಂಭವಾಗಲಿವೆ. ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ದುಗುಡ, ಭಯ ಸಹಜವಾಗಿರುತ್ತದೆ. ಮತ್ತು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಯಲ್ಲಿದ್ದಾಗ ಈ ಪ್ರಮುಖ ಅಂಶಗಳನ್ನು ಗಮನಿಸಲೇಬೇಕು.

  1. ಸಮಯಕ್ಕೆ ಮುಂಚಿತವಾಗಿ ಬರಬೇಕು ⏰ – ಪರೀಕ್ಷೆ ಆರಂಭವಾಗುವ ಮೊದಲು ಕನಿಷ್ಠ 30 ನಿಮಿಷ ಮೊದಲು ಬರಬೇಕು.
  2. ಹಾಲ್ ಟಿಕೆಟ್ ತರಬೇಕು 🪪 – ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ.
  3. ಅಗತ್ಯವಾದ ಬರವಣಿಗೆ ಸಾಮಗ್ರಿ ತರಬೇಕು ✏️ – ಪೆನ್, ಪೆನ್ಸಿಲ್, ರಬ್ಬರ್, ಸ್ಕೇಲ್ ಇತ್ಯಾದಿ ತರಬೇಕು.
  4. ನಕಲು ಮಾಡಬಾರದು ❌ – ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ಮಾಡಬಾರದು.
  5. ಪ್ರಶ್ನೆ ಪತ್ರವನ್ನು ಚೆನ್ನಾಗಿ ಓದಬೇಕು 📄 – ಉತ್ತರ ಬರೆಯುವ ಮೊದಲು ಪ್ರಶ್ನೆಗಳನ್ನು ಸಂಪೂರ್ಣವಾಗಿ ಓದಬೇಕು.
  6. ಶಾಂತವಾಗಿರಬೇಕು 🤫 – ಪರೀಕ್ಷಾ ಕೊಠಡಿಯಲ್ಲಿ ಶಾಂತವಾಗಿದ್ದು ಇತರರಿಗೆ ಅಡ್ಡಿಯಾಗಬಾರದು.
  7. ಸರಿಯಾದ ಉತ್ತರಗಳನ್ನು ಬರೆಯಬೇಕು ✔️ – ಪ್ರಶ್ನೆಗೆ ಸಂಬಂಧಿಸಿದಂತೆ ಸ್ಪಷ್ಟವಾಗಿ ಉತ್ತರ ಬರೆಯಬೇಕು.
  8. ಅತಿರೇಕ ವಸ್ತುಗಳನ್ನು ತರಬಾರದು 📱 – ಮೊಬೈಲ್ ಅಥವಾ ಬೇರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಬಾರದು.
  9. ಉತ್ತರ ಪತ್ರಿಕೆಯಲ್ಲಿ ವಿವರಗಳನ್ನು ಸರಿಯಾಗಿ ಬರೆಯಬೇಕು 📝 – ನೋಂದಣಿ ಸಂಖ್ಯೆ, ವಿಷಯದ ಹೆಸರು ಇತ್ಯಾದಿ ಸರಿಯಾಗಿ ಬರೆಯಬೇಕು.
  10. ಪರೀಕ್ಷಾಧಿಕಾರಿಗಳ ಸೂಚನೆಗಳನ್ನು ಪಾಲಿಸಬೇಕು 👩‍🏫 – ಮೇಲ್ವಿಚಾರಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಈ ಮೇಲೆ ತಿಳಿಸಿದಂತಹ ಎಲ್ಲಾ ಅಂಶಗಳನ್ನು ನಿಮ್ಮ ಶಾಲೆಯ ಎಲ್ಲಾ ವಿಷಯದ ಶಿಕ್ಷಕರು ತಮ್ಮ ಗಮನಕ್ಕೆ ತಂದಿರುತ್ತಾರೆ ಆದರೂ ತಾವು ಪರೀಕ್ಷಾ ಎಂಬ ಗೊಂದಲಕ್ಕೆ ಒಳಪಟ್ಟು ಸಣ್ಣಪುಟ್ಟ ತಪ್ಪುಗಳನ್ನ ಗಂಭೀರವಾಗಿ ಪರಿಗಣಿಸಿ ಮಾನಸಿಕವಾಗಿ ಕೂಗ್ಗುವುದು, ಎಲ್ಲಾ ಮುಗಿದೇ ಹೋಯಿತು ಎಂದು ಭಾವಿಸುವುದು.

ನಾನು ಪರೀಕ್ಷೆಯಲ್ಲಿ ಹೀಗೆ ಮಾಡಬಾರದಾಗಿತ್ತು ಹಾಗೆ, ಹೀಗೆ ಎಂದು ತಮ್ಮಲ್ಲಿಯೇ ವ್ಯಥೆಪಡುವುದು ಬಹಳ ತಪ್ಪು. ಪರೀಕ್ಷಾ ಸಂದರ್ಭದಲ್ಲಿ ಏನಾದರೂ ಗೊಂದಲಕ್ಕೀಡಾಗಿ ತಪ್ಪಾದರೆ ಯಾವುದಕ್ಕೂ ಭಯಪಡಲಿ ತಪ್ಪಾಗಿರುವ ಅಂಶಗಳನ್ನು ಸರಿಪಡಿಸುವುದರ ಬಗ್ಗೆ ಆಲೋಚಿಸಿ ಹಾಗೂ ಇದು ಯಾರ ಕಡೆಯಿಂದ ಸರಿಯಾಗುತ್ತದೆ.

ಯಾವ ಯಾವ ಅಂಶಗಳನ್ನ ಗಮನಿಸುವುದು ಇದನ್ನ ಹೇಗೆ ಬಗೆಹರಿಸಿಕೊಳ್ಳುವುದು ಎಂಬುದನ್ನು ಪರೀಕ್ಷಾ ಮುಖ್ಯಸ್ಥರಿಂದ ತಿಳಿದುಕೊಂಡು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಬಹಳ ಉತ್ತಮ ಎಲ್ಲಾ ಸಮಸ್ಯೆಗಳಿಗೂ ಒಂದು ಉತ್ತರ ಇದ್ದೇ ಇರುತ್ತದೆ.

ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಇದೊಂದು ನಮ್ಮನ್ನ ನಾವು ಪರೀಕ್ಷಿಸಿಕೊಳ್ಳುವಂತಹ ಒಂದು ಅಸ್ತ್ರ ಅಷ್ಟೇ ಅಷ್ಟೇ ಹೊರತು ಬೇರೆ ಏನು ಅಲ್ಲ ಸಮಾಧಾನವಾಗಿ ಆಲೋಚಿಸಿ ಎಲ್ಲಾ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ.

ಲೇಖಕರು: ಕೇಶವ ಬಿ ಕೆ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *