ಹುಬ್ಬಳ್ಳಿ, ಫೆಬ್ರವರಿ 26: ಶೈಕ್ಷಣಿಕ ವರ್ಷದ ಅಂಗವಾಗಿ ಕೆ.ಎಲ್.ಇ. (KLE) ಸೊಸೈಟಿಯ ಶ್ರೀ ಕಾಡಸಿದ್ದೇಶ್ವರ ಕಲಾ ಕಾಲೇಜು ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ (SK Arts and HSK Science College) ಎನ್‌ಸಿಸಿ (NCC) ಕೆಡೆಟ್‌ಳಿಗೆ ಭವ್ಯ ಸನ್ಮಾನ ಕಾರ್ಯಕ್ರಮವನ್ನು ಮಂಗಳವಾರದಂದು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಗಣರಾಜ್ಯೋತ್ಸವದಂದು ನಡೆದ ಆರ್‌ಡಿಸಿ ಪರೇಡ ಕ್ಯಾಂಪನಲ್ಲಿ 1/27 ಕೆಎಆರ್ ಬಿಎಸ್ ಎನ್‌ಸಿಸಿ ಹುಬ್ಬಳ್ಳಿ ವತಿಯಿಂದ 2025-26 ನೇ ನಮ್ಮ ಸಂಸ್ಥೆಯನ್ನು ಪ್ರತಿನಿಧಿಸಿದ ಹೆಮ್ಮೆ ತಂಡ ಕೆಡೆಟ್ಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನಮ್ಮ ಕಾಲೇಜಿನ ಎನ್‌ಸಿಸಿ ಕೆಡೆಟ್ಗಳಾದ ಎಸ್.ಯು. ಒ ಪೂಜಾ ಬಂಡಿವಾಡ ಸಿ.ಬಿ ಹಾಗೂ ಎಸ್.ಯು. ಒ ದರ್ಶನ್ ಕುಮಾರ ಗಮನಾರ್ಹ ಸಾಧನೆಗಾಗಿ ಪ್ರಶಂಸೆಗೆ ಪಾತ್ರರಾದರು. ಎನ್‌ಸಿಸಿಯನ್ನು 1948ರ ಜುಲೈ 16 ರಂದು ಪಂಡಿತ್ ಎಚ್.ಎನ್. ಕುಂಜ್ರು ಅವರ ಶಿಫಾರಸುಗಳ ಮೇರೆಗೆ ಸ್ಥಾಪಿಸಲಾಯಿತು. ದೇಶದಲ್ಲಿ ಶಿಸ್ತಿನ ಯುವ ಪಡೆಯನ್ನು ರೂಪಿಸುವ ಉದ್ದೇಶದಿಂದ ಪಂಡಿತ್ ಜವಾಹರಲಾಲ್ ನೆಹರು ಈ ಯೋಜನೆಯನ್ನು ಬೆಂಬಲಿಸಿದ್ದರು. ವಿಶ್ವವಿದ್ಯಾಲಯ ಕಾರ್ಡ್ಸ್ ಪರಿಕಲ್ಪನೆಯಿಂದ ಅಭಿವೃದ್ಧಿ ಹೊಂದಿದ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಏಕತೆ, ಶಿಸ್ತು ಮತ್ತು ದೇಶ ಸೇವೆಯ ಮನೋಭಾವ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 1951ರಲ್ಲಿ ಆರಂಭವಾದ ಗಣರಾಜ್ಯೋತ್ಸವ ಪೆರೆಡ್‌ನಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ಅತ್ಯಂತ ಪ್ರತಿಷ್ಠಿತ ಅವಕಾಶವಾಗಿದೆ. ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯುತ್ತದೆ. ಕೆಡೆಟ್‌ಗಳು ಮೊದಲು ಎಟಿಸಿ (ವಾರ್ಷಿಕ ತರಬೇತಿ ಶಿಬಿರ) ಹಾಗೂ ಐಜಿಸಿ ಇಂಟರ್‌ಗೋಪ್ ಕ್ಯಾಂಪಿಟೇಷನ್) ಗಳಲ್ಲಿ ಭಾಗವಹಿಸಿ ನಂತರ ಗುಂಪು ಹಾಗೂ ಕರ್ನಾಟಕ ಹಾಗೂ ವಿಧಿಶಾಲಯದ ಮಟ್ಟದ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಎದುರಿಸಬೇಕು ನಂತರವಷ್ಟೇ ಅವರು ದೆಹಲಿಯಲ್ಲಿ ನಡೆಯುವ ಆರ್‌ಡಿಸಿ ಪರೇಡನಲ್ಲಿ ಭಾಗವಹಿಸಬಹುದು ಎಂದು ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಸಿ.ಕೆ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳಗಾವಿ ಗುಂಪಿನ ಅಡಿಯಲ್ಲಿ ಒಟ್ಟು ಒಂಬತ್ತು ಬೆಟಾಲಿಯನ್‌ಗಳು ಸೇರಿದಂತೆ ಆರು ಗುಂಪುಗಳ ಕೆಡೆಟ್‌ಗಳು ತರಬೇತಿಗೆ ಒಳಗಾಗಗಿದ್ದರು. ಆಯ್ಕೆಯು ಡ್ರಿಲ್ ಕೌಶಲ್ಯ, ಶಿಸ್ತು, ವ್ಯಕ್ತಿತ್ವ ಮತ್ತು ಒಟ್ಟಾರೆ ನಡವಳಿಕೆ ಆಧಾರಿತವಾಗಿರುತ್ತದೆ. ಆಯ್ಕೆಯಾದ ಅತ್ಯುತ್ತಮ ಕಡೆಟ್ಗಳು ಪ್ರತಿಷ್ಠಿತ ಕರ್ತವ್ಯ ಪಥ ಮೆರವಣಿಗೆ ಹಾಗೂ ಪ್ರಧಾನ ಮಂತ್ರಿಗಳ ರ್ಯಾಲಿ ಹಾಗೂ ಕರ್ತವ್ಯಪತ್ ಪರೇಡನಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸುಮಂಗಲಾ ಬಿ. ಪಾಟೀಲ್ ವಹಿಸಿದ್ದರು. ಈ ಸನ್ಮಾನ ಕಾರ್ಯಕ್ರಮವು ಇಡೀ ಸಂಸ್ಥೆಗೆ ಹೆಮ್ಮೆಯ ಹಾಗೂ ಸ್ಮರಣೀಯ ಕ್ಷಣವಾಗಿದೆ ಹಾಗೂ ವಿದ್ಯಾರ್ಥಿಗಳನ್ನು ಎನ್‌ಸಿಸಿಗೆ ಸೇರುವಂತೆ ಪ್ರೋತ್ಸಾಹಿಸಿ, ಏಕತೆ, ಶಿಸ್ತು ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳುವಂತೆ ಹೇಳಿದರು. ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಸಿ.ಕೆ. ಪಾಟೀಲ್ ಅವರು ಕೆಡೆಟ್ಗಳಿಗೆ ಮಾರ್ಗದರ್ಶನ ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಪ್ರಮುಖ ಪಾತ್ರ ವಹಿಸಿದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಗುರುವಂದನಾ ಕಾರ್ಯಕ್ರಮ: 30 ವರ್ಷಗಳ ಅನುಮಪ ಸೇವೆ, ಹಳೇ ವಿದ್ಯಾರ್ಥಿಗಳಿಂದ ಗುರುಗಳಿಗೆ ನಮನ Bengaluru Karaga 2026: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗದಿ