ಬೆಂಗಳೂರು, ಏಪ್ರಿಲ್ 10: ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿಯು (KSEAB) ಗುರುವಾರ (ಏ.09) ದಂದು ಫಲಿತಾಂಶ ಪ್ರಕಟಿಸಿತು. ಕಳೆದ ವರ್ಷಕ್ಕಿಂತ ಈ ಬಾರಿಯ ಫಲಿತಾಂಶ ಶೇ 10 ರಷ್ಟು ಏರಿಕೆ ಕಂಡಿದೆ. 2025-26ನೇ ಶೈಕ್ಷಣಿಕ ಸಾಲಿನ ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಶೇ 86.48 ರಷ್ಟು ದಾಖಲಾಗಿದೆ. ಫಲಿತಾಂಶ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆ-2 ರ ದಿನಾಂಕ ನಿಗದಿಪಡಿಸಿದೆ. ಏ. 25ರಿಂದ ಮೇ. 8ರವರೆಗೆ ಪರೀಕ್ಷೆ-2 ನಡೆಯಲಿದೆ. ವೇಳಾಪಟ್ಟಿ ಏಪ್ರಿಲ್ 25 – ಕನ್ನಡ, ಆರೇಬಿಕ್, ಏಪ್ರಿಲ್ 27 – ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ ಏಪ್ರಿಲ್ 28 – ಇಂಗ್ಲಿಷ್ ಏಪ್ರಿಲ್ 29 – ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣಶಾಸ್ತ್ರ ಏಪ್ರಿಲ್ 30 – ಅರ್ಥಶಾಸ್ತ್ರ, ಜೀವಶಾಸ್ತ್ರ ಮೇ. 2 – ಇತಿಹಾಸ, ಗಣಿತ, ಗೃಹ ವಿಜ್ಞಾನ ಮೇ. 5 – ಹಿಂದಿ ಮೇ. 6 – ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ ಮೇ. 7 – ಭೂಗೋಳಶಾಸೆ, ಮನಃಶಾಸ್ತ್ರ, ಭೂಗರ್ಭಶಾಸ್ತ್ರ, ಮೂಲಗಣಿತ ಮೇ. 8 – ತಮಿಳು, ತೆಲಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಹಾಗೂ ಹಿಂದೂಸ್ಥಾನಿ ಸಂಗೀತ. ಎಲೆಕ್ಟ್ರಾನಿಕ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್‌ನೆಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ವೇಳಾಪಟ್ಟಿಯ ಪಿಡಿಎಫ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ದ್ವಿತೀಯ ಪಿಯುಸಿ ಫಲಿತಾಂಶ 10% ಏರಿಕೆ: ಉಡುಪಿ ಪ್ರಥಮ, ಯಾದಗಿರಿಗೆ ಕೊನೆ ಸ್ಥಾನ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ಹಲ್ಲಿನ ರೂಟ್ ಕೆನಾಲ್ ಚಿಕಿತ್ಸೆ ವಿಮಾ ಯೋಜನೆಯಲ್ಲಿ ಸೇರ್ಪಡೆ