Pm modi inaugurates Kolar mini helicopter manufacturing unit by virtualಏರ್‌ಬಸ್‌ H125, ಪ್ರಧಾನಿ ಮೋದಿ

ಕೋಲಾರ, ಫೆಬ್ರವರಿ 17: ದೇಶ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಇದೀಗ, ಮತ್ತೊಂದು ಹಿರಿಮೆ ಕರ್ನಾಟಕದ ಪಾಲಾಗಿದೆ. ಕೋಲಾರ (Kolar) ತಾಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿರುವ ಟಾಟಾ ಏರ್‌ಬಸ್‌ ಮಿನಿ ಹೆಲಿಕಾಪ್ಟರ್‌ ಅಂತಿಮ ಜೋಡಣಾ ಘಟಕವನ್ನು (Helicopter Final Assembly Line-FAL) ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ಮುಂಬೈನಿಂದ ವರ್ಚುವಲ್‌ ಮೂಲಕ ಉದ್ಘಾಟಿಸಿದ್ದಾರೆ.  

ಇದು ಭಾರತದ ಮೊದಲ ಖಾಸಗಿ ಹೆಲಿಕಾಪ್ಟರ್‌ ತಯಾರಿಕಾ ಘಟಕ ಇದಾಗಿದ್ದು, 2027ರಲ್ಲಿ ಮೊದಲ ಹೆಲಿಕಾಪ್ಟರ್‌ ಇಲ್ಲಿ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಭಾರತದ ಮೇಡ್‌ ಇನ್‌ ಇಂಡಿಯಾ ಅಭಿಯಾನಕ್ಕೆ ಮಹತ್ವದ ಹೆಜ್ಜೆಯಾಗಿದೆ.

ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ ಲಿಮಿಟೆಡ್‌ (TASL) ಮತ್ತು ಯುರೋಪಿಯನ್‌ ಏರೋಸ್ಪೇಸ್‌ ದೈತ್ಯ ಏರ್‌ಬಸ್‌ ಹೆಲಿಕಾಪ್ಟರ್ಸ್‌ ಸಂಸ್ಥೆಗಳು ಜೊತೆಗೂಡಿ ಈ  ಘಟನೆ ಸ್ಥಾಪನೆಯಾಗಿದೆ. ಈ ಘಟಕದಲ್ಲಿ ಏರ್‌ಬಸ್‌ H125 ಸಣ್ಣ ಮಟ್ಟದಲ್ಲಿ ಉಪಯೋಗವಾಗುವ ಹೆಲಿಕಾಪ್ಟರ್‌ಗಳು ತಯಾರಾಗುತ್ತವೆ.

ಇದನ್ನೂ ಓದಿ: ಕರ್ನಾಟಕ ರೈತನ ಎಐ ಆಧರಿತ ಕೃಷಿ: ₹214 ಕೋಟಿ ಹೂಡಿಕೆ! ಕೇಂದ್ರದಿಂದ ಆಹ್ವಾನ  

 ಈ ಹೆಲಿಕಾಪ್ಟರ್‌ ಉತ್ಪಾದಕಾ ಘಟಕದಿಂದ ಸಾವಿರಾರು ಜನರಿಗೆ ಉದ್ಯೋಗವಕಾಶಗಳು ದೊರೆಯಲಿದೆ. ಅಲ್ಲದೇ ಕೋಲಾರ ಜಿಲ್ಲೆಯ ಯುವಕರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಗಿಟ್ಟಿಸಲು ಅವಕಾಶ ಸಿಗುವ ನಿರೀಕ್ಷೆ ಇದೆ.

ಏನಿದು ಯೋಜನೆ

ಏರ್‌ಬಸ್‌ ಹೆಚ್‌ 125 (ಸಣ್ಣ ಹೆಲಿಕಾಪ್ಟರ್‌) ಇದು ವಿಶ್ವದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ. ಆರಂಭದಲ್ಲಿ ವರ್ಷಕ್ಕೆ 10 ಹೆಲಿಕಾಪ್ಟರ್‌ ತಯಾರಿ ಮಾಡುವ ಯೋಜನೆ ಹೊಂದಿದ್ದು, ಮುಂದಿನ 20 ವರ್ಷಗಳಲ್ಲಿ ಸುಮಾರು 500 ಹೆಲಿಕಾಪ್ಟರ್‌ ಉತ್ಪಾದನೆ ಮಾಡಲು ಘಟಕ ಸಜ್ಜಾಗಿದೆ. ಈ ಘಟಕವನ್ನು ಸುಮಾರು 16 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗಿದೆ.  

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *