ಬೆಂಗಳೂರು ಕರಗ

ಬೆಂಗಳೂರು, ಫೆಬ್ರವರಿ 27: ವಿಶ್ವವಿಖ್ಯಾತ, ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವಕ್ಕೆ (Bengaluru Karaga Festival) ದಿನಾಂಕ ನಿಗದಿಯಾಗಿದೆ. ಮಾರ್ಚ್‌ 30ರಿಂದ ಏಪ್ರಿಲ್‌ 1ರವರೆಗೆ ಬೆಂಗಳೂರು ಕರಗ ಉತ್ಸವ ನಡೆಯಲಿದೆ. ಅರ್ಚಕ ಎ.ಜ್ಞಾನೇಂದ್ರಸ್ವಾಮಿ ಅವರು 16ನೇ ಬಾರಿಗೆ ಬೆಂಗಳೂರು ಕರಗ ಹೊರಲಿದ್ದಾರೆ. ಮುಜರಾಯಿ ಇಲಾಖೆಯು, ಧರ್ಮರಾಯ ಸ್ವಾಮಿ ದೇವಲಾಯದ ನೂತನ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನಿರ್ಧರಿಸಿದೆ.

ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಶಂಕ್ತ್ಯೋತ್ಸವ ನಡೆಯಲಿದೆ. ಮಾರ್ಚ 24 ರಂದು ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಮಾರ್ಚ್‌ 30 ರಂದು ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್‌ 1ರ ಮಧ್ಯರಾತ್ರಿ ಬೆಂಗಳೂರು ಶಕ್ತ್ಯೋತ್ಸವ ನಡೆಯಲಿದೆ.

ಬೆಂಗಳೂರು ಕರಗ ದಕ್ಷಿಣ ಭಾರತದ ಅತ್ಯಂತ ಪುರಾತನ ಮತ್ತು ವೈಶಿಷ್ಟ್ಯಪೂರ್ಣ ಹಬ್ಬಗಳಲ್ಲಿ ಒಂದಾಗಿದೆ. ಸುಮಾರು 8 ಶತಮಾನಗಳ ಪರಂಪರೆಯನ್ನು ಹೊಂದಿರುವ ಈ ಉತ್ಸವದಲ್ಲಿ, ದ್ರೌಪದಿ ದೇವಿಯನ್ನು ಆದಿಶಕ್ತಿಯ ರೂಪದಲ್ಲಿ ಆರಾಧಿಸಲಾಗುತ್ತದೆ. ಪ್ರತಿ ವರ್ಷ ಚೈತ್ರ ಮಾಸದ ಪೌರ್ಣಮಿಯ ಸಂದರ್ಭದಲ್ಲಿ ಬೆಂಗಳೂರು ಕರಗ ಉತ್ಸವ ಜರಗುತ್ತದೆ.

ಈ ಬಾರಿ ಮೈಸೂರು ದಸರಾ ಮಾದರಿಯಲ್ಲೇ ಕರಗ ಮಹೋತ್ಸವಕ್ಕೆ ಪ್ಲ್ಯಾನ್‌ ರೂಪಿಸಿದ್ದೇವೆ. ಈ ಬಾರಿ ಅನುದಾನದ ಬಳಕೆ ರಿಲೀಸ್‌ ಟೆಂಡರ್‌ ಜವಾಬ್ದಾರಿಯನ್ನು ಜಿಬಿಎ ವಹಿಸಲಿದೆ. ದೇಗುಲದ ಒಳಗಿನ ಸಿದ್ಧತೆ ಮಾತ್ರ ಮುಜರಾಯಿ ಇಲಾಖೆ ನೋಡಿಕೊಳ್ಳಲಿದೆ ಅಂತ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ ಎಂದು ವರದಿಯಾಗಿದೆ. ಇನ್ನು, ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕಾತಿಯೂ ನಡೆದಿದ್ದು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಚಿಂತನೆ ನಡೆದಿದೆ ಎಂದು ವ್ಯವಸ್ಥಾಪನಾ ಸಮಿತಿ ತಿಳಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.    

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *