ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದಲ್ಲಿ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಗಳ ಹೀನಾಯ ಸೋಲು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಡೇವಿಡ್ ಮಿಲ್ಲರ್ ಉತ್ತಮ ಪ್ರದರ್ಶನದಿಂದ (65 ರನ್‌ಗಳು) 20 ಓವರ್‌ಗಳಲ್ಲಿ 187/7 ರನ್‌ಗಳು ಮಾಡಿಕೊಂಡಿತು. ಭಾರತೀಯ ಬೌಲರ್‌ಗಳು ಕೆಲವೊಂದು ಯಶಸ್ವಿ ವಿಕೆಟ್‌ಗಳನ್ನು ಪಡೆದರೂ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್ ಗಳನ್ನೂ ಕಟ್ಟಿ ಹಾಕಲು ವಿಫಲರಾದರು. ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನದ ಬಳಿಕ ಭಾರತ ತಂಡ ಗುರಿ ಬೆನ್ನಟ್ಟುವಲ್ಲಿ ಆರಂಭದಿಂದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಮಧ್ಯಕ್ರಮದಲ್ಲಿ ಸ್ವಲ್ಪ ಹೊತ್ತು ಆಕ್ರಮಣಕಾರಿ ಆಟಾಡಿದರೂ ಸಹ ನಿರಂತರವಾಗಿ ವಿಕೆಟ್‌ಗಳು ಕಳೆದುಕೊಂಡ ಕಾರಣ ಪಂದ್ಯ ಭಾರತ ಕೈಯಿಂದ ಜಾರಿ ಹೋಗಿತು. ಕೊನೆಯ ಓವರ್‌ಗಳಲ್ಲಿ ಭಾರತ ಹೋರಾಟ ಮಾಡಿದರೂ, ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಗುರಿ ಬೆನ್ನಟ್ಟಿದ ಭಾರತ ತಂಡ 20 ಓವರ್‌ಗಳಲ್ಲಿ ಕೇವಲ 111 ರನ್‌ಗಳಿಗೆ ಆಲೌಟ್ ಆಗಿ, 76 ರನ್‌ಗಳ ಭಾರೀ ಸೋಲು ಅನುಭವಿಸಿತು. ಭಾರತ ಸೋಲಲು ಪ್ರಮುಖ ಕಾರಣಗಳು ಭಾರತದ ಬೌಲರ್‌ಗಳು ಲೈನ್ ಮತ್ತು ಲೆಂಗ್ತ್ ಮೇಲೆ ನಿಯಂತ್ರಣ ಕಳೆದುಕೊಂಡು, ಪವರ್‌ಪ್ಲೇ ಮತ್ತು ಮಿಡ್ಲ್ ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಾಗಿ ರನ್‌ಗಳನ್ನು ಗಳಿಸಲು ಅವಕಾಶ ನೀಡಿದರು. ಮತ್ತು ಕಳಪೆ ಫೀಲ್ಡಿಂಗ್ ನಿಂದಾಗಿ ಅತಿಯಾಗಿ ಬೌಂಡ್ರಿಸ್ ಬಿಟ್ಟುಕೊಟ್ಟರು. ಇತ್ತ ದಕ್ಷಿಣ ಆಫ್ರಿಕಾ ಬೌಲರ್‌ಗಳ ನಿಯಂತ್ರಿತ ದಾಳಿಯಿಂದ ಭಾರತ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇತ್ತ ರನ್ ರೇಟ್ ಒತ್ತಡ ಹೆಚ್ಚಾಗುತ್ತಿದ್ದಂತೆ ಮಧ್ಯಕ್ರಮದ ಬ್ಯಾಟ್ಸ್‌ಮನ್‌ಗಳು ತೀವ್ರ ಆಕ್ರಮಣಶೀಲ ಆಟಕ್ಕೆ ಹೋಗಿ ಬೇಗನೇ ವಿಕೆಟ್‌ಗಳನ್ನು ಕಳೆದುಕೊಂಡರು. ಈ ಸೋಲು ಭಾರತ ತಂಡದ ಸೆಮಿಫೈನಲ್ ನಿರೀಕ್ಷೆಗಳಿಗೆ ದೊಡ್ಡ ಹಿನ್ನಡೆಯಾಗಿದೆ. ಈಗ ನೆಟ್ ರನ್ ರೇಟ್ ಮತ್ತು ಮುಂದಿನ ಪಂದ್ಯಗಳ ಫಲಿತಾಂಶಗಳು ಮಹತ್ವ ಪಡೆದುಕೊಳ್ಳಲಿವೆ. ದಕ್ಷಿಣ ಆಫ್ರಿಕಾ ತಂಡದ ಪ್ರಭಾವಶೀಲ ಬ್ಯಾಟಿಂಗ್ ಮತ್ತು ಬೌಲಿಂಗ್ ಭಾರತದ ಆಟಗಾರರನ್ನು ಒತ್ತಡಕ್ಕೆ ತಳ್ಳಿತು. ಈ ಸೋಲು ಭಾರತದ ಸೆಮಿಫೈನಲ್ ಹಂತದ ಪ್ರವೇಶಕ್ಕೆ ತೀವ್ರ ಸಂಕಷ್ಟ ಉಂಟುಮಾಡಿದೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ಅಗತ್ಯವಾಗಿದೆ. ಭಾರತೀಯ ಅಭಿಮಾನಿಗಳಿಗೆ ಇದು ನಿರಾಸೆಯ ಸಂಗತಿ. ಮುಂದಿನ ಪಂದ್ಯಗಳಲ್ಲಿ ತಂತ್ರ ಹಾಗೂ ಆಟಗಾರರ ಆಯ್ಕೆಯಲ್ಲಿ ಬದಲಾವಣೆಗಳ ಅಗತ್ಯವಿದೆ. Post navigation T20 World Cup: Ind vs SA ಪ್ಲೇಯಿಂಗ್ 11 ಇಲ್ಲಿದೆ, ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಆಫ್ರಿಕಾ ಹುಬ್ಬಳ್ಳಿಯ KSCA ಮೈದಾನದ ಪೆವಿಲಿಯನ್ಗೆ ಕನ್ನಡಿಗ ಸುನೀಲ್ ಜೋಶಿ ಹೆಸರು ನಾಮಕರಣಕ್ಕೆ ನಿರ್ಧಾರ