GV Hallikeri High School Guruvandana Program to be Heald on march 1st in hosarittiಗುರುವಂದನಾ ಕಾರ್ಯಕ್ರಮ

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ |

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ‌

ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ತ್ರಿಮೂರ್ತಿಗಳ ಸ್ವರೂಪವೇ ಆಗಿರುವ ಗುರುವಿಗೆ ವಂದಿಸಲಾಗುತ್ತದೆ. ಗುರು-ಶಿಷ್ಯರ ಸಂಬಂಧ ಬಹಳ ಪವಿತ್ರವಾದದು. ಓರ್ವ ಶ್ರೇಷ್ಠ ಗುರು ವಿದ್ಯಾರ್ಥಿಯನ್ನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಗಿ ಬೆಳೆಯಲು ತನ್ನ ಸರ್ವಸ್ವವನ್ನೂ ಮುಡಿಪಾಗಿಡುತ್ತಾನೆ. ಇತಂಹ ಶ್ರೇಷ್ಠ ಗುರುವಿನ ಸಾಲಿಗೆ ಜಿ.ವಿ ಹಳ್ಳಿಕೇರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕರು ಸೇರ್ಪಡೆಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಹೊಸರಿತ್ತಿ ತಾಲೂಕಿನ ಜಿವಿ ಹಳ್ಳಿಕೇರಿ ಪ್ರೌಢಶಾಲೆಯಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಹಾಗೂ ನಿವೃತ್ತರಾಗುತ್ತಿರುವ ಶಿಕ್ಷಕರಿಗೆ, ಇದೇ ಶಾಲೆಯ 2000-01ನೇ ಬ್ಯಾಚಿನ ವಿದ್ಯಾರ್ಥಿಗಳು ಗೌರವ ಸಮರ್ಪಿಸುವ ಸಲುವಾಗಿ, “ಗುರುವಂದನಾ” ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ರವಿವಾರ (ಮಾರ್ಚ್‌ 1) ದಂದು ಹೊಸರಿತ್ತಿಯಲ್ಲಿರುವ ಶ್ರೀ ಗುದ್ಲೆಪ್ಪ ವೀರಪ್ಪ ಹಳ್ಳಿಕೇರಿ ಜನ್ಮ ಶತಮಾನೋತ್ಸವ ಸ್ಮಾರಕ ಸಭಾಭವನದಲ್ಲಿ “ಗುರುವಂದನಾ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ

ಈ ಗುರುವಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ. ಮ. ನಿ. ಪ್ರ ಗುದ್ದಲೀಶ್ವರ ಮಹಾಸ್ವಾಮಿಗಳು ವಹಿಸಿ, ಆಶಿರ್ವದಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೊಸರಿತ್ತಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ರಮೇಶ ಏಕಬೋಟೆ ವಹಿಸಲಿದ್ದಾರೆ. ನಿವೃತ್ತ ಜೀವಶಾಸ್ತ್ರ ಶಿಕ್ಷಕದಿ. ಸಣ್ಣಪ್ಪ ರಾಮಣ್ಣ ಕ್ಷೌರದ, ನಿವೃತ್ತ ಹಿಂದಿ ಶಿಕ್ಷಕಿ ಅನ್ನಪೂರ್ಣ ಬಸವಣ್ಣಪ್ಪ ಬೂದಿಹಾಳ, ನಿವೃತ್ತ ಕನ್ನಡ ಶಿಕ್ಷಕ ಮೃತ್ಯುಂಜಯ ಮಲ್ಲಪ್ಪ ವಗ್ಗಣ್ಣವರ, ನಿವೃತ್ತ ಮುಖ್ಯೋಪಾಧ್ಯಾಯಗುರುಸಿದ್ದಪ್ಪ ಶಿವಲಿಂಗಪ್ಪ ಪವಾಡಿ ಶೆಟ್ಟರ್, ನಿವೃತ್ತ ದೈಹಿಕ ಶಿಕ್ಷಕಬಸವರಾಜ್ ನಂಜಪ್ಪ ಕಿತ್ತೂರ್, ಮುಖ್ಯೋಪಾಧ್ಯಯ ಗದಿಗೆಪ್ಪ. ಪರಮಣ್ಣ, ಕೋರಿ, ಶಿಕ್ಷಕ ಯಲ್ಲಪ್ಪ, ದೇವೆಂದ್ರಪ್ಪ. ಮಣ್ಣಕ್ಕನವರ ಮತ್ತು ಶಿಕ್ಷಕ ನಾಗಪ್ಪ. ಬಸಪ್ಪ. ಹಾವನೂರು ಈ ಎಲ್ಲ ನಿವೃತ್ತ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಗೌರವ ಸಮರ್ಪಿಸಲಾಗುತ್ತಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *