ಕನ್ನಡ ಸೇರಿದಂತೆ ವಿವಿಧ ಭಾಷೆಗಲ್ಲಿ ಅಬ್ಬರಿಸಲು ಸಜ್ಜಾಗಿರಿವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರ ಈಗಾಗಲೇ ಸುಮಾರು ಇಂಟ್ರೊಡಕ್ಷನ್ ತುಣುಕುಗಳೊಂದಿಗೆ ಟೀಸರ್ ಕೂಡ ಬಿಡಿಗಡೆ ಮಾಡಿ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದೆ. ಯಶ್ ಹುಟ್ಟುಹಬ್ಬದಂದು ಬಿಡಿಗಡೆ ಯಾಗಿದ್ದ ರಾಯ (ಯಶ್) ಇಂಟ್ರೊಡಕ್ಷನ್ ಅದ್ದೂರಿ ಸದ್ದು ಮಾಡಿ ಸಾಮಾಜಿಕ ಜಾಲತಾಣಗಲ್ಲಿ ಟ್ರೊಲ್ ಗಳಿಗೆ ಗುರಿಯಾಗಿತ್ತು. ಇದಾದ ನಂತರ ಇತ್ತೀಚಿಗೆ ಬಿಡುಗಡೆ ಆದ ಟೀಸರ್ ಕೂಡ ಅಷ್ಟೇ ಜೋರಾಗಿ ವೀಕ್ಷಕರ ಗಮನ ಸೆಳೆದಿದೆ. ಬಹುತಾರಾಗಣದ ಬಹುನಿರೀಕ್ಷಿತ ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ ಇನ್ನೊಂದು ಬಹು ಮುಖ್ಯವಾದ ಅಪ್ಡೇಟ್ ನೀಡಿದ್ದು ಮ್ಯೂಸಿಕ್ ನಲ್ಲೂ ಕೂಡ ಕನ್ನಡದ ಮಾಸ್ ಮ್ಯೂಸಿಕ್ ಮೇಕರ್ ರವಿ ಬಸ್ರೂರ್ ಸೇರಿದಂತೆ ಬಹು ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಟೀಸರ್ ಮತ್ತು ಸಣ್ಣ ತುಣುಕುಗಳೇ ಇಷ್ಟು ಸಡ್ಡು ಮಾಡುತ್ತಿರುವಾಗ ಚಿತ್ರದಲ್ಲಿ ಬರುವ ಎಲ್ಲ ಹಾಡುಗಳ ಅಬ್ಬರವೂ ಅಷ್ಟೇ ಜೋರಾಗಿರಲಿದೆ. ದೇಶದ ಅತ್ಯುತ್ತಮ ಮ್ಯೂಸಿಕ್ ಡೈರೆಕ್ಟರ್ ಗಳಾದ ರವಿ ಬಸರೂರ್, ವಿಶಾಲ್ ಮಿಶ್ರ ಹಾಗು ತಾನಿಷ್ಕ್ ಬಾಗ್ಚಿ ಚಿತ್ರದ ಹಾಡುಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ 6 ಹಾಡುಗಳು ಇರಲಿದ್ದು, ಚಿತ್ರದ ಹಿನ್ನಲೆ ಸಂಗೀತ ಮತ್ತು ಒಂದು ಹಾಡಿಗೆ ರವಿ ಬಸ್ರೂರ್ ಮ್ಯೂಸಿಕ್ ನೀಡಿದ್ದು, ನಾಲ್ಕು ಹಾಡುಗಳಿಗೆ ಹಿನ್ನೆಲೆ ಸಂಗೀತ ನೀಡುವ ಜವಾಬ್ದಾರಿ ವಿಶಾಲ್ ಮಿಶ್ರ ತೆಗೆದುಕೊಂಡಿದ್ದಾರೆ. ಹಾಗೆಯೇ ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾಹ್ (ಹಿಂದಿಯ ‘ಸಯ್ಯಾರ’ ಚಿತ್ರದ ಮ್ಯೂಸಿಕ್ ಡೈರೆಕ್ಟರ್) ಸಹಾಯದಿಂದ ತಾನಿಷ್ ಬಾಗ್ನಿ ಒಂದು ಹಾಡನ್ನು