ನವದೆಹಲಿ, ಮಾರ್ಚ್ 30: ಲಷ್ಕರ್-ಎ-ತೈಬಾ (Lashkar-e-Taiba) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಬ್ಬೀರ್ ಅಹ್ಮದ್ ಲೋನ್‌ನನ್ನು (Shabbir Ahmed Lone) ದೆಹಲಿ (Delhi) ಗಡಿಭಾಗದ ಬಳಿ ದೆಹಲಿ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶಬ್ಬೀರ್ ಅಹ್ಮದ್ ಲೋನ್ ಭಾರತದಲ್ಲಿ ಹಲವು ದಾಳಿಗಳನ್ನು ರೂಪಿಸಿದ ಆರೋಪ ಹೊಂದಿದ್ದು, ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಿದ್ದನೆಂದು ಶಂಕಿಸಲಾಗಿದೆ. ಈ ಉಗ್ರನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದನು. ಬಾಂಗ್ಲಾದೇಶದಲ್ಲಿ ಹೊಸ ಉಗ್ರ ಜಾಲವನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಶಬ್ಬೀರ್ ಅಹ್ಮದ್ ಲೋನ್ ಯಾರು? ಶಬ್ಬೀರ್ ಅಹ್ಮದ್ ಲೋನ್ ಲಷ್ಕ್-ಎ-ತೈಬಾ ಉಗ್ರ ಸಂಘಟನೆಯ ಪ್ರಮುಖ ಹ್ಯಾಂಡ್ಲರ್‌ಗಳಲ್ಲಿ ಒಬ್ಬನಾಗಿದ್ದು, ಕಳೆದ ಕೆಲಕಾಲದಿಂದ ಬಾಂಗ್ಲಾದೇಶದಲ್ಲಿ ನೆಲೆಸಿ ಉಗ್ರ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರ ಮೂಲದವನಾದ ಅವನನ್ನು 2007ರಲ್ಲಿ ಉಗ್ರ ಚಟುವಟಿಕೆಗಳ ಆರೋಪದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಬಂಧನ ಹೇಗೆ? ಗುಪ್ತಚರ ಮಾಹಿತಿ ಸಿಕ್ಕ ನಂತರ, ಭದ್ರತಾ ಸಂಸ್ಥೆಗಳು ಸೂಕ್ಷ್ಮ ಯೋಜನೆ ರೂಪಿಸಿ ಬಲೆ ಬೀಸಿದವು. ಲೋನ್ ದೆಹಲಿ ಗಡಿಯನ್ನು ತಲುಪಿದ ತಕ್ಷಣದಲ್ಲೇ ಆತನನ್ನು ಸೆರೆಹಿಡಿಯಲಾಯಿತು. ಉಗ್ರ ಚಟುವಟಿಕೆಗೆ ಯುವಕರ ನೇಮಕ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ಮಾಹಿತಿ ಪ್ರಕಾರ, ಶಬ್ಬೀರ್ ಅಹ್ಮದ್ ಲೋನ್ ದೇಶದ ವಿವಿಧ ಭಾಗಗಳಲ್ಲಿ ಯುವಕರನ್ನು ಉಗ್ರ ಚಟುವಟಿಕೆಗಳಿಗೆ ನೇಮಕ ಮಾಡುತ್ತಿದ್ದನು. ದೆಹಲಿ, ಕೋಲ್ಕತ್ತಾ, ತಮಿಳುನಾಡು ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರನ್ನು ನೇಮಿಸಿಕೊಳ್ಳುತ್ತಿದ್ದನು. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವಂದತಿಗಳಿಗೆ ಕಿವಿಗೊಡಬೇಡಿ, ಸವಾಲನ್ನು ಒಟ್ಟಾಗಿ ಎದುರಿಸೋಣ: ಪ್ರಧಾನಿ ಮೋದಿ ಕರೆ ಮೊದಲ ಬಾರಿಗೆ ಡಿಜಿಟಲ್ ಮೂಲಕ ಜನಗಣತಿ: ಇದೇ ಏ. 1 ರಿಂದ ಆನ್ಲೈನ್ನಲ್ಲಿ ಮಾಹಿತಿ ಸಲ್ಲಿಕೆ ಆರಂಭ