ಮಂಗಳೂರು, ಫೆಬ್ರವರಿ 17: ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆ ಬಗ್ಗೆ ದೇಶಾದ್ಯಂತ ಭರ್ಜರಿ ನಡೆಯುತ್ತಿದೆ. ಈ ಹೊತ್ತಿನಲ್ಲೇ ಮಂಗಳೂರು (Mangaluru) ಮೂಲದ ಉದ್ಯಮಿ ವಿವೇಕ್ ರಾಜ್ (Vivek Raj) ಎಂಬುವರು ಎಐ ಆಧರಿತ ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ 146 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇದಕ್ಕೆ ನಾಲ್ಕು ಪೇಟೆಂಟ್ ಪಡೆದಿದ್ದಲ್ಲದೇ, ಇದೀಗ 214 ಕೋಟಿ ರು. ವೆಚ್ಚ ಮಾಡಿ ತಾವೇ 16 ಎಕರೆ ಪ್ರದೇಶದಲ್ಲಿ ಎಐ ಆಧರಿತ ಹೈಡೋಫೋನಿಕ್ಸ್ ಕೃಷಿಗೆ ಮುಂದಾಗಿದ್ದಾರೆ. ವಿವೇಕ್ ಅವರ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ, ಸೋಮವಾರದಿಂದ ದೆಹಲಿಯಲ್ಲಿ ಆರಂಭವಾದ 5 ದಿನಗಳ ಜಾಗತಿಕ ಎಐ ಶೃಂಗಕ್ಕೆ ಭಾಷಣಕಾರನನ್ನಾಗಿ ವಿವೇಕ್ ಅವರನ್ನು ಆಹ್ವಾನಿಸಿದೆ. STORY | Indian entrepreneur to invest Rs 214 cr on AI-powered hydroponic farmingAn Indian entrepreneur who lost his entire crop to drought a decade ago is investing Rs 214 crore in artificial intelligence-enabled hydroponic farming to grow high-value spices and medicinal plants… https://t.co/w2FUumuunh— Press Trust of India (@PTI_News) February 16, 2026 ದಶಕಗಳ ಹಿಂದೆ ಹಲವು ಕೋಟಿ ರು.ವೆಚ್ಚ ಮಾಡಿ 5000 ಎಕರೆ ಜಾಗದಲ್ಲಿ ಬೆಳೆದ ಶುಂಠಿ ಕೃಷಿ ಪೂರ್ಣವಾಗಿ ಕೈಕೊಟ್ಟ ಬಳಿಕ ಕೃಷಿ ವಲಯದಲ್ಲಿ ಹೊಸತನಕ್ಕೆ ಮಿಡಿದ ಅವರ ಶ್ರಮ ಇದೀಗ ಫಲ ಕೊಟ್ಟಿದೆ. ಈ ಕುರಿತು ಪನಾಮಾ ಹೈಡೋ-ಎಕ್ಸ್ ಕಂಪನಿಯ ಸಿಇಒ ಆಗಿರುವ ಕೃತ್ಯೋದ್ಯಮಿ ರಾಜ್ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ. 5000 ಎಕರೆ ಶುಂಠಿ ನಷ್ಟ ರಾಜ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ 5,000 ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆದಿದ್ದರು. ಆದರೆ ಬರಗಾಲದಿಂದ ಬೆಳೆ ನಷ್ಟವಾಗಿ ಭಾರೀ ನಷ್ಟ ಉಂಟಾಗಿತ್ತು. ಇದರಿಂದ ನೊಂದ ವಿವೇಕ್, ಒಳಾಂಗಣ ಕೃಷಿಯ ಕಡೆ ತಿರುಗಿದ್ದು, 2016ರಿಂದ ಆ ನಿಟ್ಟಿನಲ್ಲಿ ಸಂಶೋಧನೆ ಆರಂಭಿಸಿದ್ದರು. ಫಲವಾಗಿ ಒಳಾಂಗಣದಲ್ಲಿ ಎಐ ಬಳಸಿ ಅಲ್ಲಿನ ಬೆಳಕು, ಆರ್ಧರತೆ, ತಾಪಮಾನದಂತಹ ಅಂತಗಳನ್ನು ನಿಯಂತ್ರಿಸುವ ‘ಎಐ-ಚಾಲಿತ ಸ್ಮಾರ್ಟ್ ಎಲ್ ಇಡಿ ವ್ಯವಸ್ಥೆ’ ಅಭಿವೃದ್ಧಿಪಡಿಸಿ, 2021ರಲ್ಲಿ ಆಸ್ಟ್ರೇಲಿಯಾದಿಂದ ತಮ್ಮ ಮೊದಲ ಪೇಟೆಂಟ್ ಪಡೆದರು. ಬಳಿಕ ಜಲಕೃಷಿಯಲ್ಲಿ ಬೆಳೆಯಲಾದ ಬೆಳೆಯ ಸಮಸ್ಯೆಗಳನ್ನು ಎಐ ಮೂಲಕ ಕಂಡುಹಿಡಿಯುವುದು ಮತ್ತು ಒಳಾಂಗಣದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡುವುದು, ಗಿಡಗಳಲ್ಲಿ ಸಮಸ್ಯೆ ಗೋಚರಿಸುವುದಕ್ಕೂ ಮುನ್ನವೇ ಎಐ ಸಹಾಯದಿಂದ ಕೇಸು ಗಿಡಕ್ಕಂಟಿದ ರೋಗವನ್ನು ಪತ್ತೆ ಹಚ್ಚುವುದು, ಎಐ ಚಾಲಿತ ಕ್ಯಾಮೆರಾಗಳನ್ನು ಈ ಕೆಲಸಕ್ಕೆ ಬಳಸುವುದನ್ನು ಕಂಡುಹಿಡಿದಿರುವ ವಿವೇಕ್, ಇದಕ್ಕೆ ಬ್ರಿಟನ್, ಜರ್ಮನಿ ಮತ್ತು ಆಸ್ಟ್ರೇಲಿಯಾದಿಂದ ಪೇಟೆಂಟ್ ಪಡೆದಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿ ಆಯೋಜಿಸಲಾಗಿರುವ 5 ದಿನಗಳ ಎಐ ಇಂಪ್ಯಾಕ್ಟ್ ಎಕ್ಸ್ ಪೋಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಈ ಕ್ಷಣವನ್ನು ಅವರು ‘ಅಸಾಧಾರಣ ಸಾಮರ್ಥ್ಯದ ಒಂದು ನೋಟ’ ಎಂದು ಬಣ್ಣಿಸಿದ್ದಾರೆ. ಗುರುವಾರ ಅವರು ಎಐ ಶೃಂಗದಲ್ಲಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ದೆಹಲಿಯ ಭಾರತ ಮಂಡಪಂನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ 13 ದೇಶಗಳ 600ಕ್ಕೂ ಅಧಿಕ ಸ್ಟಾರ್ಟ್ ಅಪ್‌ಗಳು ಭಾಗವಹಿಸಿವೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಇಂದು ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್ ಪೋ 2026 ಅನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ ಮಾರ್ಚ್ 18 ರಿಂದ SSLC, ಫೆ. 28 ರಿಂದ PUC ಪರೀಕ್ಷೆ ಆರಂಭ