ICC Men's T20 World Cup 2026: India vs South Africa match timing and date and Playing 11ಭಾರತ vs ದಕ್ಷಿಣ ಆಫ್ರಿಕಾ

ICC Men’s T20 World Cup 2026ನಲ್ಲಿ ಭಾನುವಾರ (ಫೆ.22) ದಂದು ಭಾರತ (India) ಮತ್ತು ದಕ್ಷಿಣ ಆಫ್ರಿಕಾ (South Africa) ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯವು ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುವುದರಿಂದ ಟೀಂ ಇಂಡಿಯಾಗೆ ಹೋಮ್ ಪಿಚ್‌ ಅಡ್ವಾಂಟೇಜ್ ಇದ್ದೇ ಇರುತ್ತದೆ. ಭಾರತಕ್ಕೆ ಸುಮಾರು ಶೇ 60 ರಿಂದ 65 ರಷ್ಟು ಗೆಲುವಿನ ಸಾಧ್ಯತೆ ಇದ್ದರೇ, ದಕ್ಷಿಣ ಆಫ್ರಿಕಾಕ್ಕೆ ಕೇವಲ ಶೇ 35 ರಿಂದ 40 ರಷ್ಟು ಮಾತ್ರ ಗೆಲುವಿನ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಭಾರತದ ಶಕ್ತಿ ಎಂದರೇ ಸ್ಫೋಟಕ ಬ್ಯಾಟಿಂಗ್ ಮತ್ತು ಡೆತ್ ಓವರ್ ಬೌಲಿಂಗ್‌. ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ವೇಗದ ಆರಂಭ ನೀಡುವ ಸಾಧ್ಯತೆ ಇದೆ. ಮಿಡ್ಲ್ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್  ಪ್ರಮುಖ ಪಾತ್ರ ವಹಿಸಬಹುದು. ಡೆತ್ ಓವರ್‌ಗಳಲ್ಲಿ ಜಸ್ಪ್ರೀತ್ ಭುಮ್ರಾ  ಅವರ ಬೌಲಿಂಗ್ ದಾಳಿ ಗೆಲುವಿನ ದಡ ಸೇರಿಸಬಹುದು.

ಆದರೆ, ದಕ್ಷಿಣ ಆಫ್ರಿಕಾ ತಂಡವೂ ಕೂಡ ಅಷ್ಟೇ ಅಪಾಯಕಾರಿಯಾಗಿ ಆಡಬಲ್ಲ ತಂಡವಾಗಿದೆ. ನಾಯಕ ಐಡೆಂ ಮಾರ್ಕ್ರಮ್ ಹಾಗೂ ಕ್ವಿಂಟನ್ ಡಿ ಕೊಕ್ ವೇಗದ ಆರಂಭ ನೀಡಬಲ್ಲರು. ಜೊತೆಗೆ ವೇಗದ ಬೌಲರ್ ಕಗಿಸೊ ರಬಾಡಾ ಭಾರತೀಯ ಬ್ಯಾಟರ್‌ಗಳನ್ನು ಕಾಡದೆ ಇರರು.  

ದಕ್ಷಿಣ ಆಫ್ರಿಕಾಗೆ 2024ರ ಫೈನಲ್ ಇನ್ನೂ ನೋವಿನ ನೆನಪಾಗಿಯೇ ಉಳಿದಿದೆ. ಜಯದ ಅಂಚಿನಲ್ಲಿದ್ದಾಗ ಅವರ ಕೈಯಿಂದ ಗೆಲುವು ಜಾರಿ ಹೋಗಿ, ಇತಿಹಾಸ ನಿರ್ಮಿಸಬಹುದಾದ ಕ್ಷಣ ಸೋಲಾಗಿ ಮಾರ್ಪಟ್ಟಿತ್ತು. ಟಾಸ್ ಫಲಿತಾಂಶ, ಪವರ್‌ಪ್ಲೇ ಪ್ರದರ್ಶನ ಮತ್ತು ಮಧ್ಯ ಓವರ್‌ಗಳ ನಿಯಂತ್ರಣ ಪಂದ್ಯ ಫಲಿತಾಂಶದ ಮೇಲೆ ಭಾರೀ ಪ್ರಭಾವ ಬೀರುತ್ತವೆ.  

