ನವದೆಹಲಿ, ಫೆಬ್ರುವರಿ 18: ರಾಷ್ಟ್ರ ರಾಜಧಾನಿಯ ಭಾರತ್ ಮಂಟಪಂನಲ್ಲಿಸೋಮವಾರದಿಂದ ಆರಂಭವಾಗಿರುವಎಐ ಇಂಪ್ಯಾಕ್ಟ್ ಸಮಿಟ್ (AI Impact Summit) ಆರಂಭಗೊಂಡಿದ್ದು ಜಗತ್ತಿನ ಮೂಲೆಮೂಲೆಯ ಜನರ ಜೀವನವನ್ನು ಎಐ ಹೇಗೆ ಸುಧಾರಿಸಬಹುದು ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಈ ನಡುವೆ ಭಾರತ ಒಂದು ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಂಡಿಯಾ-AI ಮಿಷನ್ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ಇಂಟೆಲ್ ಇಂಡಿಯಾ ಸಹಯೋಗದೊಂದಿಗೆ “24 ಗಂಟೆಗಳಲ್ಲಿ ಎಐ ಜವಾಬ್ದಾರಿಯ ಅಭಿಯಾನಕ್ಕಾಗಿ ಸ್ವೀಕರಿಸಿದ ಅತಿ ಹೆಚ್ಚು ಪ್ರತಿಜ್ಞೆಗಳು” ಎಂಬ ಶೀರ್ಷಿಕೆಯಡಿ ಅಧಿಕೃತವಾಗಿ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣಪತ್ರವನ್ನು ಸ್ವೀಕರಿಸಿದರು. ಈ ಅಭಿಯಾನದಲ್ಲಿ ವಿದ್ಯಾರ್ಥಿಗಳಿಂದ ವೃತ್ತಿಪರರವರೆಗೆ, ನಾಗರಿಕರು ಜವಾಬ್ದಾರಿಯುತವಾಗಿ ಎಐ ಬಳಸುವುದಾಗಿ ಪ್ರತಿಜ್ಞೆ ಮಾಡಿದರು. ಮೊದಲ ದಿನವೇ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಸಮಿಟ್ನಲ್ಲಿ ಗಮನ ಸೆಳೆದ ಸ್ಟಾರ್ಟಪ್ ಸನಾತನ ಸ್ಟಾರ್ಟಪ್ ಸನಾತನ ಎನ್ನುವ ಬೆಂಗಳೂರು ಮೂಲದ ಸಂಸ್ಥೆಯು ಭಾರತದ ಸಾಂಸ್ಕೃತಿಕ ಪರಂಪರೆ ರಕ್ಷಿಸಲು ಎಐ ಅಳವಡಿಕೆ ಮಾಡುತ್ತಿದೆ. ಇದೂ ಕೂಡ ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ಗಮನ ಸೆಳೆದ ಆವಿಷ್ಕಾರವಾಗಿದೆ. ಇದನ್ನೂ ಓದಿ: ಕರ್ನಾಟಕ ರೈತನ ಎಐ ಆಧರಿತ ಕೃಷಿ: ₹214 ಕೋಟಿ ಹೂಡಿಕೆ! ಕೇಂದ್ರದಿಂದ ಆಹ್ವಾನ ಹಾಗೆಯೇ, ತಾರಕರಾಮ್ ಮಾರಮ್ ನೇತೃತ್ವದ ವಿಶನ್ ಡಿಜಿಟಲ್ ಇಂಡಿಯಾದಿಂದ ಭಾರತದ ಮೊದಲ ಎಐ ಟ್ರೈನರ್ ಮೆಷೀನ್ ಅನಾವರಣಗೊಂಡಿದೆ. ಇಂಟೆಲ್ ನೆರವಿನಿಂದ ನಿರ್ಮಿಸಲಅದ ಎಐ ಲ್ಯಾಬ್ ಇದಾಗಿದೆ. ಅಗ್ನೀವ ಮತ್ತು ಆದಿತ್ಯ ಎನ್ನುವ ಯುವ ವಿದ್ಯಾರ್ಥಿಗಳು ಸ್ಥಾಪಿಸಿದ ಡ್ರುಬ್ಲೆಟ್ ಇನ್ನೋವೇಶನ್ ಪ್ರೈ ಲಿ ಸಂಸ್ಥೆಯ ರೋಬೋಟಿಕ್ಸ್ ತಂತ್ರಜ್ಞಾನ, ಸರ್ವಮ್ ಎಐನ ಭಾರತೀಯ ಭಾಷೆಗಳ ಎಐ ಮಾಡಲ್ಗಳು, ರಿಲಾಯನ್ಸ್ ಜಿಯೋದ ವಿವಿಧ ಎಐ ಆವಿಷ್ಕಾರಗಳು ಹೀಗೆ ನೂರಾರು ಭಾರತೀಯರ ಎಐ ಸಾಧನೆಗಳು ಸಮಿಟ್ನಲ್ಲಿ ಅನಾವರಣಗೊಂಡಿವೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ದೇಶ ಹಸಿರು ಹೈಡ್ರೋಜನ್ ಬೆಲೆ ನಿಗದಿಯಲ್ಲಿ ಜಾಗತಿಕ ಮಾನದಂಡವನ್ನು ಸ್ಥಾಪಿಸಿದೆ: ಜೋಶಿ ಜಾಗತಿಕ ಸಾಮಾನ್ಯ ಒಳಿತಿಗಾಗಿ ಎಐ ಎಂಬ ಸಾಮೂಹಿಕ ಸಂಕಲ್ಪವನ್ನು ನಾವು ಅಭಿವೃದ್ಧಿಪಡಿಸಬೇಕು: ಮೋದಿ