ಚಿಕ್ಕಮಗಳೂರು, ಫೆಬ್ರವರಿ 25: ಈಶ್ವರ ದೇವಸ್ಥಾನದಲ್ಲಿನ (Eshwara Temple) ಭಜನೆ, ಜಾಗಟೆ ಮತ್ತು ಗಂಟೆ ಶಬ್ಧದಿಂದ ಕಿರಿಕಿರಿಯಾಗುತ್ತಿದ್ದು ಬಂದ್ ಮಾಡಿಸುವಂತೆ ಮುಸ್ಲಿಂ (Muslim) ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿಯ ಈಶ್ವರ್ ದೇವಾಲಯದಲ್ಲಿ ಪ್ರತಿನಿತ್ಯ ಭಜನೆ ನಡೆಯುತ್ತದೆ. ಮಂಗಳಾರತಿ ಸಮಯದಲ್ಲಿ ಗಂಟೆ ಮತ್ತು ಜಾಗಟೆಗಳನ್ನು ಬಾರಿಸಲಾಗುತ್ತದೆ. ಈ ದೇವಸ್ಥಾನದ ಪಕ್ಕದಲ್ಲೇ ದೂರುದಾರ ಫಾರುಕ್ ವಾಸುತ್ತಿದ್ದಾನೆ. ದೇವಸ್ಥಾನದ ಗಂಟೆ, ಜಾಗಟೆಯಿಂದ ಬರುವ ಶಬ್ದದಿಂದ ತನಗೆ ಕಿರಿಕಿರಿಯಾಗುತ್ತಿದೆ ಎಂದು ಫಾರುಕ್ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ, ದೂರು ನೀಡಿದ್ದಾನೆ. ವಿಚಾರ ತಿಳಿದು ಬಸವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಈ ವೇಳೆ ಫಾರುಕ್ ಪೊಲೀಸರ ಎದುರುಗಡೆಯೇ ವಾಗ್ವಾದಕ್ಕೆ ಇಳಿದಿದ್ದಾನೆ. “ನಾವು ಧ್ವನಿವರ್ಧಕವನ್ನ ನಿಧಾನವಾಗಿ ಬಳಸುತ್ತೇವೆ” ಎಂದು ಈಶ್ವರ ದೇವಸ್ಥಾನದ ಅರ್ಚಕ ಜಗದೀಶ್ ತಿಳಸಿದ್ದಾರೆ. ಆದರೂ ಪಟ್ಟು ಬಿಡಿದ ದೂರುದಾರ ಫಾರುಕ್ ಸಂಪೂರ್ಣ ಧ್ವನಿವರ್ಧಕ ಬಂದ್ ಮಾಡಿಸುವಂತೆ ಆಗ್ರಹಿಸಿದ್ದಾನೆ. ಚಿಕ್ಕಮಗಳೂರು ನಗರದ ಹಳೆ ಉಪ್ಪಳ್ಳಿಯ ಈಶ್ವರ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ಸುಮಾರು 6.30 ರಿಂದ 7 ಗಂಟೆಯವರೆಗೆ ಸುಪ್ರಭಾತ ಹಾಗೂ ಜಾಗಂಟೆ ಮೊಳಗಿಸಲಾಗುತ್ತದೆ. ಜೊತೆಗೆ ಬೆಳಿಗ್ಗೆ 15 ನಿಮಿಷ ಮತ್ತು ಸಂಜೆ 15 ನಿಮಿಷ ಜಾಗಂಟೆ ಹಾಕುವ ಆಚರಣೆ ನಡೆದು ಬರುತ್ತಿದೆ. Post navigation ಶಿರಸಿ ಮಾರಿಕಾಂಬಾ ಜಾತ್ರೆ ವಿಶೇಷ: ತಾಳಗುಪ್ಪವರೆಗೆ 1 ಟ್ರಿಪ್ ವಿಶೇಷ ರೈಲು CET 2026: ಮಾರ್ಚ್ 30ರವರೆಗೆ ಅರ್ಜಿ ತಿದ್ದುಪಡಿಗೆ ಅವಕಾಶ, RD ಸಂಖ್ಯೆಯನ್ನೂ ನವೀಕರಿಸಲು ಅವಕಾಶ