ಬೆಂಗಳೂರು, ಏಪ್ರಿಲ್ 10: ರಾಜ್ಯದ ಜನರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆಯುಷ್ಮಾನ್ ಭಾರತ್, ಪ್ರಧಾನಿ ಮಂತ್ರಿ ಜನ್ ಆರೋಗ್ಯ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಹಲ್ಲಿನ ರೂಟ್ ಕೆನಾಲ್ ಸೇರ್ಪಡೆಗೆ ಅನುಮೋದನೆ ನೀಡಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಸಾರ್ವಜನಿಕ ಆರೋಗ್ಯ ಸೇವೆಯನ್ನು ಹಂತ ಹಂತವಾಗಿ ಬಲಪಡಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜಯಾಗಿದೆ ಎಂದರು. Strengthening public healthcare, one gap at a time.The Government of Karnataka has approved the inclusion of Root Canal Treatment under the AB PMJAY–CM’s Arogya Karnataka scheme, extending access to essential dental care for PHH and NPHH beneficiaries.This move brings both… pic.twitter.com/ut2xuJCBWu— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 9, 2026 ಈ ಯೋಜನೆಯಡಿ ಮುಂದಿನ (anterior) ಮತ್ತು ಹಿಂಭಾಗದ (posterior) ಹಲ್ಲುಗಳ ರೂಟ್ ಕ್ಯಾನಲ್ ಚಿಕಿತ್ಸೆಗೆ ಪಡೆಯಬಹುದಾಗಿದೆ. ರಾಜ್ಯದಾದ್ಯಂತ ಸಮಯೋಚಿತ, ಕೈಗೆಟುಕುವ ಹಾಗೂ ಗುಣಮಟ್ಟದ ದಂತ ಆರೋಗ್ಯ ಸೇವೆಗಳನ್ನು ಒದಗಿಸಲು ಇದು ನೆರವಾಗಲಿದೆ ಎಂದರು. CGHS ಟಿಯರ್-3 ಮಾನದಂಡದ ಪ್ಯಾಕೇಜ್ ದರಗಳು ಮತ್ತು ಸ್ಪಷ್ಟ ಕ್ಲಿನಿಕಲ್ ವರ್ಗೀಕರಣದೊಂದಿಗೆ, ಚಿಕಿತ್ಸೆಗಳಲ್ಲಿ ಏಕತೆಯನ್ನು ತರಲು ಇದು ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಫಲಿತಾಂಶ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ 2 ದಿನಾಂಕ ನಿಗದಿ, ವೇಳಾಪಟ್ಟಿ PDF ಇಲ್ಲಿದೆ ಕರ್ನಾಟಕ ಸೇರಿದಂತೆ ದೇಶದಲ್ಲಿ 16,087 ಕೋಟಿ ರೂ. ಕಬ್ಬು ಪಾವತಿ ಬಾಕಿ