Cet 2026 application correction last date march 30, also update RD numberಕೆಇಎ

ಬೆಂಗಳೂರು, ಫೆಬ್ರಬರಿ 26: ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UG-CET 2026) ಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಕಂಡುಬರುವ ದೋಷಗಳನ್ನು ಮಾರ್ಚ್ 30 ರವರೆಗೆ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ಹಿಂದೂ ವರದಿ ಮಾಡಿದೆ

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 27 ಆಗಿದ್ದು, ಶುಲ್ಕ ಪಾವತಿಸಲು ಮಾರ್ಚ್ 3 ಕೊನೆಯ ದಿನಾಂಕವಾಗಿದೆ. ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ತಿದ್ದುಪಡಿ ಮಾಡುವ ಅವಕಾಶ ಇರಲಿದೆ. ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅರ್ಜಿಯಲ್ಲಿ ತಿದ್ದುಪಡಿ ಮಾಡಿದ ನಂತರ Submit ಮಾಡಿದಾಗ ಮಾತ್ರ ನವೀಕರಿಸಿದ ವಿವರಗಳು ಸರ್ವರ್‌ನಲ್ಲಿ ಸಂಗ್ರಹವಾಗುತ್ತವೆ. ಆದ್ದರಿಂದ ಯಾವುದೇ ಬದಲಾವಣೆ ಮಾಡುವ ಮೊದಲು ಪೋಷಕರೊಂದಿಗೆ ಸಮಾಲೋಚನೆ ನಡೆಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಎಸ್‌ಸಿ ಅಭ್ಯರ್ಥಿಗಳಿಗೆ ಸೂಚನೆ

ಅನುಸೂಚಿತ ಜಾತಿ (SC) ಅಭ್ಯರ್ಥಿಗಳು ತಮ್ಮ ಒಳ ಮೀಸಲು ವರ್ಗ (ಕೆಟಗರಿ -ಎ, ಕೆಟಗರಿ -ಬಿ ಅಥವಾ ಕೆಟಗರಿ-ಸಿ) ಸೂಚಿಸುವಂತೆ ಸಂಬಂಧಿತ ತಹಶೀಲ್ದಾರ್ ಅವರಿಂದ ಜಾತಿ ಪ್ರಮಾಣಪತ್ರ ಪಡೆದು, ಅದರಲ್ಲಿರುವ RD ಸಂಖ್ಯೆಯನ್ನು ಪೋರ್ಟಲ್‌ನಲ್ಲಿ ತಿದ್ದುಪಡಿ ಮಾಡಿ ನಮೂದಿಸಬೇಕು. ಇದಕ್ಕೂ ಮಾರ್ಚ್ 30 ಅಂತಿಮ ದಿನಾಂಕವಾಗಿದೆ.

ಈವರೆಗೆ ಸುಮಾರು 40,000 ಎಸ್‌ಸಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರೂ, ಅವರಲ್ಲಿ 20,000 ಮಂದಿ ಮಾತ್ರ ಒಳ ಮೀಸಲು ವರ್ಗಕ್ಕೆ ಸಂಬಂಧಿಸಿದ RD ಸಂಖ್ಯೆಯನ್ನು ನಮೂದಿಸಿದ್ದಾರೆ. ಉಳಿದವರು ಸಾಮಾನ್ಯ ಎಸ್‌ಸಿ RD ಸಂಖ್ಯೆಯನ್ನು ಮಾತ್ರ ನಮೂದಿಸಿರುವುದಾಗಿ ತಿಳಿಸಲಾಗಿದೆ.

ಆದ್ದರಿಂದ ಒಳ ಮೀಸಲು ಪ್ರಮಾಣಪತ್ರವನ್ನು ಇನ್ನೂ ಪಡೆಯದ ಅಭ್ಯರ್ಥಿಗಳು ತಕ್ಷಣ ತಹಶೀಲ್ದಾರ್ ಕಚೇರಿಯಿಂದ ಪಡೆದು, ಹೊಸ RD ಸಂಖ್ಯೆಯನ್ನು ಅರ್ಜಿಯಲ್ಲಿ ನವೀಕರಿಸಬೇಕು. ಒಳ ಮೀಸಲು ವರ್ಗಕ್ಕೆ ಹೊಂದುವ RD ಸಂಖ್ಯೆಯನ್ನು ನಮೂದಿಸಿದ ಅಭ್ಯರ್ಥಿಗಳನ್ನಷ್ಟೇ ಸೀಟು ಹಂಚಿಕೆ ವೇಳೆ ಪರಿಗಣಿಸಲಾಗುವುದು ಎಂದು ತಿಳಿಸಲಾಗಿದೆ.

ನೀಟ್‌ ಕುರಿತು ಮಾಹಿತಿ

ವೈದ್ಯಕೀಯ, ದಂತ ಮತ್ತು ಆಯುಷ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಯಲ್ಲಿ ಪಡೆದ ಅಂಕಗಳನ್ನು ಮಾತ್ರ ಮಾನ್ಯಗೊಳಿಸಲಾಗುತ್ತದೆ. ಈ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುತ್ತದೆ. ಆದ್ದರಿಂದ ವೈದ್ಯಕೀಯ ಕೋರ್ಸ್‌ಗಳಿಗೆ ಆಸಕ್ತರು ಏನ್‌ಟಿಎಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.

ನೀಟ್‌ ಪರೀಕ್ಷೆಯನ್ನು ಎನ್‌ಟಿಎ ನಡೆಸಿದರೂ, ರಾಜ್ಯದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕೆಇಎ ಮೂಲಕವೇ ನಡೆಸಲಾಗುತ್ತದೆ. ಹೀಗಾಗಿ ನೀಟ್‌ಗೆ ಅರ್ಜಿ ಸಲ್ಲಿಸಿರುವವರು ಕರ್ನಾಟಕದಲ್ಲಿ ವೈದ್ಯಕೀಯ ಸೀಟು ಪಡೆಯಲು ಕೆಇಎಯಲ್ಲೂ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.

ನೀಟ್‌ ಫಲಿತಾಂಶ ಪ್ರಕಟವಾದ ಬಳಿಕ, ಅಭ್ಯರ್ಥಿಗಳಿಗೆ ತಮ್ಮ ನೀಟ್‌ ರೋಲ್ ಸಂಖ್ಯೆಯನ್ನು ಸಿಇಟಿ ಅರ್ಜಿಯೊಂದಿಗೆ ಲಿಂಕ್ ಮಾಡಲು ಅವಕಾಶ ನೀಡಲಾಗುತ್ತದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *