ನವದೆಹಲಿ, ಮಾರ್ಚ್ 11: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (Pradhan Mantri Kisan Samman Nidhi Yojana (PM-KISAN)) ಯೋಜನೆಯ 22ನೇ ಕಂತನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾ.13ರಂದು ಬಿಡುಗಡೆ ಮಾಡಲಿದ್ದಾರೆ. ಸುಮಾರು ಒಟ್ಟು 19000 ಕೋಟಿ ರೂ.ಗಳನ್ನು 9.32 ಕೋಟಿ ರೈತರಿಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಅಸ್ಸಾಂನ ಗುವಾ ಹಟಿಯಲ್ಲಿ ಈ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. 2019ರ ಫೆಬ್ರವರಿಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದ್ದು ವಾರ್ಷಿಕ 3 ಕಂತುಗಳು ಮೂಲಕ 6000 ರೂ.ಗಳನ್ನು ದೇಶದ ರೈತರಿಗೆ ಒದಗಿಸಲಾಗುತ್ತಿದೆ. ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್, ಜೂನ್ ಅಥವಾ ಜುಲೈ, ಅಕ್ಟೋಬರ್‌ನಲ್ಲಿ ಕಂತು ಬಿಡುಗಡೆ ಮಾಡಲಾಗುತ್ತದೆ. 21ನೇ ಕಂತಿನವರೆಗೆ ಸುಮಾರು 4.09 ಲಕ್ಷ ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಂದರೇನು? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ರೈತರ ಕಲ್ಯಾಣಕ್ಕಾಗಿ 2018ರಲ್ಲಿ ಆರಂಭಿಸಲಾಯಿತು. ಈ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000ರಂತೆ ವರ್ಷಕ್ಕೆ ಒಟ್ಟು ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಈಗಾಗಲೇ 21 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಕೊನೆಯ ಕಂತು 2025ರ ನವೆಂಬರ್ 19ರಂದು ಬಿಡುಗಡೆಗೊಂಡಿತ್ತು. ಫಲಾನುಭವಿಗಳ ದಾಖಲೆ ಮರುಪರಿಶೀಲನೆ 22ನೇ ಕಂತಿನ ಬಿಡುಗಡೆಗೆ ಮುನ್ನ ಸರ್ಕಾರ ದೊಡ್ಡ ಮಟ್ಟದಲ್ಲಿ ಫಲಾನುಭವಿಗಳ ದಾಖಲೆ ಮರುಪರಿಶೀಲನೆ ನಡೆಸಿದೆ. e-KYC ಪರಿಶೀಲನೆ, ಭೂ ದಾಖಲೆಗಳ ಪರಿಶೀಲನೆ ಹಾಗೂ ಮರುದೃಢೀಕರಣದ ನಂತರ ಕೆಲವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹೆಸರುಗಳನ್ನು ಏಕೆ ತೆಗೆದುಹಾಕಲಾಗುತ್ತಿದೆ? ಯೋಜನೆ ಹೆಚ್ಚು ಪಾರದರ್ಶಕವಾಗಲು ಹಾಗೂ ಅರ್ಹರು ಮಾತ್ರ ಯೋಜನೆಯ ಲಾಭ ಪಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಭೂ ದಾಖಲೆ ಪರಿಶೀಲನೆ 2019ರ ಫೆಬ್ರವರಿ 1 ನಂತರ ತಮ್ಮ ಹೆಸರಿನಲ್ಲಿ ಭೂಮಿ ನೋಂದಾಯಿಸಿಕೊಂಡವರ ವಿವರಗಳನ್ನು ವಿಶೇಷವಾಗಿ ಪರಿಶೀಲಿಸಲಾಗುತ್ತಿದೆ. ಭೂಸ್ವಾಮ್ಯವು ಪ್ರಮುಖ ಅರ್ಹತಾ ಮಾನದಂಡವಾಗಿರುವುದರಿಂದ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಫಲಾನುಭವಿಯ ಪಟ್ಟಿಯಿಂದ ಹೆಸರು ಕೈಬಿಡಬಹುದು. 2. ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಹಣ ಗಂಡ, ಹೆಂಡತಿ ಮತ್ತು ಮಕ್ಕಳು ಒಂದೇ ಕುಟುಂಬವೆಂದು ಪರಿಗಣಿಸಲಾಗುತ್ತದೆ. ಕುಟುಂಬದಲ್ಲಿ ಒಬ್ಬರಿಗಷ್ಟೇ ಈ ಯೋಜನೆಯ ಲಾಭ ಸಿಗುತ್ತದೆ. ಗಂಡ ಮತ್ತು ಹೆಂಡತಿ ಇಬ್ಬರೂ ಕಂತು ಪಡೆಯುತ್ತಿದ್ದರೆ, ಅಂತಹ ಪ್ರಕರಣಗಳಲ್ಲಿ ಹಣ ನಿಲ್ಲಿಸಲಾಗಿದೆ. ಇದನ್ನೂ ಓದಿ: ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಪಾಕ್ ಉಗ್ರರು ಒಳನುಸುಳುವ ಯತ್ನ: ಓರ್ವ ಹತ ಭಾರತದಲ್ಲಿ 1 ಜಿಬಿ ಡೇಟಾ ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆ: ಅಶ್ವಿನಿ ವೈಷ್ಣವ್