ಬೇಸಿಗೆ ಕಾಲದಲ್ಲಿ ದೇಹದಲ್ಲಿ ಬಿಸಿಲು ಹೆಚ್ಚಾಗಿ ನಿರ್ಜಲೀಕರಣ, ಅಜೀರ್ಣ, ದೌರ್ಬಲ್ಯ ಹಾಗೂ ಚರ್ಮ ಸಮಸ್ಯೆಗಳಿಂದ ಅನೇಕರು ಬಳಲುತ್ತಾರೆ. ಇವುಗಳಿಂದ ದೂರವಾಗುವುದು ಹೇಗೆ? ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ? ಇಲ್ಲಿದೆ ಆಯುರ್ವೇದ ಟಿಪ್ಸ್ ನಿರ್ಜಲೀಕರಣ ಮತ್ತು ಅಜೀರ್ಣದಿಂದ ಪಾರಾಗಲು ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯಬೇಕು. ತೆಂಗಿನಕಾಯಿ ನೀರು, ಮಜ್ಜಿಗೆ, ನಿಂಬೆ ರಸ, ಬೆಲ್ಲದ ಪಾನಕ ಕುಡಿಯಬೇಕು. ಇವು ದೇಹಕ್ಕೆ ಶಕ್ತಿ ನೀಡುತ್ತವೆ. ಬೇಸಿಗೆಯಲ್ಲಿ ಊಟ ಹಗುರವಾಗಿರಲಿ. ಅನ್ನ, ಬೇಳೆ, ತರಕಾರಿ, ಸೌತೆಕಾಯಿ, ಕಲ್ಲಂಗಡಿ ಮುಂತಾದವುಗಳನ್ನು ಸೇವಿಸಬೇಕು. ಹೆಚ್ಚು ಎಣ್ಣೆ, ಕಾರ, ಕರಿದ ಆಹಾರ ಮತ್ತು ತಡರಾತ್ರಿ ಊಟ ಮಾಡುವುದನ್ನು ತಪ್ಪಿಸಬೇಕು. ಊಟದ ನಂತರ ಮಜ್ಜಿಗೆಗೆ ಜೀರಿಗೆ ಪುಡಿ ಹಾಕಿ ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ದೇಹವನ್ನು ತಂಪಾಗಿ ಇಟ್ಟುಕೊಳ್ಳುವುದು ಹೇಗೆ? ಬೇಸಿಗೆಗಾಲದಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಿರು ಬಿಸಿಲಿನಲ್ಲಿ ಅನವಶ್ಯಕವಾಗಿ ಹೊರಗಡೆ ತಿರುಗಾಡಬೇಡಿ. ಅನಿವಾರ್ಯವಿದ್ದರೆ ಮಾತ್ರ ಸಂಚರಿಸಿ. ಸಾಧ್ಯವಾದಷ್ಟು ಹತ್ತಿ ಬಟ್ಟೆ ಧರಿಸಬೇಕು. ಪುದೀನ, ಧನಿಯಾ, ಜೀರಿಗೆ ನೀರು ಹಾಗೂ ಚಂದನ ಲೇಪ ದೇಹಕ್ಕೆ ಶೀತಲತೆಯನ್ನು ನೀಡುತ್ತದೆ. ದಿನದಲ್ಲಿ ಅಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ರೋಗಗಳಿಂದ ರಕ್ಷಣೆ ಪಡೆಯುವುದು ಹೇಗೆ? ಬೇಸಿಗೆಯಲ್ಲಿ ಜಲದೋಷ, ಅತಿಸಾರ, ಚರ್ಮದ ಸೋಂಕುಗಳು ತಗಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಶುದ್ಧ ನೀರು ಮತ್ತು ತಾಜಾ ಆಹಾರ ಮಾತ್ರ ಸೇವಿಸಬೇಕು. ಹೊರಗಿನ ಕತ್ತರಿಸಿದ ಹಣ್ಣುಗಳು, ಬೀದಿ ಬದಿಯ ಆಹಾರ ಸೇವಿಸುವುದನ್ನು ತಪ್ಪಿಸುವುದು ಉತ್ತಮ. ಕೈಗಳನ್ನು ಸ್ವಚ್ಛವಾಗಿ ತೊಳೆಯುವ ಅಭ್ಯಾಸ ಬೆಳೆಸಬೇಕು. ಮನೆ ಮದ್ದುಗಳು ಪುದೀನ-ಧನಿಯಾ ರಸ, ಸೌತೆಕಾಯಿ ರಸ, ಬೆಲ್ಲ-ಜೀರಿಗೆ ಪಾನಕ ದೇಹವನ್ನು ಶೀತಲಗೊಳಿಸುತ್ತವೆ. ಸ್ವಲ್ಪ ಶುಂಠಿ ಮತ್ತು ಜೀರಿಗೆ ಸೇವನೆ ಅಜೀರ್ಣ ಕಡಿಮೆ ಮಾಡುತ್ತದೆ. ಹಗಲು ನಿದ್ರೆ ಮಾಡಬಾರದು. ಈ ಜೀವನಶೈಲಿ ಪಾಲಿಸಿದರೆ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರ ಪ್ರಯೋಜನ ತಿಳಿಯಿರಿ, ಆಯುರ್ವೇದ ಹೆಲ್ತ ಟಿಪ್ಸ್