ಭಾರತ ತಂಡದ ಪ್ಲೇಯಿಂಗ್ 11 (ಸಂಭಾವ್ಯ ತಂಡ)

ಇಶನ್ ಕಿಶನ್ (ವಿಕೆಟ್ ಕೀಪರ್)

ಅಭಿಷೇಕ್ ಶರ್ಮಾ

ತಿಲಕ್ ವರ್ಮ

ಸೂರ್ಯಕುಮಾರ್ ಯಾದವ್ (ನಾಯಕ)

ಶಿವಂ ದುಬೆ

ಹಾರ್ದಿಕ್ ಪಾಂಡ್ಯ

ರಿಂಕು ಸಿಂಗ್

ಅಕ್ಷರ್ ಪಟೇಲ್

ಜಸ್ಪ್ರೀತ್ ಬುಮ್ರಾ

ವರುಣ್ ಚಕ್ರವರ್ತಿ

ಅರ್ಷದೀಪ್ ಸಿಂಗ್

ಪಿಚ್ ಸ್ಪಿನ್‌ಗೆ ಸಹಕಾರಿಯಾಗಿದ್ದರೆ ಹೆಚ್ಚುವರಿ ಸ್ಪಿನ್ನರ್ ಆಡುವ ಸಾಧ್ಯತೆ ಇದೆ. ವೇಗದ ಪಿಚ್ ಆಗಿದ್ದರೆ ಹೆಚ್ಚುವರಿ ಪೇಸರ್‌ಗೆ ಅವಕಾಶ ಸಿಗಬಹುದು.

ಸೌಥ ಆಫ್ರಿಕಾ ಪ್ಲೇಯಿಂಗ್ 11 (ಸಂಭಾವ್ಯ ತಂಡ)

ಐಡೆನ್ ಮಾರ್ಕ್ರಾಮ್ (ನಾಯಕ)

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್)

ರಯಾನ್ ರಿಕೆಲ್ಟನ್

ಡೆವಾಲ್ಡ್ ಬ್ರೆವಿಸ್

ಡೇವಿಡ್ ಮಿಲ್ಲರ್

ಟ್ರಿಸ್ಟಾನ್ ಸ್ಟಬ್ಸ್

ಮಾರ್ಕೊ ಜಾನ್ಸೆನ್

ಕಾರ್ಬಿನ್ ಬಾಷ್

ಕೇಶವ ಮಹಾರಾಜ್

ಕಗಿಸೊ ರಬಾಡ

ಲುಂಗಿ ಎನ್ಗಿಡಿ

ವೇಗದ, ಬೌನ್ಸಿ ಪಿಚ್ ಇದ್ದರೆ ದಕ್ಷಿಣ ಆಫ್ರಿಕಾ ತಂಡಕ್ಕೆ ಅಡ್ವಾಂಟೇಜ್ ಆಗಲಿದ್ದು  ಹೆಚ್ಚುವರಿ ಪೇಸ್ ಆಯ್ಕೆ ಮಾಡಬಹುದು.

ಒಟ್ಟಾರೆಯಾಗಿ ಭಾರತದ ತಂಡದಲ್ಲಿ ಬುಮ್ರಾ, ಸೂರ್ಯಕುಮಾರ್, ಹಾರ್ದಿಕ್ ಬಹುತೇಕ ಖಚಿತ ಆಯ್ಕೆಗಳು. ದಕ್ಷಿಣ ಆಫ್ರಿಕಾದಲ್ಲಿ ರಬಾಡಾ, ಮಾರ್ಕ್ರಮ್, ಡಿ ಕಾಕ್ ಪ್ರಮುಖ ಖಚಿತ ಆಟಗಾರರು. ಅಂತಿಮ ಪ್ಲೇಯಿಂಗ್ 11 ಅನ್ನು ಟಾಸ್ ಮತ್ತು ಪಿಚ್ ವರದಿ ನಂತರ ಮಾತ್ರ ದೃಢೀಕರಿಸಲಾಗುತ್ತದೆ.

ಕೊನೆ ಹಂತದಲ್ಲಿ ಪ್ಲೇಯಿಂಗ್‌ 11 ಬದಲು?

