ಬೆಂಗಳೂರು, ಏಪ್ರಿಲ್ 09: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ (2nd PUC Result 2026) ಇಂದು (ಏ.09) ಗುರುವಾರ ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆನ್‌ಲೈನ್ ಮೂಲಕ ಫಲಿತಾಂಶ (KSEAB) ಬಿಡುಗಡೆ ಮಾಡಿದೆ. ಶೇ 86.48 ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಒಟ್ಟು 7,10,363 ವಿದ್ಯಾರ್ಥಿಗಳ ಪೈಕಿ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಈ ಬಾರಿ ಫಲಿತಾಂಶದಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿದೆ. ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ 96.39 ಪ್ರತಿಶತ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಪ್ರಥಮ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ದ್ವಿತೀಯ, ಕೊಡಗು ಮೂರನೇ, ವಿಜಯಪುರ ನಾಲ್ಕನೇ ಮತ್ತು ಯಾದಗಿರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ ಎಂದರು. ಇನ್ನೂ ವಿದ್ಯಾಕಾಶಿಯಾದ ಧಾರವಾಡ ಜಿಲ್ಲೆ 17ನೇ ಸ್ಥಾನ ಪಡೆದಿದೆ. ಅದಲ್ಲದೆ ಬೆಂಗಳೂರು ದಕ್ಷಿಣ 3ನೇ ಸ್ಥಾನ ಪಡೆದರೆ, ಬೆಂಗಳೂರು ಉತ್ತರ 5ನೇ ಸ್ಥಾನ ಪಡೆದಿದೆ. ಇನ್ನೂ ಮೈಸೂರು ಜಿಲ್ಲೆ 11 ನೇ ಸ್ಥಾನ ಪಡೆದಿದೆ. ಜೊತೆಗೆ ವಿಜಯಪುರ ಜಿಲ್ಲೆ 29ನೇ ಸ್ಥಾನ ಪಡೆದಿದ್ದು, ಬೆಳಗಾವಿ ಜಿಲ್ಲೆ 26ನೇ ಸ್ಥಾನ ಪಡೆದಿದೆ. 88.70 ಪ್ರತಿಶತ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಈ ಸಲವೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 83.65 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 72.86, ವಾಣಿಜ್ಯ ಶೇ. 88.04 ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ 91.69ಶೇ ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವರು ಹೇಳಿದರು. ಜಿಲ್ಲಾವಾರು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಉಡುಪಿ – 96.39% ದಕ್ಷಿಣ ಕನ್ನಡ – 96.35% ಕೊಡಗು – 92.34% ವಿಜಯಪುರ – 92.00% ಉತ್ತರ ಕನ್ನಡ – 91.78% ಬೆಂಗಳೂರು ಗ್ರಾಮಾಂತರ – 91.00% ಚಿಕ್ಕಮಗಳೂರು – 90.80% ಬೆಂಗಳೂರು ದಕ್ಷಿಣ – 90.55% ಚಿಕ್ಕಬಳ್ಳಾಪುರ – 90.24% ಬೆಂಗಳೂರು ಉತ್ತರ – 90.05% ಹಾಸನ – 89.71% ಮಂಡ್ಯ – 88.85% ಕೋಲಾರ – 87.38% ರಾಮನಗರ – 87.90% ಶಿವಮೊಗ್ಗ – 87.62% ತುಮಕೂರು – 86.89% ಕೊಪ್ಪಳ – 86.80% ಬೀದರ್ – 84.61% ಚಾಮರಾಜನಗರ – 84.68% ಮೈಸೂರು – 84.80% ಬಾಗಲಕೋಟೆ – 84.12% ಹಾವೇರಿ – 84.11% ಧಾರವಾಡ – 83.31% ಚಿಕ್ಕೋಡಿ – 83.10% ದಾವಣಗೆರೆ – 81.99% ಬೆಳಗಾವಿ – 80.32% ಚಿತ್ರದುರ್ಗ – 79.12% ಬಳ್ಳಾರಿ – 78.69% ಕಲಬುರಗಿ – 76.97% ಗದಗ – 76.65% ರಾಯಚೂರು – 74.09% ಯಾದಗಿರಿ – 71.21% ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ karresults.nic.in ಮೂಲಕ ತಮ್ಮ ಫಲಿತಾಂಶ ಪರಿಶೀಲಿಸಬಹುದು. ಅಥವಾ ಡಿಜಿಲಾಕರ್ ಮೂಲಕ ಫಲಿತಾಂಶ ಅಂಕಪಟ್ಟಿ ಡೌನ್‌ಲೌಡ್ ಮಾಡಬಹುದು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation 2nd PUC Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಪ್ರಥಮ! ಫಲಿತಾಂಶ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ 2 ದಿನಾಂಕ ನಿಗದಿ, ವೇಳಾಪಟ್ಟಿ PDF ಇಲ್ಲಿದೆ