ಬೆಂಗಳೂರು, ಏಪ್ರಿಲ್ 23: SSLC ಪರೀಕ್ಷೆ ಫಲಿತಾಂಶ ಇಂದು (ಏಪ್ರಿಲ್ 23) ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರಗಳನ್ನು ತಿಳಿಸಿದರು.2025–26ನೇ ಸಾಲಿನ ಈ ಬಾರಿ ಪರೀಕ್ಷೆ ಬರೆದಿದ್ದ 7,70,209 ವಿದ್ಯಾರ್ಥಿಗಳ ಪೈಕಿ 7,24,794 ಮಂದಿ ಉತ್ತೀರ್ಣರಾಗಿದ್ದು, ಒಟ್ಟು ಶೇ. 94.1 ಪಾಸ್ ಪ್ರಮಾಣ ದಾಖಲಾಗಿದೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ರಾಜ್ಯದಾದ್ಯಂತ 2,870 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ. 98.40 ಫಲಿತಾಂಶದೊಂದಿಗೆ ಮೊದಲ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ ಶೇ. 98.18 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇನ್ನೊಂದೆಡೆ, ಕಲಬುರಗಿ ಜಿಲ್ಲೆ ಶೇ. 85.06 ಫಲಿತಾಂಶದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಜಿಲ್ಲಾವಾರು ಫಲಿತಾಂಶ ದಕ್ಷಿಣ ಕನ್ನಡ ಜಿಲ್ಲೆ- 98.40% ಉಡುಪಿ – 98.18% ಉತ್ತರ ಕನ್ನಡ- 98.09% ಹಾಸನ- 97.51% ಮಂಡ್ಯ- 97.45% ಶಿರಸಿ- 97.21% ಹಾವೇರಿ- 96.87% ಕೊಡಗು- 96.70% ಶಿವಮೊಗ್ಗ- 96.56% ವಿಜಯನಗರ- 96.39% ಬೆಂಗಳೂರು ಗ್ರಾಮಾಂತರ – 95.84% ಧಾರವಾಡ – 95.59% ಕೋಲಾರ- 95.50% ಬಾಗಲಕೋಟೆ- 95.42% ಬೆಂಗಳೂರು ಉತ್ತರ- 95.34% ಗದಗ- 95.24% ಚಿಕ್ಕಮಗಳೂರು- 94.99% ಬೆಳಗಾವಿ – 94.75% ದಾವಣಗೆರೆ- 94.64% ಮೈಸೂರು- 94.50% ರಾಯಚೂರು- 94.41% ವಿಜಯಪುರ- 94.17% ಚಿಕ್ಕೋಡಿ- 94.09% ಬಳ್ಳಾರಿ- 93.36% ಕೊಪ್ಪಳ- 93.10% ರಾಮನಗರ- 92.83% ಚಿತ್ರದುರ್ಗ- 92.25% ಬೀದರ್- 92.18% ತುಮಕೂರು- 92.04% ಚಾಮರಾಜನಗರ- 91.89% ಯಾದಗಿರಿ- 91.89% ಬೆಂಗಳೂರು ದಕ್ಷಿಣ- 91.65% ಚಿಕ್ಕಬಳ್ಳಾಪುರ- 90.88% ಮಧುಗಿರಿ- 90.26% ಕಲಬುರಗಿ-85.06% ಈ ಬಾರಿಯ ಪರೀಕ್ಷೆಯಲ್ಲಿ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ ಹಾಗೂ ರಾಯಚೂರಿನ ಸುಖದೇವ್ ಸಂಪೂರ್ಣ ಅಂಕಗಳನ್ನು ಗಳಿಸಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation SSLC ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ English Grammar ಪಾಠ 13: What is a Preposition?