ಬುಮ್ರಾ, ಸೂರ್ಯಕುಮಾರ್, ಹಾರ್ದಿಕ್ ಹೊರತುಪಡಿಸಿ ಪ್ಲೇಯಿಂಗ್‌ 11ನಲ್ಲಿರುವ ಉಳಿದ ಆಟಗಾರರು ಕೊನೆ ಹಂತದಲ್ಲಿ ಬದಲಾಗುವ ಸಾಧ್ಯತೆಗಳಿವೆ. ಇನ್ನು ಇದೇರೀತಿಯಾಗಿ ದಕ್ಷಿಣ ಆಫ್ರಿಕಾ ಟೀಂನಲ್ಲೂ ಕೂಡ ರಬಾಡಾ, ಮಾಕ್ರ್‌ಮ್, ಡಿ ಕಾಕ್ ಹೊರತುಪಡಿಸಿ ಪ್ಲೇಯಿಂಗ್‌ 11ನಲ್ಲಿರುವ ಉಳಿದ ಆಟಗಾರರು ಬದಲಾಗುವ ಸಾಂಭವ್ಯ ಇದೆ. ಈ ಪ್ಲೇಯಿಂಗ್‌ 11 ಪಿಚ್ ವರದಿ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ಪಿಚ್‌ ಸ್ಥಿತಿ:

ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್‌ಗೆ ಅನುಕೂಲಕರವಾಗಿರಲಿದೆ. ಈ ಮೈದಾನದಲ್ಲಿ ಹೆಚ್ಚಾಗಿ ಹೈ-ಸ್ಕೋರಿಂಗ್ ಪಂದ್ಯಗಳು ನಡೆದಿವೆ. 180+, 190+ ಮೊತ್ತಗಳು ಸಾಮಾನ್ಯವಾಗಿವೆ. ನ್ಯೂ ಬಾಲ್ ಉಪಯೋಗಿಸುವುದರಿಂದ ಆರಂಭದಲ್ಲಿ ವೇಗದ ಬೌಲರ್ಗಗಳಿಗೆ ಸ್ವಲ್ಪ ಸಹಾಯ ಸಿಗಬಹುದು. ಆದರೆ ಪಂದ್ಯ ಮುಂದುವರಿದಂತೆ ಬ್ಯಾಟಿಂಗ್ ಸುಲಭವಾಗುತ್ತದೆ.

ಡ್ಯೂ (ಒದ್ದೆ) ಪ್ರಭಾವ:

ಎರಡನೇ ಇನ್ನಿಂಗ್ಸ್‌ನಲ್ಲಿ ಡ್ಯೂ ಪ್ರಭಾವ ಕಾಣಿಸಬಹುದು. ಇದರಿಂದ ಬೌಲರ್‌ಗಳಿಗೆ, ವಿಶೇಷವಾಗಿ ಸ್ಪಿನ್ನರ್‌ಳಿಗೆ, ಚೆಂಡು ಹಿಡಿತದಲ್ಲಿ ಕಷ್ಟವಾಗಬಹುದು. ಆದ್ದರಿಂದ ಟಾಸ್ ಗೆದ್ದ ನಾಯಕರು ಮೊದಲು ಬೌಲಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.

ನಿರೀಕ್ಷಿತ ಪಂದ್ಯ ಶೈಲಿ

ಮೊದಲ ಇನ್ನಿಂಗ್ಸ್‌ನಲ್ಲಿ 190-210 ಸ್ಕೋರ್ ಸಾಧ್ಯತೆ. ಉತ್ತಮ ಆರಂಭ ಸಿಕ್ಕರೆ 210+ ಗುರಿ ಕೂಡ ಸಾಧ್ಯತೆ. ಎರಡನೇ ಇನ್ನಿಂಗ್ಸ್‌ನಲ್ಲಿ ಡ್ಯೂ ಕಾರಣದಿಂದ ಚೇಸಿಂಗ್ ತಂಡಕ್ಕೆ ಸ್ವಲ್ಪ ಲಾಭವಾಗಬಹುದು.

ಹವಾಮಾನ ವರದಿ:

ಮೋಡವಿಲ್ಲದ ವಾತಾವರಣ ಇರುವದರಿಂದ ಮಳೆಯ ಸಾಧ್ಯತೆ ಕಡಿಮೆ. ವರದಿಯ ಪ್ರಕಾರ ಯಾವುದೇ ಅಡಚಣೆ ಇಲ್ಲದೆ ಸಂಪೂರ್ಣ ಪಂದ್ಯ ನಡೆಯುವ ನಿರೀಕ್ಷೆ ಇದೆ.

ಸಾರಾಂಶ: ಬ್ಯಾಟಿಂಗ್‌ಗೆ ಅನುಕೂಲಕರ ಪಿಚ್, ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸ್ವಲ್ಪ ಸಹಾಯ, ನಂತರ ಬ್ಯಾಟ್ಸಮನ್ ಗಳಿಗೆ ಅನುಕೂಲವಾಗಲಿದೆ, ಟಾಸ್ ಕೂಡ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *