Chikkamagaluru Stone Petaling: Muslim stone Petaling on hindu houseಮನೆ ಮೇಲೆ ಕಲ್ಲು ಎಸೆತ

ಚಿಕ್ಕಮಗಳೂರು, ಫೆಬ್ರವರಿ 17:‌ ಚಿಕ್ಕಮಗಳೂರು (Chikkamagaluru) ನಗರದ ವಿಜಯನಗರ ಬಡಾವಣೆಯ ತಿಲಕ್ ಪಾರ್ಕ್ ಸಮೀಪದ ಹಿಂದೂ (Hindu) ಮನೆಯ ಮೇಲೆ  ಮುಸ್ಲಿಂ (Muslim) ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಮುಸ್ಲಿಂ ಯುವಕರು ಕಳೆದ ಒಂದು ವಾರದಿಂದ ಸುಧಾ ಎಂಬುವರ ಮನೆಯ ಮೇಲೆ ಕಲ್ಲು ತೂರಿದ್ದಾರೆ. ಸೋಮವಾರ (ಫೆ.16) ರಾತ್ರಿ ಮತ್ತೆ ಕಲ್ಲು ತೂರುವಾಗ ಇಬ್ಬರು ಮುಸ್ಲಿಂ ಯುವಕರನ್ನು ಬಜರಂಗದಳದ (Bajarangadal) ಕಾರ್ಯಕರ್ತರು ಹಿಡಿದಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಸವನಹಳ್ಳಿ ಠಾಣೆ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಬಜರಂಗದಳ ಕಾರ್ಯಕರ್ತರು ಇಬ್ಬರೂ ಮುಸ್ಲಿಂ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಒಪ್ಪಿಸಿದ್ದಾರೆ.

ಮುಸ್ಲಿಂ ಯುವಕರ ‌ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಹೀಗಾಗಿ ಬಜರಂಗದಳದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವಂತೆ SDPI ಮುಖಂಡರು ಆಗ್ರಹಿಸಿದರು. ಮನೆಯ ಮೇಲೆ ಕಲ್ಲು ತೂರಿದ ಆರೂ ಮಂದಿ ಯುವಕರನನ್ನು ಬಂಧಿಸುವಂತೆ ಭಜರಂಗದಳ ಮತ್ತು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.

ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸುಧಾ ಅವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ‌ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿವೆ.

ಇದನ್ನೂ ಓದಿ: ಮಾರ್ಚ್‌ 18 ರಿಂದ SSLC, ಫೆ. 28 ರಿಂದ PUC ಪರೀಕ್ಷೆ ಆರಂಭ

ಸುಧಾ ಅವರ ಮನೆಯ ಮೇಲೆ ಕಲ್ಲು ಎಸೆದ  ಹುಸೇನ್  ರಿಯಾನ್ ಮೇಲೆ‌ ಎಫ್‌ಐಆರ್‌ ದಾಖಲಾಗಿದೆ. ಕಲ್ಲು ತೂರಾಟ ಮಾಡಿದ ಇಬ್ಬರು ಯುವಕರನ್ನ ಹಿಡಿದ ಹಾಸನ ವಿಭಾಗದ ಭಜರಂಗದಳ ಸಹ ಸಂಚಾಲಕ ಶಾಮ್, ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂತೋಷ್ ವಿರುದ್ಧ ಹಸೇನ್ ನೀಡಿದ ದೂರಿನ ಆಧಾರದ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ.

ಆಕ್ಷದ್ ಹಸೇನ್ ‌ಮೇಲೆ  (BNS), 2023 (U/s-310(2),62,352), SC ST ಕಾಯ್ದೆ 2015 (U/s-3cl(1)(r)(s),3(2) ಕೇಸ್ ದಾಖಲಾಗಿದ್ದರೇ,  ಶಾಮ್‌,ಸಂತೋಷ್ ಮೇಲೆNS), 2023 (U/s-115(2),118(1),351(2),352,r/w 3(5)) ಅಡಿ ಪ್ರಕರಣ ದಾಖಲಾಗಿದೆ.

ದಲಿತ‌ ಮನೆಯ ಮೇಲೆ ಕಲ್ಲು ತೂರಾಟ

ಪ್ರಕರಣ ಸಂಬಂಧ ಸುಧಾ ಅವರ ಪಕ್ಕದ ಮನೆಯ ನಿವಾಸಿ ಇಕ್ಬಾಲ್‌ ಮಾತನಾಡಿ, ಏನ್ ಗಲಾಟೆ ಎಂದು ಹಿಂದೂ ಸಂಘಟನೆ ಮುಖಂಡರು ಬಂದಿದ್ದರು. ನಾವೇ ಹಿಡಿದು ಕೊಟ್ಟಿದ್ದೇವೆ. ಒಂದು ವಾರದಿಂದ ತೊಂದರೆ ಮಾಡುತ್ತಿದ್ದಾರೆ. ಕಾಂಪೌಂಡ್ ಹಾರಿ ಬರುತ್ತಾರೆ. ಸಂತೋಷ್ ಶಾಮ್ ನಂತರ  ಬಂದ್ರು. ಅವರು ಹೊಡೆದಿಲ್ಲ ಅವರ ಮೇಲೆ ಸುಳ್ಳು ಕೇಸ್ ಮಾಡಿದ್ದಾರೆ. ಹಿಂದೂ ಮುಖಂಡರ ಮೇಲೆ FIR ಮಾಡಿದ್ರೆ ಹೇಗೆ? ಇದು ನ್ಯಾಯಾನಾ? ಒಂದೇ ಒಂದು ಏಟು ಬಿದ್ದಿರುವುದನ್ನು ತೋರಿಸಲಿ. ಯಾರು ಹೊಡೆದಿಲ್ಲ,ಪೊಲೀಸರು ಬಂದು ಕರೆದುಕೊಂಡು ಹೋದರು. ಮಹಿಳೆಯರು ಇರುವ ಸಮಯದಲ್ಲಿ ಇವರು ಬಂದು ಕಲ್ಲು ‌ತೂರಾಟ ಮಾಡೋದು ಸರಿನಾ? ಎಂದು ಆಕ್ರೋಶ ಹೊರಹಾಕಿದರು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *