ಟಿ20 ವರ್ಲ್ಡ್ ಕಪ್‌ನ (T20 World Cup) ಸೂಪರ್ 8 ಸುತ್ತಿನಲ್ಲಿ ಜಿಂಬಾಬ್ವೆ (Zimbabwe) ತಂಡವನ್ನು 72 ರನ್‌ಗಳಿಂದ ಸೋಲಿಸಿದ ಭಾರತ (India) ತಂಡ ಸೆಮಿಫೈನಲ್ ರೇಸ್‌ನಲ್ಲಿ ಜೀವಂತವಾಗಿದೆ. ಈ ಪಂದ್ಯದೊಂದಿಗೆ ಭಾರತವು ಜಿಂಬಾಬ್ವೆ ತಂಡವನ್ನು ಟೂರ್ನಿಯಿಂದ ಹೊರ ಕಳುಹಿಸಿದೆ. ಅತ್ತ, ದಕ್ಷಿಣ ಆಫ್ರಿಕಾ ಸೆಮಿಫೈನಲ್ ಹಂತ ಪ್ರವೇಶಿಸಿದೆ. ಬುಧವಾರ (ಫೆಬ್ರವರಿ 26) ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ವಿರುದ್ಧ 72 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮೊದಲ ಪಂದ್ಯದ ಸೋಲಿನ ನಂತರ, ಭಾರತವು ಬಲವಾಗಿ ಪುಟಿದೆದ್ದು, ಅಗತ್ಯವಾದ ಗೆಲುವು ದಾಖಲಿಸಿ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ . 72ರನ್ ಅಂತರದ ಗೆಲುವು ಭಾರತದ ನೆಟ್ ರೇಟ್ ಅನ್ನು ಬಲಪಡಿಸಿದೆ. ಇದರೊಂದಿಗೆ ಜಿಂಬಾಬ್ವೆ ತಂಡ ರೇಸ್ ನಿಂದ ಬಹುತೇಕ ಹೊರಗುಳಿದಿದೆ ಭಾರತ ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಸಾಧ್ಯತೆಗಳು ? ಮುಂದಿನ ಹಾದಿ ಸರಳ ಆದರೆ ಸವಾಲಿನದ್ದಾಗಿದೆ: ನಾಕೌಟ್ ಹಂತವನ್ನು ಆರಾಮವಾಗಿ ತಲುಪಲು ಭಾರತವು ಸೂಪರ್ 8ರ ತನ್ನ ಅಂತಿಮ ಪಂದ್ಯವನ್ನು ಗೆಲ್ಲಬೇಕು. ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧ ಮಾರ್ಚ್ 1 ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆಯಲಿದ್ದು ಭಾರತ ಹಾಗು ವೆಸ್ಟ್ ಇಂಡೀಸ್ ಗೆ ಮಾಡು ಇಲ್ಲವೇ ಮಾಡಿ ಪಂದ್ಯವಾಗಿದೆ. ಈಗಾಗಾಲೆ ನೆಟ್ ರನ್ ರೇಟ್ ಅಲ್ಲಿ (1.791) ಭಾರತ ತಂಡಕ್ಕಿಂತ (-0.1) ಮುಂದೆ ಇರುವ ವೆಸ್ಟ್ ಇಂಡೀಸ್ ಭಾರತಕ್ಕೆ ಮಾರ್ಚ್ 1 ರಂದು ನಡೆಯುವ ರೋಚಕ ಪಂದ್ಯದಲ್ಲಿ ಕಠಿಣ ಸವಾಲಾಗುವುದರಲ್ಲಿ ಸಂದೇಹವೇ ಇಲ್ಲ. ಎರಡು ತಂಡಗಳು ಆಡಿದ ಎರೆಡೆರಡು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಜಯಗಳಿಸಿದ್ದು, ವೆಸ್ಟ್ ಇಂಡೀಸ್ ಮತ್ತು ಭಾರತ್ ತಂಡಕ್ಕೆ ಆ ಗೆಲುವು ಜಿಂಬಾಬ್ವೆ ತಂಡದ ವಿರುದ್ಧವೇ ಬಂದಿರುವುದು. ಸೂಪರ್ 8 ಹಂತವು ಈಗ ನಾಟಕೀಯ ಮುಕ್ತಾಯದತ್ತ ಸಾಗುತ್ತಿದೆ, ಕೊನೆಯ ನಾಲ್ಕು ಸ್ಥಾನಗಳಿಗಾಗಿ ಇನ್ನೂ ಅನೇಕ ತಂಡಗಳು ಪೈಪೋಟಿಯಲ್ಲಿವೆ. ಈಗಾಗಲೇ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸಿ ಸೆಮಿಫೈನಲ್ ಹಂತ ತಲುಪಿರುವ ಸೌತ್ ಆಫ್ರಿಕಾ ತಂಡವನ್ನು ಸೇರಲು ಮಾರ್ಚ್ 1 ರಂದು ನಡೆಯುವ ಪಂದ್ಯ ಎರಡು ತಂಡಗಳಿಗೆ ಬಹುಮುಖ್ಯವಾಗಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation T20 World Cup: ಟೂರ್ನಿಯಲ್ಲಿ ಉಳಿಯಲು ಭಾರತ ತಂಡದಲ್ಲಿ ಈ ಬದಲಾವಣೆಗಳು ಅತ್ಯಗತ್ಯ T20 World Cup: ಭಾರತಕ್ಕಿಂದು ಮಾಡು ಇಲ್ಲವೆ ಮಡಿ ಪಂದ್ಯ