ಹುಬ್ಬಳ್ಳಿ, ಏಪ್ರಿಲ್ 6: ವಿಜಯಪುರ (Vijayapura) ಜಿಲ್ಲೆಯ ಸುಕ್ಷೇತ್ರ ಲಚ್ಯಾಣ ಗ್ರಾಮದಲ್ಲಿ ಜರುಗಲಿರುವ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಎಕ್ಸಪ್ರೆಸ್ ರೈಲುಗಳು ತಾತ್ಕಾಲಿಕವಾಗಿ ನಿಲ್ಲಲಿವೆ. ಈ ಕುರಿತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ಶ್ರೀ ಶಂಕರಲಿಂಗೇಶ್ವರ ಜಾತ್ರೆ ನಿಮಿತ್ತ ಏಪ್ರಿಲ್ 05 ರಿಂದ 12 ರವರೆಗೆ ಲಾಚ್ಯಾಣ ಗ್ರಾಮದಲ್ಲಿ ರೈಲು ನಿಲುಗಡೆಗೆ ಅನುಮತಿ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾವ್ಯಾವ ರೈಲುಗಳು ನಿಲುಗಡೆ ರೈಲು ಸಂಖ್ಯೆ 17307: ಮೈಸೂರು-ಬಾಗಲಕೋಟೆ-ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 5 ರಿಂದ 11ರವರೆಗೆ ಲಾಚ್ಯಾಣ ನಿಲ್ದಾಣದಲ್ಲಿ ನಿಲ್ಲುತ್ತದೆ. ರೈಲು ಸಂಖ್ಯೆ 16535: ಮೈಸೂರು-ಪಂಡರಾಪುರ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 5 ರಿಂದ 11ರವರೆಗೆ ಲಾಚ್ಯಾಣ ನಿಲ್ದಾಣದಲ್ಲಿ ನಿಲ್ಲುತ್ತದೆ. ರೈಲು ಸಂಖ್ಯೆ 16536: ಪಾಂಡವಪುರ-ಮೈಸೂರು ಗೋಲಗುಂಬಜ್ ಎಕ್ಸಪ್ರೆಸ್ ರೈಲು ಏಪ್ರಿಲ್ 6 ರಿಂದ 12ರವರೆಗೆ ಲಾಚ್ಯಾಣ ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ. ರೈಲು ಸಂಖ್ಯೆ 17308: ಬಾಗಲಕೋಟೆ-ಮೈಸೂರು ಬಸವ ಎಕ್ಸಪ್ರೆಸ್ ರೈಲು ಏಪ್ರಿಲ್ 6 ರಿಂದ 12ರವರೆಗೆ ಲಾಚ್ಯಾಣ ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ. ರೈಲು ರದ್ದು ರೈಲು ಸಂಖ್ಯೆ 66591: ಕೆಎಸ್‌ಆರ್ ಬೆಂಗಳೂರು-ಕೋಲಾರ ಮೆಮು ರೈಲು ಏಪ್ರಿಲ್ 29 ರಿಂದ ಮೇ 2 ರವರೆಗೆ ರದ್ದಾಗಲಿದೆ. ರೈಲು ಸಂಖ್ಯೆ 66593: ಕೋಲಾರ-ಬಂಗಾರಪೇಟ ಮೆಮು ರೈಲು ಏಪ್ರಿಲ್ 29 ರಿಂದ ಮೇ 2 ರವರೆಗೆ ರದ್ದಾಗಲಿದೆ. ರೈಲು ಸಂಖ್ಯೆ 66594: ಬಂಗಾರಪೇಟೆ-ಕೋಲಾರ ಏಪ್ರಿಲ್ 29 ರಿಂದ ಮೇ 2ರವರೆಗೆ ರದ್ದಾಗಲಿದೆ. ರೈಲು ಸಂಖ್ಯೆ 66592: ಕೋಲಾರ-ಬೆಂಗಳೂರು ಕಂಟೊನ್ಮೆಂಟ್ ಮೆಮು ಏಪ್ರಿಲ್ 29 ರಿಂದ 2ರವರೆಗೆ ರದ್ದಾಗಲಿದೆ. ರೈಲು ಸಂಖ್ಯೆ 06539: ಎಸ್‌ಎಮ್‌ವಿಟಿ ಬೆಂಗಳೂರು-ಬೀದರ ಎಕ್ಸಪ್ರೆಸ್ ವಿಶೇಷ ರೈಲು ಮೇ 01 ರಂದು ರದ್ದಾಗಲಿದೆ. ರೈಲು ಸಂಖ್ಯೆ 06540: ಬೀದರ-ಎಸ್‌ಎಮ್‌ವಿಟಿ ಬೆಂಗಳೂರು ಎಕ್ಸಪ್ರೆಸ್ ವಿಶೇಷ ರೈಲು ಮೇ 02 ರಂದು ರದ್ದಾಗಲಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಗುಡ್ ಫ್ರೈಡೆ, ವಾರಂತ್ಯ: ಹುಬ್ಬಳ್ಳಿ, ಕಾರವಾರ, ಬೆಳಗಾವಿಯಿಂದ ಬೆಂಗಳೂರಿಗೆ ವಿಶೇಷ ರೈಲು ಆನ್ಲೈನ್ ಗೇಮಿಂಗ್ನಿಂದ ರಾಜ್ಯದಲ್ಲಿ ಐವರು ಮಕ್ಕಳು ಬಲಿ