Holi: Special Trains from Hubballi, Bengaluru, Ballari; Bagalkot Vijayapura Train Cancelledಎಸ್‌ಎಸ್‌ಎಸ್‌ ಹುಬ್ಬಳ್ಳಿ ರೈಲು ನಿಲ್ದಾಣ

ಹುಬ್ಬಳ್ಳಿ, ಮಾ.05: ಹೋಳಿ (Holi) ಹಬ್ಬದ ನಿಮಿತ್ತ ಉಂಟಾಗುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ನೈಋತ್ಯ ರೈಲ್ವೆಯು (South Western Railway) ವಿಶೇಷ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ಹುಬ್ಬಳ್ಳಿ, ವಿಜಯಪುರ, ಹಾಸನ, ಹೊಸಪೇಟೆ ಸೇರಿದಂತೆ ವಿವಿಧ ನಗರಗಳಿಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಪ್ರಯಾಣದ ಸಮಯ, ದಿನಾಂಕ ಇಲ್ಲಿದೆ.

ಮಾರ್ಚ 1 ರಿಂದ 31ರವರೆಗೆ ಸಂಚಾರ

ರೈಲು ಸಂಖ್ಯೆ 07329: ಎಸ್‌ಎಸ್‌ಎಸ್‌ ಹುಬ್ಬಳ್ಳಿ- ವಿಜಯಪುರ ವಿಶೇಷ ರೈಲು ಪ್ರತಿ ಶನಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.
ರೈಲು ಸಂಖ್ಯೆ 07330: ವಿಜಯಪುರ-ಹುಬ್ಬಳ್ಳಿ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06919: ಎಸ್‌ಎಸ್‌ಎಸ್‌ ಹುಬ್ಬಳ್ಳಿ-ವಿಜಯಪುರ

ರೈಲು ಸಂಖ್ಯೆ 06920: ವಿಜಯಪುರ- ಎಸ್‌ಎಸ್‌ಎಸ್‌ ಹುಬ್ಬಳ್ಳಿ

ರೈಲು ಸಂಖ್ಯೆ 06527: ಬಂಗಾರಪೇಟ-ಎಸ್‌ಎಮ್‌ವಿಟಿ ಬೆಂಗಳೂರು

ರೈಲು ಸಂಖ್ಯೆ 06528: ಎಸ್‌ಎಮ್‌ವಿಟಿ ಬೆಂಗಳೂರು – ಬಂಗಾರಪೇಟ

ರೈಲು ಸಂಖ್ಯೆ 06531: ಬೆಂಗಳೂರು ಕಂಟೋನ್ಮೆಂಟ್‌ – ಚಿಕ್ಕಬಳ್ಳಾಪುರ ವಿಶೇಷ ರೈಲು ಪ್ರತಿ ರವಿವಾರಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06532: ಚಿಕ್ಕಬಳ್ಳಾಪುರ – ಬೆಂಗಳೂರು ಕಂಟೋನ್ಮೆಂಟ್‌ ವಿಶೇಷ ರೈಲು ಪ್ರತಿ ರವಿವಾರಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06535: ಚಿಕ್ಕಬಳ್ಳಾಪುರ – ಬೆಂಗಳೂರು ಕಂಟೋನ್ಮೆಂಟ್‌ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06536: ಬೆಂಗಳೂರು ಕಂಟೋನ್ಮೆಂಟ್‌ – ಚಿಕ್ಕಬಳ್ಳಾಪುರ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06537: ಚಿಕ್ಕಬಳ್ಳಾಪುರ – ಬೆಂಗಳೂರು ಕಂಟೋನ್ಮೆಂಟ್‌ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06538: ಬೆಂಗಳೂರು ಕಂಟೋನ್ಮೆಂಟ್‌ – ಚಿಕ್ಕಬಳ್ಳಾಪುರ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06583: ಕೆಎಸ್‌ಆರ್‌ ಬೆಂಗಳೂರು-ಹಾಸನ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06584: ಹಾಸನ – ಕೆಎಸ್‌ಆರ್‌ ಬೆಂಗಳೂರು ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06593: ಯಶವಂತಪುರ – ಚಿಕ್ಕಬಳ್ಳಾಪುರ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 06594: ಚಿಕ್ಕಬಳ್ಳಾಪುರ – ಯಶವಂತಪುರ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 07393: ಹೊಸಪೇಟೆ-ಹುಬ್ಬಳ್ಳಿ

ರೈಲು ಸಂಖ್ಯೆ 07394: ಹುಬ್ಬಳ್ಳಿ-ಹೊಸಪೇಟೆ

ರೈಲು ಸಂಖ್ಯೆ 07395: ಬಳ್ಳಾರಿ – ದಾವಣಗೆರೆ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 07397: ಹೊಸಪೇಟೆ – ಬಳ್ಳಾರಿ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ಸಂಖ್ಯೆ 07398: ಬಳ್ಳಾರಿ – ಹೊಸಪೇಟೆ ವಿಶೇಷ ರೈಲು ಪ್ರತಿ ರವಿವಾರ ಹೊರತುಪಡಿಸಿ ಉಳಿದ ದಿನಗಳು ಸಂಚರಿಸಲಿದೆ.

ರೈಲು ರದ್ದು

ವಂದಾಲ್ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ (ಗೇಟ್ ಸಂಖ್ಯೆ 62) ಬಳಿ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಈ ಕೆಳಗಿನ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಭಾಗಶಃ ರದ್ದು: ಮಾರ್ಚ್ 11 ಮತ್ತು 22 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂ. 07329 ಎಸ್ಎಸ್ಎಸ್ ಹುಬ್ಬಳ್ಳಿ – ವಿಜಯಪುರ ಡೆಮು ಸ್ಪೆಷಲ್ ರೈಲು ಬಾಗಲಕೋಟೆ ನಿಲ್ಯಾಣಕ್ಕೆ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ. ಅಂದರೆ ಬಾಗಲಕೋಟೆ ಮತ್ತು ವಿಜಯಪುರ ನಡುವೆ ಈ ರೈಲಿನ ಸಂಚಾರ ರದ್ದಾಗಿರುತ್ತದೆ.

ಮಾರ್ಚ್ 12 ಮತ್ತು 23 ರಂದು ರೈಲು ಸಂಖ್ಯೆ 07330 ವಿಜಯಪುರ – ಎಸ್ಎಸ್ಎಸ್ ಹುಬ್ಬಳ್ಳಿ ಡೆಮು ಸ್ಪೆಷಲ್ ವಿಜಯವುರದ ಬದಲಾಗಿ ಬಾಗಲಕೋಟೆ ನಿಲ್ದಾಣದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ. ಈ ದಿನಗಳಂದು ವಿಜಯಪುರ ಮತ್ತು ಬಾಗಲಕೋಟೆ ನಡುವೆ ರೈಲು ಸೇವೆ ಇರುವುದಿಲ್ಲ.

ನಿಯಂತ್ರಣ: ಧಾರವಾಡದಿಂದ ಸೊಲ್ಲಾಪುರಕ್ಕೆ ತೆರಳುವ ಪ್ಯಾಸೆಂಜರ್ ರೈಲು (56904) ಮಾರ್ಚ್ 10, 11, 21 ಮತ್ತು 22ರಂದು ಮಾರ್ಗಮಧ್ಯೆ ಸುಮಾರು 30 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *