ಹುಬ್ಬಳ್ಳಿ, ಫೆಬ್ರವರಿ 21: ಹೋಳಿ (Holi) ಹಬ್ಬವು ಸಮೀಪಿಸುತ್ತಿದ್ದು, ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಸಜ್ಜಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ನೈಋತ್ಯ ರೈಲ್ವೆ ವಲಯವು (South Western Railway) ಹೆಚ್ಚುವರಿ ರೈಲುಗಳನ್ನು ಓಡಿಸಲು ತೀರ್ಮಾನಿಸಿದೆ. ಜೊತೆಗೆ ಈಗಾಗಲೆ ಸಂಚರಿಸುತ್ತಿರುವ ರೈಲುಗಳ ಸಂಚಾರ ದಿನಗಳನ್ನು ಕೂಡ ವಿಸ್ತರಿಸಿದೆ. ಹಾಗಿದ್ದರೆ, ಯಾವ್ಯಾವ ರೈಲುಗಳು ಸಂಚರಿಸಲಿವೆ? ದಿನಾಂಕ, ಸಮಯದ ಮಾಹಿತಿ ಇಲ್ಲಿದೆ. ರೈಲು ಸಂಖ್ಯೆ 06539: ಎಸ್‌ಎಂವಿಟಿ ಬೆಂಗಳೂರು-ಬೀದರ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮಾರ್ಚ್ 1 ರಿಂದ 29ರವರೆಗೆ ವಿಸ್ತರಿಸಲಾಗಿದೆ. ರೈಲು ಸಂಖ್ಯೆ 06540: ಬೀದರ್-ಎಸ್‌ಎಂವಿಟಿ ಬೆಂಗಳೂರು ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮಾರ್ಚ್ 2 ರಿಂದ 30ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು, ಈ ಎರಡೂ ರೈಲುಗಳನ್ನು ಫೆಬ್ರವರಿ ತಿಂಗಳ ಅಂತ್ಯದವರೆಗೆ ಮಾತ್ರ ಓಡಿಸಲು ನೈಋತ್ಯ ರೈಲ್ವೆ ವಲಯ ತೀರ್ಮಾನಿಸಿತ್ತು. ರೈಲು ಸಂಖ್ಯೆ 0627: ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ ಸಾಪ್ತಾಹಿಕ ಎಕ್ಸಪ್ರೆಸ್ ರೈಲು ಸಂಚಾರವನ್ನು ಮಾರ್ಚ್ 7 ರಿಂದ 28ರವೆಗೆ ವಿಸ್ತರಣೆ ಮಾಡಿದೆ. ರೈಲು ಸಂಖ್ಯೆ 06208: ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮಾರ್ಚ್ 8 ರಿಂದ 29ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು, ಈ ಎರಡೂ ರೈಲುಗಳನ್ನು ಮಾರ್ಚ್ 1ರವರೆಗೆ ಮಾತ್ರ ಓಡಿಸಲು ನೈಋತ್ಯ ರೈಲ್ವೆ ವಲಯ ತೀರ್ಮಾನಿಸಿತ್ತು. ರೈಲು ಸಂಖ್ಯೆ 02863: ಸಂತ್ರಾಗಾಜಿ-ಯಲಹಂಕ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮಾರ್ಚ್ 5 ರಿಂದ 26ರವರೆಗೆ ವಿಸ್ತರಣೆ ಮಾಡಲಾಗಿದೆ ರೈಲು ಸಂಖ್ಯೆ 02864: ಯಲಹಂಕ-ಸಂತ್ರಾಗಾಜಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮಾರ್ಚ್ 7 ರಿಂದ 28ರವರೆಗೆ ನೈಋತ್ಯ ರೈಲ್ವೆ ವಲಯ ವಿಸ್ತರಣೆ ಮಾಡಿದೆ. ಈ ಮೊದಲು, ಈ ಎರಡೂ ರೈಲುಗಳನ್ನು ಫೆಬ್ರವರಿ 28 ರವರೆಗೆ ಮಾತ್ರ ಓಡಿಸಲು ನೈಋತ್ಯ ರೈಲ್ವೆ ವಲಯ ತೀರ್ಮಾನಿಸಿತ್ತು. ಮೇಲಿನ ರೈಲುಗಳ ನಿಲುಗಡೆಗಳು ಮತ್ತು ಸಮಯಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಆದ www.enquiry.indianrail.gov.in ಗೆ ಅಥವಾ NTES ಆಪ್ ಮೂಲಕ ಅಥವಾ 139ಗೆ ಡಯಲ್ ಮಾಡಿ. ಟ್ವಿಟರ್ ಪೋಸ್ಟ್ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ.#SWRupdates #Holi pic.twitter.com/YBFvWiVWFH— South Western Railway (@SWRRLY) February 18, 2026 ಹೋಳಿ ಹಬ್ಬ, ಯುಗಾದಿ ಮತ್ತು ಬೇಸಿಗೆ ರಜೆ ಸೇರಿದಂತೆ ವಿವಿಧ ಕಾರಣಗಳಿಂದ ರೈಲ್ವೆ ಇಲಾಖೆ ದೇಶಾದ್ಯಂತ 186 ರೈಲುಗಳನ್ನು ಓಡಿಸುತ್ತಿದೆ. 94 ರೈಲುಗಳು ಹೋಳಿ ಹಬ್ಬದ ಸಂಬಂಧ ಮತ್ತು 92 ರೈಲುಗಳು ಇತರ ವಿಶೇಷ ಸೇವೆಗಳಾಗಿ ಕಾರ್ಯನಿರ್ವಹಿಸುತ್ತವೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಬಂಧನ ಹುಬ್ಬಳ್ಳಿಯ KSCA ಮೈದಾನದ ಪೆವಿಲಿಯನ್ಗೆ ಕನ್ನಡಿಗ ಸುನೀಲ್ ಜೋಶಿ ಹೆಸರು ನಾಮಕರಣಕ್ಕೆ ನಿರ್ಧಾರ