ಹುಬ್ಬಳ್ಳಿ, ಫೆಬ್ರವರಿ 25: ಕರ್ನಾಟಕ ಅತಿ ದೊಡ್ಡ ಜಾತ್ರಾ ಮಹೋತ್ಸವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ (Sirsi Marikamba Jatre 2026) ಆರಂಭವಾಗಿದೆ. ಮಾರಿಕಾಂಬಾ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮಾರಿಕಾಂಬಾ ದೇವಿ (Marikamba Devi) ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು (SWR) ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ನಿರ್ಧರಿಸಿದೆ. ಯಶವಂತಪುರ-ತಾಳಗುಪ್ಪ-ಯಶವಂತಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡಲಿದೆ. ರೈಲು ಸಂಖ್ಯೆ 06587: ಯಶವಂತಪುರ-ತಾಳಗುಪ್ಪ ರೈಲು ಶುಕ್ರವಾರದಂದು (ಫೆ.27) ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಶನಿವಾರದಂದು (ಫೆ.28) ನಸುಕಿನಜಾವ 5:05ಕ್ಕೆ ತಾಳಗುಪ್ಪ ತಲುಪಲಿದೆ. ರೈಲು ಸಂಖ್ಯೆ 06588: ತಾಳಗುಪ್ಪ-ಯಶವಂತಪುರ ರೈಲು ಶನಿವಾರದಂದು (ಫೆ.28) ರಂದು ಬೆಳಗ್ಗೆ 9:30 ಕ್ಕೆ ತಾಳಗುಪ್ಪದಿಂದ ಹೊರಟು ಅದೇ ದಿನ ಸಂಜೆ 5:15ಕ್ಕೆ ಯಶವಂತಪುರ ತಲುಪಲಿದೆ. ಈ ರೈಲುಗಳು ತುಮಕೂರು, ತಿಪಟೂರು, ಅರಸಿಕೇರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಲ್ಲಿ ಹಾಲ್ಟ್, ಹಾರನಹಳ್ಳಿ ಹಾಲ್ಟ್, ಕುಮಸಿ, ಅರಸಾಲು ಹಾಲ್ಟ್, ಆನಂದಪುರಂ, ಅದ್ದೇರಿ ಹಾಲ್ಟ್ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ. ಈ ರೈಲುಗಳು 20 ಕೋಚ್‌ಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಈ ರೈಲುಗಳ ನಿಲುಗಡೆಗಳು ಮತ್ತು ಸಮಯಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧೀಕೃತ ವೆಬ್‌ಸೈಟ್ ಆದ www.enquiry.indianrail.gov.in ಅಥವಾ NTES ಆಪ್ ಮೂಲಕ ಅಥವಾ 139ಗೆ ಡಯಲ್ ಮಾಡಿ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ; ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ: ಸಿಎಂ ಈಶ್ವರ ದೇವಸ್ಥಾನದ ಜಾಗಟೆ, ಗಂಟೆ ಶಬ್ದದಿಂದ ಕಿರಿಕಿರಿ: ಬಂದ್ ಮಾಡಿಸುವಂತೆ ಮುಸ್ಲಿಂ ವ್ಯಕ್ತಿ ಪಟ್ಟು