ಸಂಯೋಜನೆ ಮಾಡಿದ್ದಾರೆ ಎನ್ನಲಾಗುತ್ತುದೆ. ಒಟ್ಟಾರೆ ಚಿತ್ರ ತಂಡ ಕಥೆ ಜೊತೆಗೆ ಮ್ಯೂಸಿಕಲ್ ಹಿಟ್ ಕೂಡ ಮಾಡುವಲ್ಲಿ ಭರ್ಜರಿ ತಯಾರಿ ನಡೆಸಿದೆ. ಯಾರಿಗೆ ಮ್ಯೂಸಿಕ್ ಟಾಕ್ಸಿಕ್ ರೈಟ್ಸ್ ? ಇಷ್ಟೆಲ್ಲಾ ತಯಾರಿ ನಡೆಸಿರಿವ ಚಿತ್ರ ತಂಡ ಅತಿ ದೊಡ್ಡ ಮೊತ್ತಕ್ಕೆ ತನ್ನ ಹಾಡುಗಳ ಹಕ್ಕನ್ನು (ಮ್ಯೂಸಿಕ್ ರೈಟ್ಸ್) ಝೀ ಮ್ಯೂಸಿಕ್ ಕಂಪನಿ ಸಂಸ್ಥೆಗೆ ನೀಡಿದೆ. ಈ ಒಪ್ಪಂದವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೂ ಅನ್ವಯವಾಗುತ್ತದೆ. ಈ ಬಗ್ಗೆ ಸಿನಿಮಾ ನಿರ್ದೇಶಕಿ ಗೀತು ಮೋಹನ್ ದಾಸ್ ಮಾಹಿತಿ ಹಂಚಿಕೊಂಡಿದ್ದು ಆದಷ್ಟು ಬೇಗ ಹಾಡುಗಳನ್ನು ವಿಕ್ಷಕರ ಮುಂದೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಝೀ ಮ್ಯೂಸಿಕ್ ಕಂಪನಿಯ ಬಿಸಿನೆಸ್ ಹೆಡ್ ಆಗಿರುವ ಸುಜೇಶ್ ಪರೇಖ್ ಹೇಳುವಂತೆ ಚಿತ್ರದ ಹಾಡುಗಳು ವೈವಿಧ್ಯಮಯ ಅನುಭವ ನೀಡಲಿದ್ದು ಕಥೆಯ ತೀವ್ರತೆ ಮತ್ತು ಭಾವನಾತ್ಮಕ ಕ್ಷಣಗಳನ್ನು ಒತ್ತಿಹೇಳವಲ್ಲಿ ಬಹುಮುಖ್ಯ ಪಾತ್ರ ವಹಿಸಲಿವೆ. ಇನ್ನು ಟಿವಿ ಮತ್ತು ಓಟಿಟಿ (OTT) ರೈಟ್ಸ್ ಬಗ್ಗೆ ಮಾಹಿತಿ ಇಲ್ಲದಿರುವ ಕಾರಣ, ಕುತೂಹಲ ಹಾಗೆ ಉಳಿದಿದೆ. ಈ ಬಗ್ಗೆ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್, ಕೆವಿಏನ್ (KVN) ಪ್ರೊಡಕ್ಷನ್ ತಂಡ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ತಂಡ ಮಾತುಕತೆ ನಡೆಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಒಟ್ಟಾರೆಯಾಗಿ ಅದ್ದೂರಿ ತಾರಾಗಣ ಹೊಂದಿರುವ ಟಾಕ್ಸಿಕ್ ಚಿತ್ರ ಬೆಳ್ಳಿ ಪರದೆಯಲ್ಲಿ ಮಾತ್ರವಲ್ಲದೆ ಟಿವಿ ಮತ್ತು ಓಟಿಟಿ (OTT) ಗಳಲ್ಲೂ ಧೂಳೆಬ್ಬಿಸಲು ಸಜ್ಜಾಗಿದೆ. Post navigation ಜೀ ಕಿರುಚಿತ್ರ ಸ್ಪರ್ಧೆ 2026: ವಿಜೇತರಿಗೆ 3 ಲಕ್ಷ ರೂ. ಬಹುಮಾನ ಅಭಿಮತ: RSSನ ಪರ ಮತ್ತು ವಿರೋಧಿಗಳು ನೋಡಲೇಬೇಕಾದ ಚಿತ್ರ ಶತಕ್