Kannada Writer Amaresh Nugadoni Wins Sahitya Akademi Award for Short Story Dada Serisu Tandeದಡ ಸೇರಿಸುವ ತಂದೆ

ಕನ್ನಡದ ಖ್ಯಾತ ಸಾಹಿತಿ ಅಮರೇಶ್‌ ನುಗಡೋಣಿ ಅವರ ʼದಡ ಸೇರಿಸು ತಂದೆʼ ಸಣ್ಣಕತೆಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ 2025 ಘೋಷಣೆಯಾಗಿದೆ. ಮರ್ಯಾದೆಗೇಡು ಹತ್ಯೆ, ಗುಂಪು ಹಿಂಸಾಚಾರ ಮೊದಲಾದ ಜಲ್ವಂತ ಸಮಸ್ಯೆಗಳ ಅನಾವರಣ ಈ ಸಂಕಲನದ ಕತೆಗಳಲ್ಲಿ ಇದೆ. ಇದು ಅಮರೇಶ್‌ ನುಗಡೋಣಿ ಅವರ 6ನೇ ಸಣ್ಣಕತೆಗಳ ಸಂಕಲನವಾಗಿದ್ದು ಇದರಲ್ಲಿ ಒಟ್ಟು 8 ಸಣ್ಣಕತೆಗಳಿವೆ.

ಪ್ರಶಸ್ತಿಯು ತಾಮ್ರದ ಫಲಕ, ಶಾಲು ಮತ್ತು ಪ್ರಶಸ್ತಿ ಹಣವಾಗಿ ತಲಾ 1 ಲಕ್ಷ ರೂ. ಮೊತ್ತವನ್ನು ಹೊಂದಿದೆ. ಮಾರ್ಚ್ 31, 2026 ರಂದು ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಾಹಿತ್ಯ ಅಕಾಡೆಮಿಯು 24 ಭಾರತೀಯ ಭಾಷೆಗಳಲ್ಲಿನ ವಾರ್ಷಿಕ ಪ್ರಶಸ್ತಿಗಳನ್ನು ನೀಡಿದೆ. ಅವುಗಳಲ್ಲಿ 8 ಕವನ ಸಂಕಲನಗಳು, 4 ಕಾದಂಬರಿಗಳು, 6 ಸಣ್ಣಕಥೆ ಸಂಕಲನಗಳು, 2 ಪ್ರಬಂಧ ಸಂಕಲನಗಳು, 1 ಸಾಹಿತ್ಯ ವಿಮರ್ಶೆ, 1 ಆತ್ಮಕಥೆ ಮತ್ತು 2 ನೆನಪಿನ ಬುತ್ತಿ ಕೃತಿಗಳು 2025ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿವೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಟ್ಟಿ

ಸಾಹಿತ್ಯ ಅಕಾಡೆಮಿಯು ಸ್ಥಾಪಿತ ಪ್ರಕ್ರಿಯೆಯ ಮೂಲಕ ತಾನು ಗುರುತಿಸಿರುವ 24 ಭಾಷೆಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತದೆ. 2025ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಪ್ರಕ್ರಿಯೆಯು 30 ಜನವರಿ 2025 ರಂದು ಮುಕ್ತ ಜಾಹೀರಾತನ್ನು ನೀಡುವುದರೊಂದಿಗೆ ಪ್ರಾರಂಭವಾಗಿತ್ತು. 24 ಭಾರತೀಯ ಭಾಷೆಗಳ ಗಣ್ಯ ತೀರ್ಪುಗಾರ ಮಂಡಳಿಯ ಸದಸ್ಯರು ಶಿಫಾರಸು ಮಾಡಿದ ಪ್ರಶಸ್ತಿಗಳನ್ನು ಸಾಹಿತ್ಯ ಅಕಾಡೆಮಿಯ ಸಕ್ಷಮ ಪ್ರಾಧಿಕಾರವು ಅನುಮೋದಿಸಿದೆ. ಡಾ ಜಯಲಲಿತಾ, ಸಹನಾ ಕಾಂತಬೈಲು, ಅರುಣ್ ಕಮಲ್ ಅವರು ಕನ್ನಡ ತೀರ್ಪುಗಾರ ಮಂಡಳಿಯ ಸದಸ್ಯರಾಗಿದ್ದರು.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *